Wednesday , January 24 2018
Home / News NOW / ಶವವಾಗಿದ್ದ ಮಹಿಳೆ ಮತ್ತೆ ಬದುಕಿದ್ದರು…!
Buy Bitcoin at CEX.IO

ಶವವಾಗಿದ್ದ ಮಹಿಳೆ ಮತ್ತೆ ಬದುಕಿದ್ದರು…!

ಇಡುಕ್ಕಿ (ಕೇರಳ) : ಇದು ವಿಚಿತ್ರವಾದರೂ ಸತ್ಯ. ಆ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಕೊಂಡು ಎಲ್ಲರೂ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, 90 ನಿಮಿಷಗಳಷ್ಟು ಕಾಲ ‘ಶವ’ ಮೊಬೈಲ್ ಫ್ರೀಸರ್​​​ನಲ್ಲಿತ್ತು. ಅಷ್ಟರಲ್ಲಿ ಅಚ್ಚರಿ ನಡೆದು ಹೋಗಿತ್ತು. ಆದರೂ, ಈ ಸಂಭ್ರಮ ಹೆಚ್ಚು ಕಾಲ ಇರಲಿಲ್ಲ…!

ಇದು ನಡೆದದ್ದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ. 51 ವರ್ಷದ ದಿನಗೂಲಿ ಕೆಲಸಗಾರರಾದ ರತ್ನಮ್ಮ ಎಂಬುವವರು ಕಳೆದ ಮೂರು ತಿಂಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ತಮಿಳುನಾಡಿನ ಮಧುರೈನ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ರತ್ಮಮ್ಮ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಇನ್ನು ಇವರನ್ನು ಉಳಿಸುವುದು ಕಷ್ಟ ಎಂದು ಹೇಳಿದ ವೈದ್ಯರು ಇವರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅದರಂತೆ ರತ್ನಮ್ಮ ಅವರನ್ನು ಸಂಬಂಧಿಕರು ಬುಧವಾರ ಮುಂಜಾನೆ 3 ಗಂಟೆಯಷ್ಟೊತ್ತಿಗೆ ಮನೆಗೆ ಕರೆ ತಂದಿದ್ದರು.

ಆದರೆ, ಇಂದು ಮುಂಜಾನೆ ಎಲ್ಲರೂ ಎದ್ದು ನೋಡಿದಾಗ ರತ್ನಮ್ಮ ದೇಹದಲ್ಲಿ ಯಾವುದೇ ಚಲನೆಗಳು ಇರಲಿಲ್ಲ. ಹೀಗಾಗಿ, ಇವರು ಮೃತಪಟ್ಟಿದ್ದಾರೆ ಎಂಬ ನಿರ್ಧಾರಕ್ಕೆ ಎಲ್ಲರೂ ಬಂದರು. ವೈದ್ಯರನ್ನೂ ಸಂಪರ್ಕಿಸದೆಯೇ ಸಂಬಂಧಿಕರು ಇವರು ಮೃತಪಟ್ಟಿದ್ದಾರೆ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದರು. ಶವವನ್ನು ಇಡುವ ಫ್ರೀಜರ್​ನಲ್ಲಿ ರತ್ನಮ್ಮರನ್ನು ಮಲಗಿಸಲಾಗಿತ್ತು. ಎಲ್ಲರೂ ಬಂದು ಇವರ ಅಂತಿಮ ದರ್ಶನ ಪಡೆಯುತ್ತಿದ್ದರು. ಶೃದ್ಧಾಂಜಲಿಯ ಫ್ಲೆಕ್ಸ್​ಗಳೂ ಅಲ್ಲಲ್ಲಿ ಇತ್ತು.

ಆದರೆ, ಈ ಸಾವಿನ ಬಗ್ಗೆ ಸ್ಥಳೀಯರಿಗೆ ಅನುಮಾನ ಇತ್ತು. ಯಾಕೆಂದರೆ, ರತ್ನಮ್ಮರನ್ನು ಮನೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಅವರು ಉಸಿರಾಡುತ್ತಿದ್ದರು. ಅಲ್ಲದೆ, ಅವರ ದೇಹದಲ್ಲಿ ಚಲನೆ ಇರುವುದು ಕೂಡಾ ನೆರೆ ಹೊರೆಯವರು ಕಂಡಿದ್ದರು. ಹೀಗಾಗಿ, ತಕ್ಷಣ ಸ್ಥಳೀಯರು ವಿಷಯವನ್ನು ಸ್ಥಳೀಯ ಪೊಲೀಸರಿಗೆ ಮುಟ್ಟಿಸಿದರು. ಸ್ಥಳಕ್ಕೆ ಪೊಲೀಸರು ತಕ್ಷಣ ಬಂದರು. ಈ ವೇಳೆ, ರತ್ಮಮ್ಮ ಬದುಕಿರುವ ವಿಷಯ ಪೊಲೀಸರಿಗೂ ಗೊತ್ತಾಗಿತ್ತು. ಯಾಕೆಂದರೆ, ಅವರ ದೇಹದಲ್ಲಿ ಸಣ್ಣಗೆ ಚಲನೆ ಇತ್ತು. ಆದರೆ, ಅವರು ಬದುಕಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಮನೆಯವರು ಸಿದ್ಧರಿರಲಿಲ್ಲ. ಆದರೂ, ಪೊಲೀಸರ ಮಧ್ಯ ಪ್ರವೇಶದಿಂದ ರತ್ನಮ್ಮರನ್ನು ತಕ್ಷಣ  ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತವೂ ಆಸ್ಪತ್ರೆಗೆ ಆದೇಶ ನೀಡಿತ್ತು. ಆದರೆ, ಇಲ್ಲೂ ಇವರ ಸ್ಥಿತಿ ಗಂಭೀರವಾಗಿಯೇ ಇತ್ತು. ಬಳಿಕ ಬುಧವಾರ ಸಂಜೆ 6.30ಕ್ಕೆ ಇವರು ಕೊನೆಯುಸಿರೆಳೆದರು.

ಆದರೆ, ಈ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ. ಮನೆಯವರು ಉದ್ದೇಶಪೂರ್ವಕವಾಗಿಯೂ ಈ ರೀತಿ ವರ್ತಿಸಿಲ್ಲ. ವೈದ್ಯರ ಸಲಹೆ ಪಡೆಯದೆಯೇ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿತ್ತು.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!