Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೊಂದು ಕ್ರಿಕೆಟ್​ – ಬಾಲಿವುಡ್ ಪ್ರೇಮ್​ ಕಹಾನಿ : ಹಾರ್ದಿಕ್ ಪಾಂಡ್ಯ ಮನ ಕದ್ದ ಆ ಚೋಪ್ರಾ ಯಾರು ಗೊತ್ತಾ…?

ಮತ್ತೊಂದು ಕ್ರಿಕೆಟ್​ – ಬಾಲಿವುಡ್ ಪ್ರೇಮ್​ ಕಹಾನಿ : ಹಾರ್ದಿಕ್ ಪಾಂಡ್ಯ ಮನ ಕದ್ದ ಆ ಚೋಪ್ರಾ ಯಾರು ಗೊತ್ತಾ…?

ಮುಂಬೈ : ನಮ್ಮಲ್ಲಿ ಕ್ರಿಕೆಟ್ ಮತ್ತು ಬಾಲಿವುಡ್ ಲೋಕದ ಪ್ರೇಮ ಕತೆ ಹೊಸತಲ್ಲ. ಈಗಾಗಲೇ ಈ ಲಿಸ್ಟ್​ನಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲಿನ ತಾಜಾ ತಾಜಾ ಉದಾಹರಣೆ. ಈಗ ಇದೇ ಸಾಲಿಗೆ ಮತ್ತೊಂದು ಜೋಡಿ ಸೇರುತ್ತಿದೆ. ಅದೇ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ…

ಪರಿಣಿತಿ ಮತ್ತು ಹಾರ್ದಿಕ್ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಕೆಲವೊಂದು ಸನ್ನಿವೇಶಗಳು ಈ ಸುದ್ದಿಗೆ ಇನ್ನೊಂದಷ್ಟು ಪುಷ್ಟಿ ನೀಡುತ್ತಲೇ ಇರುತ್ತವೆ. ಈ ನಡುವೆ, ಹಾರ್ದಿಕ್ ಮತ್ತು ಪರಿಣಿತಿ ನಡುವೆ ನಡೆದ ಟ್ವಿಟರ್ ಚಾಟಿಂಗ್ ಇವರಿಬ್ಬರ ಪ್ರೇಮಕತೆಗೆ ಇನ್ನಷ್ಟು ಇಂಧನ ನೀಡಿದೆ.


ಮೊದಲು ಸೈಕಲ್​ವೊಂದರ ಫೋಟೋ ಹಾಕಿಕೊಂಡು ಪರಿಣಿತಿ ಒಂದು ಟ್ವಿಟ್ ಮಾಡಿದ್ದರು. ಈ ಟ್ವೀಟ್​ನ ಬಹಳ ಗಮನ ಸೆಳೆದಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ಕೊಟ್ಟವರು ಹಾರ್ದಿಕ್ ಪಾಂಡ್ಯ. ಹೀಗೆ ಚಾಟ್​ ತುಂಬಾ ಮುಂದುವರಿದಿತ್ತು…


ಈ ಚಾಟಿಂಗ್ ನೋಡಿ ಟ್ವಿಟರ್ ಫಾಲೋವರ್ಸ್​​​ ಹಾರ್ದಿಕ್​ರನ್ನು ಕಿಚಾಯಿಸೋದಕ್ಕೆ ಶುರು ಮಾಡಿದ್ರು.. ಆಟದ ಮೇಲೆ ಗಮನ ಕೇಂದ್ರೀಕರಿಸುವಂತೆ ಕಿವಿ ಮಾತೂ ಹೇಳಿದ್ದಾರೆ.


ಇನ್ನು, ಕೆಲವರು ಇದನ್ನು ಮಾರ್ಕೆಟಿಂಗ್ ಗಿಮಿಕ್ ಎಂದೂ ಹೇಳಿದ್ದರು.


ಇಷ್ಟೆಲ್ಲಾ ಆಗುವಾಗ ಮತ್ತೆ ಟ್ವಿಟರ್​ನಲ್ಲಿ ವೀಡಿಯೋ ಹಾಕಿರುವ ಪರಿಣಿತಿ, ಹಾರ್ದಿಕ್ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದೂ ಹೇಳಿದ್ದಾರೆ. ಆದರೆ, ಪರಿಣಿತಿ ಈ ಸ್ಪಷ್ಟನೆ ರೂಪದ ವೀಡಿಯೋ ಹಾಕಿದರೂ ಫಾಲೋವರ್ಸ್​ಗಳಿಗೆ ಮಾತ್ರ ಸಮಾಧಾನ ತಂದಂತೆ ಕಾಣುತ್ತಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!