Saturday , December 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ತೆರೆ ಮೇಲೂ ಗಂಡ ಹೆಂಡತಿ ಆಗಲಿದ್ದಾರೆ ಅಭಿಷೇಕ್​ ಐಶ್ವರ್ಯ

ತೆರೆ ಮೇಲೂ ಗಂಡ ಹೆಂಡತಿ ಆಗಲಿದ್ದಾರೆ ಅಭಿಷೇಕ್​ ಐಶ್ವರ್ಯ

ಮುಂಬೈ : ಬಿಗ್​ ಬಿ ಅಮಿತಾಭ್​ ಪುತ್ರ ಅಭಿಷೇಕ್ ಮತ್ತು ಸೊಸೆ ಐಶ್ವರ್ಯ ಮತ್ತೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ ನಿರ್ಮಾಣದ ಬಹುನಿರೀಕ್ಷಿತ ಚಿತ್ರದಲ್ಲಿ ಈ ದಂಪತಿ ಒಂದಾಗುತ್ತಿದ್ದಾರೆ ಎಂಬ ಮಾತು ಬಿ ಟೌನ್​ ಅಂಗಳದಲ್ಲಿ ಬಲು ಜೋರಾಗಿಯೇ ಕೇಳಿ ಬರುತ್ತಿದೆ…

ಗುಸ್ಸಾಕಿಯಾನ್​​ ಎಂಬ ಚಿತ್ರ ಅಭಿಷೇಕ್ ಮತ್ತು ಐಶ್ವರ್ಯರನ್ನು ಒಂದು ಮಾಡುತ್ತಿದೆ…  ಸಂಜಯ್​ ಲೀಲಾ ಬನ್ಸಾಲಿ ಅವರು ಕೂಡಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಈ ಪಾತ್ರಕ್ಕೆ ಇವರಿಬ್ಬರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗೆ ನೋಡಿದರೆ ಈ ಹಿಂದೆ ಈ ಚಿತ್ರದ ನಾಯಕಿಯ ಪಾತ್ರಕ್ಕೆ ಇದ್ದ ಆಯ್ಕೆ ಪ್ರಿಯಾಂಕಾ ಚೋಪ್ರಾ. ಆದರೆ, ಪ್ರಿಯಾಂಕಾ ಚೋಪ್ರಾರನ್ನು ಹಿಂದಿಕ್ಕಿ ಐಶ್ವರ್ಯ ಚಿತ್ರದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರು ಸಾಹಿತಿಗಳ ನಿಜ ಪ್ರೇಮ ಕತೆ ಇದು. ಕವಿ ಸಹೀರ್​​ ಲೂದಿಯಾನ್ವಿ ಮತ್ತು ಕಾದಂಬರಿಕಾರರಾದ ಅಮೃತ ಪ್ರೀತಮ್​ ಅವರ ನಿಜ ಜೀವನದ ಕತೆ ಇದಂತೆ.

ಜೂನಿಯರ್ ಬಚ್ಚನ್​ ಈ ಚಿತ್ರದ ಲೂದಿಯಾನ್ವಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು, ಐಶ್ವರ್ಯರಿಗೆ ಅಮೃತಾ ಪ್ರೀತಮ್ ಪಾತ್ರ… ಇದೇ ಮೊದಲ ಬಾರಿಗೆ ಈ ಜೋಡಿ ತೆರೆ ಮೇಲೆ ಒಂದಾಗುತ್ತಿರುವುದಲ್ಲ. ಇದು ಐಶ್ವರ್ಯ ಮತ್ತು ಅಭಿಷೇಕ್ ಅಭಿನಯದ 9ನೇ ಚಿತ್ರ…! ಈ ಹಿಂದೆ ಐಶ್ ಮತ್ತು ಅಭಿ ದಾಯಿ ಅಕ್ಷರ್​ ಪ್ರೇಮ್​ ಕೀ, ಕುಚ್​ ನಾ ಕಹೋ, ಬಂಟಿ ಔರ್ ಬಬ್ಲಿ, ಉಮ್ರೋ ಜಾನ್​​, ಧೂಮ್​ 2, ಗುರು, ಸರ್ಕಾರ್​ ರಾಜ್​, ರಾವಣ್​ ಹೀಗೆ ಒಂದಷ್ಟು ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು…

ಆಫ್​ ಸ್ಕ್ರೀನ್​ ಜೋಡಿಯನ್ನು ಜನ ಆನ್ ಸ್ಕ್ರೀನ್​ನಲ್ಲೂ ಮೆಚ್ಚಿಕೊಂಡಿದ್ದರು. ಹೀಗಾಗಿ, ಈ ಚಿತ್ರವನ್ನೂ ಜನ ಇದೇ ರೀತಿ ಸ್ವಾಗತಿಸುತ್ತಾರೆ ಎಂಬ ನಿರೀಕ್ಷೆಯೂ ಚಿತ್ರತಂಡಕ್ಕಿದೆ… ಚಿತ್ರದ ಸಿದ್ಧತೆಯಲ್ಲಿ ಅಭಿಷೇಕ್​ ಈಗಾಗಲೇ ತೊಡಗಿಕೊಂಡಿದ್ದಾರಂತೆ. ಕವಿಯ ಲುಕ್​ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ 12 ಕೇಜಿಯಷ್ಟು ತೂಕವನ್ನೂ ಇಳಿಸಿಕೊಂಡಿದ್ದಾರಂತೆ ಅಭಿಷೇಕ್​​​.. ಈ ಚಿತ್ರದ ನಿರ್ದೇಶಕ ಜಸ್ಮೀತ್​ ರೀನ್​… ಈ ಚಿತ್ರದ ಮೂಲಕ ಜಸ್ಮೀತ್​​​ ನಿರ್ದೇಶಕರಾಗುತ್ತಿದ್ದಾರೆ… ಮುಂದಿನ ವರ್ಷದಾರಂಭದಲ್ಲಿ ಈ ಚಿತ್ರ ಟೇಕಾಫ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!