Thursday , October 18 2018
ಕೇಳ್ರಪ್ಪೋ ಕೇಳಿ
Home / Gulf News / ಏಕಾಂಕಿಯಾಗಿ ವಿಮಾನ ಚಲಾಯಿಸಿ ದಾಖಲೆ ಬರೆದ ಶಾರ್ಜಾದ 14ರ ಪೋರ

ಏಕಾಂಕಿಯಾಗಿ ವಿಮಾನ ಚಲಾಯಿಸಿ ದಾಖಲೆ ಬರೆದ ಶಾರ್ಜಾದ 14ರ ಪೋರ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಶಾರ್ಜಾ : ಶಾರ್ಜಾದ 14 ರ ಪೋರ ವಿಮಾನ ಚಲಾಯಿಸಿ ದಾಖಲೆ ಬರೆದಿದ್ದಾನೆ. ದಾಖಲೆಗಿಂತಲೂ ಈ ಹುಡುಗ ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ. ಆಗಸ್ಟ್ 30 ರಂದು ಮನ್ಸೂರ್ ಎಂಬ ಈ ಬಾಲಕ ವಿಮಾನ ಚಲಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈ ಮೂಲಕ ವಿಶ್ವದಲ್ಲಿಯೇ ಅತೀ ಕಿರಿಯ ಪೈಲಟ್ ಎಂಬ ಕೀರ್ತಿಗೂ ಮನ್ಸೂರ್ ಪಾತ್ರನಾಗಿದ್ದಾನೆ.

ಶಾರ್ಜಾದ ಡಿಪಿಎಸ್ನ ವಿದ್ಯಾರ್ಥಿ ಮನ್ಸೂರ್ ಅನೀಸ್​ಗೆ ಚಿಕ್ಕಂದಿನಿಂದಲೂ ಈ ಬಗ್ಗೆ ಆಸಕ್ತಿ ಇತ್ತು. ಈ ಆಸಕ್ತಿಗೆ ಸರಿಯಾಗಿ ಮನ್ಸೂರ್ಗೆ ಏಳು ವರ್ಷ ಇರುವಾಗ ನವದೆಹಲಿಯಲ್ಲಿ ಇರುವ ತನ್ನ ಸಂಬಂಧಿಯ ಮೂಲಕ ವಿಮಾನದ ಕಂಪ್ಯೂಟರ್ ಸಿಮ್ಯುಲೇಟರ್ ಅನ್ನು ನೋಡಿದ್ದ. ಈ ಸಂಬಂಧಿ ಭಾರತದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ, ಮನ್ಸೂರ್ಗೆ ಬಾಲ್ಯದಲ್ಲೇ ಈ ಬಗ್ಗೆ ಆಸಕ್ತಿ ಇದ್ದೇ ಇತ್ತು… ಅಲ್ಲದೆ, ಈ ಸಂಬಂಧಿ ಹೇಗೆ ವಿಮಾನ ಚಲಾಯಿಸುವುದು ಎಂಬುದನ್ನು ಮನ್ಸೂರ್ಗೆ ಈ ಕಂಪ್ಯೂಟರ್ ಸಿಮ್ಯುಲೇಟರ್ ಮೂಲಕ ಆಗಲೇ ಹೇಳಿಕೊಟ್ಟಿದ್ದರು. ಪರಿಣಾಮ, ಈತನ ಆಸಕ್ತಿ ಇನ್ನಷ್ಟು ಗಟ್ಟಿಯಾಗುತ್ತಲೇ ಹೋಗುತ್ತಿತ್ತು.

ಮನ್ಸೂರ್ ಗೆ 13 ವರ್ಷ ವಯಸ್ಸಾದಾಗ ತಾನು ಪೈಲಟ್ ಆಗಲೇಬೇಕು ಎಂದು ದೃಢ ನಿರ್ಧಾರ ಮಾಡಿದ್ದ. ಇದಾದ ಬಳಿಕ ಕೆನಡಾದ ಬ್ರಿಟೀಷ್ ಕೊಲಂಬಿಯಾದಲ್ಲಿರುವ ಎಎಎ ಎವಿಯೇಷನ್ ಫ್ಲೈಟ್ ಅಕಾಡೆಮಿಗೆ ಸೇರಿದ ಮನ್ಸೂರ್ ಅಲ್ಲಿ ತರಬೇತಿ ಪಡೆಯಲು ಆರಂಭಿಸಿದ್ದ. ಆರಂಭದಲ್ಲಿ ಈ ತರಬೇತಿ ಕೇಂದ್ರದಲ್ಲೂ ಇಷ್ಟು ಚಿಕ್ಕ ಹುಡುಗನನ್ನು ಸೇರಿಸಿಕೊಳ್ಳುವುದಕ್ಕೆ ಅನುಮಾನ ಹೊಂದಿದ್ದರು. ಆದರೆ, ಹೇಳಿಕೊಟ್ಟಿದ್ದನ್ನು ತಕ್ಷಣ ಮನನ ಮಾಡುವ ಮನ್ಸೂರ್ ಜ್ಞಾನ ಮತ್ತು ಆಸಕ್ತಿಯನ್ನು ಗಮನಿಸಿದ ಸಂಸ್ಥೆ ಈತನನ್ನು ಸೇರಿಕೊಂಡು ತರಬೇತಿ ಕೊಡಲು ಆರಂಭಿಸಿತ್ತು.

ಆಗಸ್ಟ್ 30 ರಂದು ಮೊದಲ ಬಾರಿಗೆ ಮನ್ಸೂರ್ ಏಕಾಂಗಿಯಾಗಿ ವಿಮಾನದ ಕಾಕ್ಪಿಟ್ ಪ್ರವೇಶ ಮಾಡಿದ್ದ. ಸೆಸ್ನಾ 152 ವಿಮಾನವನ್ನು ಒಂಟಿಯಾಗಿ ಚಲಾಯಿಸುವ ಮೂಲಕ ಕಿರಿಯ ಪೈಲಟ್ ಎಂಬ ಕೀರ್ತಿಗೂ ಪಾತ್ರನಾದ. ವಿಮಾನದಿಂದ ಇಳಿದ ಬಳಿಕ ಮಾತನಾಡಿದ ಮನ್ಸೂರ್, ವಿಮಾನ ಚಲಾಯಿಸುವಾಗ ಕೊಂಚ ನರ್ವಸ್ ಆಗಿದ್ದೆ. ಆದರೆ, ವಿಮಾನ ಚಲಾಯಿಸಿಯೇ ಚಲಾಯಿಸುತ್ತೇನೆ ಎಂಬ ಧೈರ್ಯ ನನಗಿತ್ತು. ಹೀಗಾಗಿ, ಅಂದುಕೊಂಡದ್ದನ್ನು ಸಾಧಿಸಿದ್ದೇನೆ ಎಂದು ಹೇಳಿದ್ದಾನೆ.

10 ರಿಂದ 12 ನಿಮಿಷಗಳಷ್ಟು ಕಾಲ ಮನ್ಸೂರ್ ವಿಮಾನವನ್ನು ಚಲಾಯಿಸಿದ್ದಾನೆ. ಲ್ಯಾಂಡಿಂಗ್ ವೇಳೆ ತಾನು ಕೊಂಚ ಹೆದರಿಕೊಂಡಿದ್ದಾಗಿಯೂ ಈತ ಹೇಳಿದ್ದಾನೆ. ಅಲ್ಲದೆ, ವಿಮಾನವನ್ನೂ ಇನ್ನೂ ಚೆನ್ನಾಗಿ ಲ್ಯಾಂಡ್ ಮಾಡುವುದನ್ನು ಕಲಿಯುತ್ತೇನೆ ಎಂಬ ದೃಢ ವಿಶ್ವಾಸವನ್ನೇ ವ್ಯಕ್ತಪಡಿಸಿದ್ದಾನೆ.
ವಿಮಾನ ಚಲಾಯಿಸಿ ದಾಖಲೆ ಬರೆದ ಈ ಪೋರನಿಗೆ ಶಾರ್ಜಾದಲ್ಲಿ ಅಭೂತಪೂರ್ವ ಸ್ವಾಗತವೇ ಸಿಕ್ಕಿದೆ. ಹೆತ್ತವರು ಸಂಬಂಧಿಕರು ಮನ್ಸೂರ್ನನ್ನು ತಬ್ಬಿ ಮುದ್ದಾಡಿದ್ದಾರೆ.

Photo courtesy : internet

 

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!