Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / ಟೈಗರ್​ ಜಿಂದಾ ಹೇ ಚಿತ್ರಕ್ಕೆ ಸುದೀಪ್ ಸಂಭಾವನೆ ಎಷ್ಟು ಗೊತ್ತಾ…?

ಟೈಗರ್​ ಜಿಂದಾ ಹೇ ಚಿತ್ರಕ್ಕೆ ಸುದೀಪ್ ಸಂಭಾವನೆ ಎಷ್ಟು ಗೊತ್ತಾ…?

ಬೆಂಗಳೂರು : ಕಿಚ್ಚ ಸುದೀಪ್​​.. ಸ್ಯಾಂಡಲ್​ವುಡ್​ ಕಂಡ ಅಪ್ರತಿಮ ಕಲಾವಿದ… ತನ್ನ ಪ್ರತಿಭೆಯ ಮೂಲಕವೇ ಗಮನ ಸೆಳೆದವರು ಇವರು… ಇಂತಹ ಸುದೀಪ್ ಈಗ ಬರೀ ಕನ್ನಡದ ಹುಡುಗನಾಗಿ ಮಾತ್ರ ಉಳಿದಿಲ್ಲ. ಕಾಲಿವುಡ್​, ಟಾಲಿವುಡ್​ನಲ್ಲೂ ಕಿಚ್ಚನ ಹೆಜ್ಜೆ ಗುರುತುಗಳಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸುದೀಪ್​ಗೆ ಅವರದ್ದೇ ಆದ ಫ್ಯಾನ್​ ಫಾಲೋವರ್ಸ್​ ಇದ್ದಾರೆ…

ಖಡಕ್​ ಅಭಿನಯ, ಖದರ್​ ತೋರೋ ಧ್ವನಿ, ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಹೇಳುವ ಕಣ್ಣಿನ ಮೂಲಕವೇ ಕಿಚ್ಚ ಎಲ್ಲರ ಮನದಲ್ಲೂ ಮನೆ ಮಾಡಿದ ಕಲಾವಿದ… ಬರೀ ದಕ್ಷಿಣ ಭಾರತದಲ್ಲಿ ಮಾತ್ರ ಇವರ ಖದರ್ ಇಲ್ಲ. ಬಾಲಿವುಡ್​ನಲ್ಲೂ ಕಿಚ್ಚನ ಹೆಜ್ಜೆಗಳಿವೆ… ಹಾಲಿವುಡ್​ಗೂ ಹಾರಲು ಕಿಚ್ಚ ಅಣಿಯಾಗಿದ್ದಾರೆ…

ಈ ಹಿಂದೆ ರಾಮ್​ಗೋಪಾಲ್ ವರ್ಮಾ ನಿರ್ದೇಶನದ ರಣ್ ಮತ್ತು ಫೂಂಖ್​ ಚಿತ್ರದಲ್ಲಿ ಕಿಚ್ಚ ತನ್ನ ಅಭಿನಯ ಚಾತುರ್ಯವನ್ನು ಮೆರೆದಿದ್ದರು. ಬಿಗ್​ ಬಿ ಅಮಿತಾಭ್​ ಅವರೇ ಕಿಚ್ಚನ ಅಭಿನಯಕ್ಕೆ ಫಿದಾ ಆಗಿದ್ದರು… ಈಗ ತೆಲುಗಿನಲ್ಲಿ ಚಿರಂಜೀವಿ ಅಭಿನಯದ 151ನೇ ಚಿತ್ರದಲ್ಲಿ ಅಮಿತಾಭ್ ಮತ್ತು ಸುದೀಪ್​ ಜೊತೆಯಾಗುತ್ತಿದ್ದಾರೆ.. ಹೀಗೆ, ಬಹುಭಾಷೆಯಲ್ಲಿ ತನ್ನತನವನ್ನು ಮೆರೆದಿರುವ ಕಿಚ್ಚ ಈಗ ಇನ್ನೊಂದು ಸಲ ಬಾಲಿವುಡ್​ಗೆ ಹಾರುತ್ತಿದ್ದಾರೆ… ಈ ಬಾರಿ ಸುದೀಪ್​ ಅಭಿನಯಿಸುತ್ತಿರುವ ಬಾಲಿವುಡ್​ನ ಬಾಕ್ಸ್​ ಆಫೀಸ್​ ಸುಲ್ತಾನ್​ ಸಲ್ಮಾನ್ ಖಾನ್ ಜೊತೆಗೆ…

ಹೌದು, ಸಲ್ಮಾನ್ ಈಗ ತಮ್ಮ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದು 2012ರ ಸೂಪರ್ ಹಿಟ್​ ಚಿತ್ರ ಏಕ್​ ಥಾ ಟೈಗರ್​ ಚಿತ್ರದ ಸಿಕ್ವೇಲ್​… ಏಕ್​ ಥಾ ಟೈಗರ್ ಚಿತ್ರದಲ್ಲಿ ಸಲ್ಮಾನ್​ಗೆ ಮಾಜಿ ಪ್ರೇಯಸಿ ಕತ್ರಿನಾ ಕೈಫ್​ ಜೊತೆಯಾಗಿದ್ದರು. ಈ ಚಿತ್ರದಲ್ಲೂ ಕತ್ರಿನಾ ಕೈಫ್​ ನಟಿಸುತ್ತಿದ್ದಾರೆ.

ಅಲಿ ಅಬ್ಬಾಸ್ ಜಾಫರ್​ ಈ ಚಿತ್ರದ ನಿರ್ದೇಶಕ. ಆದಿತ್ಯಾ ಚೋಪ್ರಾ ನಿರ್ಮಾಪಕ. ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಶೀಘ್ರದಲ್ಲೇ ಕಿಚ್ಚ ಸುದೀಪ್ ಕೂಡಾ ಶೂಟಿಂಗ್ ಟೀಂ ಸೇರಲಿದ್ದಾರೆ. ಬಹುಶಃ ವಿಲನ್​ ಚಿತ್ರದ ಶೂಟಿಂಗ್​​ನಲ್ಲಿ ಬಿಡುವು ಮಾಡಿಕೊಂಡು ಕಿಚ್ಚ ಈ ಚಿತ್ರದಲ್ಲಿ ಶೂಟಿಂಗ್​​ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯೂ ಇದೆ… ಇನ್ನು, ಇನ್ನೋರ್ವ ಕನ್ನಡಿಗ ಗಿರೀಶ್ ಕಾರ್ನಾಡ್​ ಅವರು ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಎಲ್ಲದರ ನಡುವೆ, ಈ ಚಿತ್ರದಲ್ಲಿ ಸುದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಕುತೂಹಲವೂ ಮೂಡಲಾರಂಭಿಸಿದೆ. ಸದ್ಯದ ಮಾಹಿತಿ ಪ್ರಕಾರ ಸುದೀಪ್ ಈ ಚಿತ್ರಕ್ಕಾಗಿ ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಅಂತ ಹೇಳಲಾಗುತ್ತಿದೆ…

ಇಲ್ಲಿ ಸುದೀಪ್ ನಿರ್ವಹಿಸುತ್ತಿರುವುದು ವಿಲನ್ ಪಾತ್ರವನ್ನು… ಹೀಗಾಗಿ, ಟೈಗರ್​ ಚಿತ್ರದಲ್ಲಿ ಕನ್ನಡದ ಹೆಬ್ಬುಲಿ ಅಬ್ಬರಿಸಲಿದ್ದು, ಸಲ್ಮಾನ್​ಗೂ ಒಬ್ಬ ಖಡಕ್ ವಿಲನ್ ಸಿಕ್ಕಂತಾಗಿದೆ… ಸದ್ಯದ ಮಾಹಿತಿ ಪ್ರಕಾರ ಸುದೀಪ್ ಪಾಕಿಸ್ತಾನದ ಐಎಸ್​ಐ ಏಜೆಂಟ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಅಂತ ಗೊತ್ತಾಗಿದೆ. ಒಟ್ಟಿನಲ್ಲಿ, ಸುದೀಪ್ ಇನ್ನೊಂದು ಸಲ ಮಾಸ್​ ಪ್ರೇಕ್ಷಕರ ಮನಗೆಲ್ಲಲು ಹೊರಟಿದ್ದಾರೆ… ಹೀಗಾಗಿ, ಅವರ ಅಭಿಮಾನಿಗಳಂತೂ ಸಖತ್​ ಖುಷಿಯಲ್ಲಿದ್ದಾರೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!