Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ಚಿಕ್ಕಮಗಳೂರಿನ ಹಸಿರ ತಾಣದಲ್ಲಿ ದಿ ವಿಲನ್​ ಶೂಟಿಂಗ್

ಚಿಕ್ಕಮಗಳೂರಿನ ಹಸಿರ ತಾಣದಲ್ಲಿ ದಿ ವಿಲನ್​ ಶೂಟಿಂಗ್

ಚಿಕ್ಕಮಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರ ಈಗಾಗಲೇ ಕುತೂಹಲ ಮೂಡಿಸಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಸದ್ಯ ಚಿಕ್ಕಮಗಳೂರಿನಲ್ಲಿ ದಿ ವಿಲನ್ ತಂಡ ಬೀಡು ಬಿಟ್ಟಿದೆ. ಇಲ್ಲಿನ ಬಾಬಾ ಬುಡನ್​ ಗಿರಿ ಮತ್ತು ಮುಳ್ಳಯ್ಯನ ಗಿರಿಯಲ್ಲಿ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ.

ಆಮಿ ಜಾಕ್ಸನ್​ ಜೊತೆಗಿನ ಕಿಚ್ಚ ಸುದೀಪ್ ಅವರ ರೊಮ್ಯಾಂಟಿಕ್ ಸೀಕ್ವೆನ್ಸ್​ ಅನ್ನೂ ಇಲ್ಲೇ ಶೂಟ್ ಮಾಡಲಾಗುತ್ತಿದೆ. ಪಶ್ಚಿಮಘಟ್ಟಗಳ ಸುಂದರ ತಾಣದಲ್ಲಿ ದಿ ವಿಲನ್ ಚಿತ್ರೀಕರಣಗೊಳ್ಳುತ್ತಿದೆ. ಒಂದು ಹಾಡಿನ ಸನ್ನಿವೇಶವೂ ಇಲ್ಲೇ ಶೂಟ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಚಿತ್ರದಲ್ಲಿ ಅತಿರಥ ಮಹಾರಥ ನಟರೇ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಮತ್ತು ಶಿವಣ್ಣ ಒಂದಾಗುತ್ತಿದ್ದಾರೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕೂಡಾ ಈ ಚಿತ್ರದಲ್ಲಿ ಇದ್ದಾರೆ. ಈಗಾಗಲೇ ಬ್ಯಾಂಕಾಂಗ್​​, ಇಂಗ್ಲೇಂಡ್ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿರುವ ತಂಡ ಈ ಚಿಕ್ಕಮಗಳೂರಿನ ಹಸಿರ ತಾಣವನ್ನು ಸೆರೆ ಹಿಡಿಯುವಲ್ಲಿ ಮಗ್ನವಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!