Monday , October 22 2018
ಕೇಳ್ರಪ್ಪೋ ಕೇಳಿ
Home / Sudina Special / ಬ್ಲೂವೇಲ್ ಗೇಮ್​ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ…? : ಇಲ್ಲಿದೆ ಪಂಚಸೂತ್ರಗಳು..

ಬ್ಲೂವೇಲ್ ಗೇಮ್​ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ…? : ಇಲ್ಲಿದೆ ಪಂಚಸೂತ್ರಗಳು..

ಬೆಂಗಳೂರು : ಮಕ್ಕಳ ಜೀವದೊಂದಿಗೆ ಆಟ ಆಡುವ ಬ್ಲೂ ವೇಲ್​ ಎಂಬ ಗೇಮ್​ ಈಗ ಭೀತಿ ಮೂಡಿಸಿದೆ. ಮುಗ್ದ ಮಕ್ಕಳು ಈ ಇಂಟರ್​ನೆಟ್ ಆಟದ ಮೋಡಿಗೆ ಮರುಳಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲವಾದರೂ ಜಾಗೃತಿ ಮೂಡಿಸುವ ಕೆಲಸವಂತೂ ಕಡ್ಡಾಯವಾಗಿ ಆಗಬೇಕಾಗಿದೆ. ಶಾಲೆಯಲ್ಲೇ ಮಕ್ಕಳಿಗೆ ಇಂತಹ ಜಾಗೃತಿ ಮೂಡಿಸಬೇಕಾಗಿದೆ, ಜೊತೆಗೆ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಚಲನವಲನದ ಮೇಲೆ ಒಂದು ಕಣ್ಣಿಡಬೇಕಾಗಿದೆ.

ಏನು ಆ ಪಂಚಸೂತ್ರಗಳು…?

  1. ಮಕ್ಕಳ ದೇಹ ವಿಶೇಷವಾಗಿ ಕೈ ಮತ್ತು ತುಟಿ ಭಾಗದಲ್ಲಿ ಆಗಿರುವ ಅಸಹಜ ಗಾಯ ಮೇಲೆ ಗಮನವಿರಲಿ
  2. ಸದಾ ಹಾರರ್​​ ಚಿತ್ರಗಳನ್ನೇ ನೋಡುತ್ತಿರುವ ಮಕ್ಕಳ ಮೇಲೆ ಪೋಷಕರು ಗಮನ ಇಡಿ
  3. ಮುಂಜಾನೆ 4.20ಕ್ಕೆ ಸರಿಯಾಗಿ ಮಕ್ಕಳು ಏಳುತ್ತಿದ್ದರೆ ಅವರ ಮೇಲೆ ಕೊಂಚ ನಿಗಾ ಇರಲಿ
  4. ಮಕ್ಕಳು ಡಿಸ್ಟರ್ಬಿಂಗ್ ಮತ್ತು ವಿಲಕ್ಷಣ ಸಂಗೀತ ಕೇಳುತ್ತಿದ್ದರೂ ಅವರ ಮೇಲೆ ಒಂದು ಕಣ್ಣಿಡಿ
  5. ಖಿನ್ನತೆಗೊಳಗಾಗಿದ್ದನ್ನು ಸೂಚಿಸುವ ಮೆಸೇಜ್ ಮತ್ತು ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವವರ ಮೇಲೂ ಗಮನ ಇರಲಿ

ಈ ಪಂಚಸೂತ್ರಗಳನ್ನು ಶಿಕ್ಷಕರು ಮತ್ತು ಪೋಷಕರು ಸರಿಯಾಗಿ ಪಾಲಿಸಿದರೆ ಮಕ್ಕಳನ್ನು ಬ್ಲೂವೇಲ್​ನಂತಹ ಮಾರಕ ಇಂಟರ್​ನೆಟ್​ ಗೇಮ್​ನಿಂದ ದೂರ ಇರುವಂತೆ ಮಾಡಬಹುದು. ಕರ್ನಾಟಕ ಶಿಕ್ಷಣ ಇಲಾಖೆ ಕೂಡಾ ಇದೇ ಸಂದೇಶವನ್ನು ನೀಡಿದೆ. ಮಕ್ಕಳ ದೇಹ ವಿಶೇಷವಾಗಿ ಕೈ ಭಾಗ ಹಾಗೂ ತುಟಿಯ ಭಾಗದಲ್ಲಿ ಆಗಿರುವಂತಹ ವಿಲಕ್ಷಣ ಗಾಯಗಳೇ ಈ ಮಾರಕ ಗೇಮ್​​ನ ಮೊದಲ ಸೂಚನೆ.

ಈ ಗೇಮ್​ ರಷ್ಯಾದಲ್ಲಿ ಮೊದಲು ಆರಂಭವಾಗಿತ್ತು. 50 ದಿನಗಳ ಈ ಆಟದಲ್ಲಿ ಮಕ್ಕಳ ಜೀವಕ್ಕೇ ಅಪಾಯವಾಗುವಂತಹ ಚಾಲೆಂಜ್​ಗಳಿವೆ. ತಮ್ಮ ಚರ್ಮವನ್ನು ತಾವೇ ಗಾಯ ಮಾಡಿಕೊಳ್ಳುವುದು, ರಾತ್ರಿ ಹೊತ್ತು ಸ್ಮಶಾನಕ್ಕೆ ಹೋಗುವುದು, ನಿರಂತರ ಹಾರರ್​ ಚಿತ್ರಗಳನ್ನು ನೋಡುವುದು, ಆತ್ಮಹತ್ಯೆಯ ಯತ್ನ ಮಾಡುವುದು ಕೂಡಾ ಈ ಗೇಮ್​ನ ಚಾಲೆಂಜಿಗಳಲ್ಲಿ ಒಂದು. ಈಗಾಗಲೇ ಈ ಗೇಮ್​ಗೆ ಹಲವು ಮಕ್ಕಳು ಬಲಿಯಾಗಿದ್ದಾರೆ. ಭಾರತದಲ್ಲೂ ಒಂದೆರಡು ಪ್ರಕರಣಗಳು ದಾಖಲಾಗಿವೆ.

 

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!