Saturday , February 16 2019
ಕೇಳ್ರಪ್ಪೋ ಕೇಳಿ
Home / Gulf News / ಯುಎಇನಲ್ಲಿ ಒಂದು ವರ್ಷದಿಂದ ಕೋಮಾದಲ್ಲಿರುವ ಭಾರತೀಯನಿಗೆ ಕೊನೆಗೂ ಸಿಕ್ತು ಕೇರಳದಲ್ಲೊಂದು ನೆಲೆ..

ಯುಎಇನಲ್ಲಿ ಒಂದು ವರ್ಷದಿಂದ ಕೋಮಾದಲ್ಲಿರುವ ಭಾರತೀಯನಿಗೆ ಕೊನೆಗೂ ಸಿಕ್ತು ಕೇರಳದಲ್ಲೊಂದು ನೆಲೆ..

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ

ದುಬೈ : ಪ್ರದೀಪ್ ಶರ್ಮಾ ಎಂಬ ನತದೃಷ್ಟನಿಗೆ ಈಗ ಹೊಸ ನೆಲೆಯೊಂದು ಸಿಕ್ಕಿದೆ. ಬಿಹಾರದವರಾದ ಇವರಿಗೆ ಕೇರಳದಲ್ಲೊಂದು ಆಸರೆ ದೊರೆತಿದೆ. ಇವರ ಕಷ್ಟ ಕೇಳಿದರೆ ಎಂತವರಿಗೂ ಕಣ್ಣಲ್ಲಿ ನೀರು ಬರುತ್ತದೆ.

ಪ್ರದೀಪ್ ಶರ್ಮಾ ವೃತ್ತಿಯಲ್ಲಿ ಬಡಗಿ. ಕೆಲಸವನ್ನರಸಿ ಬಿಹಾರದಿಂದ ಎರಡು ವರ್ಷದ ಹಿಂದೆ ದುಬೈಗೆ ಬಂದಿದ್ದ ಇವರು ಒಂದೇ ವರ್ಷದಲ್ಲಿ ಅಸ್ವಸ್ಥರಾದರು. ಪರಿಣಾಮ, ಕೋಮಾಕ್ಕೆ ಜಾರಿದ ಪ್ರದೀಪ್​ ಶರ್ಮಾ ಒಂದು ವರ್ಷದಿಂದ ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕೆಲಸ ಮಾಡುತ್ತಿದ್ದ ಕಂಪೆನಿಯೇ ಈ ಎಲ್ಲಾ ಖರ್ಚನ್ನು ನೋಡುತ್ತಿದೆ.

ಆದರೆ, ಕಂಪೆನಿಯೇ ಇವರನ್ನು ಭಾರತಕ್ಕೆ ಮರಳಿ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತದೆ ಎಂದರೂ ಕುಟುಂಬಸ್ಥರು ಮಾತ್ರ ಪ್ರದೀಪ್ ಶರ್ಮಾರನ್ನು ಕರೆಸಿಕೊಳ್ಳಲು ಸಿದ್ಧರಿಲ್ಲ. ಅದಕ್ಕೆ ಕಾರಣ, ಕುಟುಂಬದ ಬಡತನ. ಹೀಗಾಗಿ, ಕೇರಳದ ಎನ್​ಜಿಓ ವೊಂದು ತಾನೇ ಆಸಕ್ತಿ ವಹಿಸಿ ಪ್ರದೀಪ್ ಶರ್ಮಾರ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಅಲ್ಲದೆ, ಇವರನ್ನು ಕೇರಳಕ್ಕೂ ಕರೆದುಕೊಂಡು ಬರಲಾಗಿದೆ.

ದುಬೈನಲ್ಲಿರುವ ಅಲ್​ ಶಂದಗಾ ವುಡ್ ಇಂಡಸ್ಟ್ರಿಯಲ್ಲಿ 2015ರಲ್ಲಿ ಕೆಲಸಕ್ಕೆ ಸೇರಿದ್ದರು. ತನ್ನ ಹೆತ್ತವರು, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಬಿಹಾರದ ಗೋಪಾಲ್​ಗಂಜ್​​ನಲ್ಲಿ ಬಿಟ್ಟು ಇವರು ದುಬೈಗೆ ತೆರಳಿದ್ದರು. ಆದರೆ, ಕೆಲಸಕ್ಕೆ ಸೇರಿ ಒಂದು ವರ್ಷ ಆಗುವುದರೊಳಗೆ ಪ್ರದೀಪ್​ ಶರ್ಮಾ ಮನೆಯಲ್ಲೇ ಕುಸಿದು ಬಿದ್ದಿದ್ದರು. ಇವರೊಂದಿಗೆ ಇದ್ದವರು ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರು. ಕಳೆದ ಒಂದು ವರ್ಷದಿಂದ ಇವರು ಇದೇ ರಶೀದ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕಂಪೆನಿ ಎಷ್ಟು ಪ್ರಯತ್ನ ಪಟ್ಟರೂ ಆರ್ಥಿಕ ಕಾರಣದಿಂದ ಮನೆಯವರು ಇವರನ್ನು ಮನೆಗೆ ಕರೆದುಕೊಂಡು ಬರಲು ನಿರಾಕರಿಸಿದ್ದರು. ಈ ವಿಷಯ ದುಬೈನಲ್ಲಿದ್ದ ಸಾಮಾಜಿಕ ಕಾರ್ಯಕರ್ತ ನಾಸೀರ್​ ವದನಪಲ್ಲಿ ಅವರಿಗೆ ಗೊತ್ತಾಯ್ತು. ಇವರು ಕೂಡಾ ಮನೆಯವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಆದರೂ ಮನೆಯ ಬಡತನದ ಕಾರಣ ಇದೂ ಸಾಧ್ಯವಾಗಿರಲಿಲ್ಲ.

ಈ ನಡುವೆ, ಇನ್ನೋರ್ವ ಕೇರಳದ ಸಾಮಾಜಿಕ ಕಾರ್ಯಕರ್ತ ಉಮಾ ಪರೇಮನ್​ ಅವರಿಗೂ ಈ ವಿಷಯ ಗೊತ್ತಾಯ್ತು. ನಾಸೀರ್​ ಜೊತೆ ಆಸ್ಪತ್ರೆಗೆ ಬಂದ ಉಮಾ ಪ್ರದೀಪ್ ಅವರ ಆರೋಗ್ಯ ಸ್ಥಿತಿ ಪರಿಶೀಲನೆ ನಡೆಸಿದ್ದರು. ಪ್ರದೀಪ್ ಸಂಬಂಧಿಕರಿಂದ ಅನುಮತಿಯನ್ನು ಪಡೆದು ಕೇರಳದಲ್ಲಿ ಚಿಕಿತ್ಸೆ ಕೊಡಿಸುವ ನಿರ್ಧಾರಕ್ಕೆ ಇವರೆಲ್ಲಾ ಬಂದರು. ಇದಕ್ಕೆ ಪ್ರದೀಪ್ ಅವರು ಕೆಲಸ ಮಾಡುತ್ತಿದ್ದ ಕಂಪೆನಿ, ರಶೀದ್ ಆಸ್ಪತ್ರೆ ನಾಸಿರ್ ಸೇರಿದಂತೆ ಹಲವರು ಕೈ ಜೋಡಿಸಿದರು. ಸುಮಾರು ಮೂರು ತಿಂಗಳಿಂದ ಇವರೆಲ್ಲಾ ಈ ಪ್ರಯತ್ನ ಮಾಡುತ್ತಿದ್ದು, ಇದೀಗ ಫಲಕೊಟ್ಟಿದೆ.

ಏರ್​ ಇಂಡಿಯಾ ಎಕ್ಸ್​ಪ್ರೆಸ್​ನಲ್ಲಿ ಪ್ರದೀಪ್​ ಶರ್ಮಾರನ್ನು ಕೇರಳಕ್ಕೆ ಕರೆದುಕೊಂಡು ಬರಲಾಗಿದೆ. ಪಾಲಕ್ಕಾಡ್​ ಜಿಲ್ಲೆಯ ಅಟ್ಟಪ್ಪಟ್ಟಿಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!