Wednesday , March 27 2019
ಕೇಳ್ರಪ್ಪೋ ಕೇಳಿ
Home / News NOW / ಮುಸ್ಲಿಂ ಮಹಿಳೆಯ ಮೇಲೆ ಮಹಾಕಾಳಿ ಆವಾಹನೆ…! : ಇಲ್ಲಿದೆ ವೀಡಿಯೋ

ಮುಸ್ಲಿಂ ಮಹಿಳೆಯ ಮೇಲೆ ಮಹಾಕಾಳಿ ಆವಾಹನೆ…! : ಇಲ್ಲಿದೆ ವೀಡಿಯೋ

ಕೊಡಗು ಪ್ರತಿನಿಧಿ ವರದಿ

ಮಡಿಕೇರಿ : ಕುಶಾಲನಗರ ಪಟ್ಟಣ ಪಂಚಾಯತಿಯ ಎದುರು ಇವತ್ತು ದೊಡ್ಡ ರಾದ್ಧಾಂತವೇ ನಡೆದಿದೆ. ಶಾಲಾ ಮುಖ್ಯಸ್ಥೆಯೊಬ್ಬರು ತ್ರಿಶೂಲ ಹಿಡಿದು ತನ್ನ ಮೇಲೆ ಮಹಾಕಾಳಿಯ ಆವಾಹನೆಯಾಗಿದೆ ಎಂದು ಅಬ್ಬರಿಸಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರು ಕೆಲಕಾಲ ದಂಗಾಗಿ ಹೋಗಿದ್ದಾರೆ.

ಹೀಗೆ ಕಾಳಿಯಂತೆ ವರ್ತಿಸಿದವರು ಬ್ರಿಲಿಯೆಂಟ್ ಬ್ಲೂಮ್​ ಶಾಲೆಯ ಮುಖ್ಯಸ್ಥೆ ಮುಬಿನ್ ತಾಜ್​. ಇವರು ತ್ರಿಶೂಲ ಹಿಡಿದುಕೊಂಡು ಮೈ ಮೇಲೆ ದೇವಿ ಆವೇಶ ಬಂದಂತೆ ವರ್ತಿಸಿದ್ದಾರೆ. ಅಲ್ಲದೆ, ಶಾಲೆಯ ಕೊಠಡಿಯ ಭೂಮಿಯೊಳಗೆ 7 ಅಡಿಯಷ್ಟು ದೊಡ್ಡದಾದ ಮಹಾಕಾಳಿಯ ವಿಗ್ರಹವಿದೆ. ಅದಕ್ಕೆ 10 ಕೈಗಳಿವೆ. ಆ ವಿಗ್ರಹ ಮೇಲೆಕ್ಕತ್ತಲು ಅನೇಕ ಅಡೆತಡೆಗಳಿವೆ. ಅದನ್ನು ಪರಿಹರಿಸಿ ಎಂದು ಒತ್ತಾಯಿಸಿದ್ದಾರೆ…

ಇನ್ನು, ಸುದ್ದಿ ತಿಳಿದು ಬಂದ ಮಾಧ್ಯಮದವರ ಎದುರು ಮುಬಿನ್​ತಾಜ್​ ಜೋರಾಗಿಯೇ ದೇವಿಯ ಅಬ್ಬರ ತೋರಿದ್ದಾರೆ…! ಅಲ್ಲದೆ, ನಾಲಗೆಯನ್ನು ಹೊರಚಾಚಿ ನಾನೇನು ಮಹಾಕಾಳಿ ಎಂದೆಲ್ಲಾ ಹೂಂಕರಿಸಿದ್ದಾರೆ…! ಇಷ್ಟಾಗುವ ಸ್ಥಳಕ್ಕೆ ಬಂದ ಕುಶಾಲನಗರ ಪೊಲೀಸರು ಮುಬಿನ್​ ತಾಜ್​ರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!