Monday , December 10 2018
ಕೇಳ್ರಪ್ಪೋ ಕೇಳಿ
Home / Film News / Tollywood / ಸಮಂತಾ ಬೆದರಿಕೆ ಹಾಕಿದ ಮೇಲೆಯೇ ನಾಗಚೈತನ್ಯ ತನ್ನ ಲವ್ ವಿಷಯ ಹೇಳಿದ್ದು…!

ಸಮಂತಾ ಬೆದರಿಕೆ ಹಾಕಿದ ಮೇಲೆಯೇ ನಾಗಚೈತನ್ಯ ತನ್ನ ಲವ್ ವಿಷಯ ಹೇಳಿದ್ದು…!

ಹೈದರಾಬಾದ್ : ಟಾಲಿವುಡ್​ನ ಸೂಪರ್​​ ಜೋಡಿಯಾದ ನಾಗಚೈತನ್ಯ ಮತ್ತು ಸಮಂತಾ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ. ಇವರ ಪ್ರೇಮಕ್ಕೆ ಅಕ್ಟೋಬರ್​​ನಲ್ಲಿ ದಾಂಪತ್ಯದ ಮುದ್ರೆ ಬೀಳಲಿದೆ. ಆದರೆ, ಇವರಿಬ್ಬರು ಪ್ರೇಮಲೋಕದಲ್ಲಿ ವಿಹರಿಸಲು ಆರಂಭಿಸಿದ್ದು ಯಾವಾಗ ಎಂಬುದನ್ನು ಇತ್ತೀಚೆಗೆ ನಾಗಚೈತನ್ಯ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸಮಂತಾ ತನಗೆ ಆ ಬೆದರಿಕೆ ಹಾಕಿದ ಮೇಲೆಯೇ ಇವರು ತಂದೆ ನಾಗಾರ್ಜುನಗೆ ಪ್ರೇಮದ ವಿಚಾರ ಹೇಳಿದ್ದಂತೆ…!

ಏನು ಆ ಬೆದರಿಕೆ : ನಾಗಚೈತನ್ಯ ಮತ್ತು ಸಮಂತಾ ಪ್ರೀತಿಗೆ ಬಿದ್ದಿದ್ದು 2009ರಲ್ಲಿ. ಅದು ‘ಏ ಮಾಯ ಚೇಸವೇ’ ಚಿತ್ರದ ಶೂಟಿಂಗ್​​ ಸೆಟ್​​. ಇಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಬಲು ಗುಟ್ಟಾಗಿಯೇ ಪ್ರೀತಿಯ ವಿಷಯವನ್ನು ಇವರಿಬ್ಬರು ಮೇಂಟೈನ್​ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ನಾಗಚೈತನ್ಯ ತನ್ನ ಪ್ರೀತಿಯ ವಿಷಯ ಹೆತ್ತವರಿಗೆ ಹೇಳಿಯೇ ಇರಲಿಲ್ಲ. ಇತ್ತ, ಸಮಂತಾ ಹೆತ್ತವರಿಗೆ ಈ ವಿಷಯ ತಿಳಿಸುವಂತೆ ಒತ್ತಡ ಹಾಕುತ್ತಲೇ ಇದ್ದರು. ಆದರೂ, ನಾಗಚೈತನ್ಯ ಪ್ರೀತಿಯ ವಿಷಯ ಹೇಳಲು ಹೆದರಿ ಕುಳಿತಿದ್ದರು. ಇದರಿಂದ ಸಿಟ್ಟಾದ ಸಮಂತಾ ಒಂದು ದಿನ ಕೈಯಲ್ಲಿ ರಾಖಿ ಹಿಡಿದುಕೊಂಡು ಬಂದಿದ್ದರು. ಒಂದೊಮ್ಮೆ ನಮ್ಮ ಪ್ರೀತಿಯ ವಿಷಯ ಮನೆಯವರಿಗೆ ಹೇಳದೇ ಇದ್ದರೆ ನಿನಗೆ ರಾಖಿ ಕಟ್ಟಿ ತಮ್ಮ ಅಂತ ಸ್ವೀಕರಿಸುತ್ತೇನೆ ಎಂದು ಬೆದರಿಕೆ ಹಾಕಿದರು…!

ಈ ಬೆದರಿಕೆಯಿಂದ ಹೆದರಿದ ನಾಗಚೈತನ್ಯ ತಕ್ಷಣ ಹೆತ್ತವರಿಗೆ ಈ ವಿಷಯ ತಿಳಿಸಿದರು. ಹೆತ್ತವರೂ ತಕ್ಷಣ ಇದಕ್ಕೆ ಸಮ್ಮತಿಯ ಮುದ್ರೆಯೊತ್ತಿದರು. ಕಳೆದ ಜನವರಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥವೂ ನಡೆದಿತ್ತು. ಅಕ್ಟೋಬರ್​ನಲ್ಲಿ ಮದುವೆ ಕೂಡಾ ನಿಶ್ಚಯವಾಗಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!