Monday , February 19 2018
Home / Sudina Special / ಕೈಗೆ ಹಾಕಿದ್ದ ಕೋಳ ತೆಗೆದು ಪೊಲೀಸ್​ ವಾಹನದೊಂದಿಗೆ ಪರಾರಿಯಾದ ಮಹಿಳೆ…! : ಇಲ್ಲಿದೆ ವೀಡಿಯೋ
Buy Bitcoin at CEX.IO

ಕೈಗೆ ಹಾಕಿದ್ದ ಕೋಳ ತೆಗೆದು ಪೊಲೀಸ್​ ವಾಹನದೊಂದಿಗೆ ಪರಾರಿಯಾದ ಮಹಿಳೆ…! : ಇಲ್ಲಿದೆ ವೀಡಿಯೋ

ಲುಫ್ಕಿನ್ (ಟೆಕ್ಸಾಸ್​) : ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ 33 ವರ್ಷದ ಮಹಿಳೆಯನ್ನು ಪೊಲೀಸರು ವಾಹನದಲ್ಲಿ ಕರೆದುಕೊಂಡು ಹೋಗುವಾಗ ದೊಡ್ಡ ಹೈಡ್ರಾಮಾವೇ ನಡೆದಿದೆ. ಈ ಮಹಿಳೆ ತನ್ನ ಕೈಗೆ ಹಾಕಿದ್ದ ಕೋಳವನ್ನು ತೆಗೆದು ಪೊಲೀಸ್​ ವಾಹನದೊಂದಿಗೆಯೇ ಪರಾರಿಯಾಗಿದ್ದಾಳೆ. ಈ ವೀಡಿಯೋವನ್ನು ಲುಫ್ಕಿನ್​ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

ವಾಹನದೊಂದಿಗೆ ಪರಾರಿಯಾದ ಮಹಿಳೆಯನ್ನು ಸ್ವಲ್ಪ ಹೊತ್ತಿನಲ್ಲೇ ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನು 33 ವರ್ಷದ ಟೋಸ್ಚಾ ಫೇ ಸ್ಪೊನ್ಸಲರ್ ಎಂದು ಗುರುತಿಸಲಾಗಿದೆ. ಈಕೆಯನ್ನು ಏಂಜಲೀನಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ಸೆಪ್ಟೆಂಬರ್​ 2 ರಂದು ಈ ಘಟನೆ ನಡೆದಿದೆ. ತಕ್ಷಣ ಕಾರ್ಯಪೃವೃತ್ತರಾದ ಪೊಲೀಸರು ಈಕೆಯನ್ನು ಹಿಡಿದಿದ್ದಾರೆ,

ಕೈಗೆ ಹಾಕಿದ್ದ ಕೋಳ ತೆಗೆದ ಈ ಮಹಿಳೆ ವಾಹನವನ್ನು 100 ಕಿಲೋ ಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದಳು. ಪೊಲೀಸರೂ ಈಕೆಯನ್ನು ಬೆನ್ನಟ್ಟಿದ್ದರು. ಆದರೆ, ಒಂದು ಕಡೆ ವಾಹನ ನಿಯಂತ್ರಣ ತಪ್ಪಿದ್ದರಿಂದ ಈಕೆಯ ಬಂಧನ ಸುಲಭವಾಗಿತ್ತು… ಈಕೆಯ ವೇಗದ ವಾಹನ ಚಲಾವಣೆಯಿಂದ ಪೊಲೀಸ್ ವಾಹನ ಮತ್ತು ಇತರ ವಾಹನಕ್ಕೂ ತುಂಬಾ ಹಾನಿಯಾಗಿದೆ.

CEX.IO Bitcoin Exchange

About sudina

Check Also

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ …

Leave a Reply

Your email address will not be published. Required fields are marked *

error: Content is protected !!