Friday , September 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಹ್ಯಾಪಿ ಬರ್ತ್​ಡೇ ಅಕ್ಷಯ್​​ : ಬಾಲಿವುಡ್ ಕರಾಟೆ ಕಿಂಗ್​ಗೆ 50ನೇ ವಸಂತದ ಖುಷಿ

ಹ್ಯಾಪಿ ಬರ್ತ್​ಡೇ ಅಕ್ಷಯ್​​ : ಬಾಲಿವುಡ್ ಕರಾಟೆ ಕಿಂಗ್​ಗೆ 50ನೇ ವಸಂತದ ಖುಷಿ

ಮುಂಬೈ : ಬಾಲಿವುಡ್ ಕರಾಟೆ ಕಿಂಗ್ ಅಕ್ಷಯ್ ಕುಮಾರ್​​ 50ನೇ ವರ್ಷದ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಇವತ್ತು ಅಕ್ಷಯ್ ಅವರ 50ನೇ ಹುಟ್ಟುಹಬ್ಬ. ಇಷ್ಟು ಸುದೀರ್ಘ ಪಯಣದ ನಡುವೆಯೂ ಅಕ್ಷಯ್​ ಈಗಲೂ ಬಾಲಿವುಡ್​​ ಆಳುತ್ತಿರುವ ನಾಯಕರಲ್ಲಿ ಒಬ್ಬರು… ಇದು ಅಕ್ಷಯ್ ತಾಕತ್ತು…

1991ರಲ್ಲಿ ಸೌಗಂಧ್​​ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ಅಕ್ಷಯ್. ಇದಕ್ಕೂ ಮೊದಲು ವಿದೇಶದ ಹೊಟೇಲ್​ನಲ್ಲಿ ಅಕ್ಷಯ್ ಬಾಣಸಿಗ ಮತ್ತು ವೇಯ್ಟರ್ ಆಗಿದ್ದರು ಎಂಬ ವಿಷಯ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.

ಆದರೆ, ಕಿಲಾಡಿ ಸರಣಿಯ ಚಿತ್ರಗಳು ಅಕ್ಷಯ್​ಗೆ ಮತ್ತೊಂದು ರೀತಿಯ ಕೀರ್ತಿ ತಂದುಕೊಟ್ಟವರು. ಎರಡು ದಶಕದಿಂದ ಅಕ್ಷಯ್​​​​​ ಬಾಲಿವುಡ್​ನಲ್ಲಿ ಮಿಂಚಲು ಈ ಕಿಲಾಡಿ ಸರಣಿಯ ಚಿತ್ರಗಳು ಭದ್ರಬುನಾದಿಯನ್ನೇ ಹಾಕಿಕೊಟ್ಟವರು ಎಂದರೆ ಖಂಡಿತಾ ತಪ್ಪಾಗಲಾರದು.

ಚಿತ್ರರಂಗ ನಿಂತ ನೀರಲ್ಲ. ಇಲ್ಲಿ ಸದಾ ಒಂದಲ್ಲ ಒಂದು ಪ್ರಯೋಗಗಳು ಆಗುತ್ತಲೇ ಇರುತ್ತವೆ. ಆ ಪ್ರಯೋಗ, ಬದಲಾವಣೆಗೆ ಅನುಗುಣವಾಗಿ ಅಕ್ಷಯ್ ಕೂಡಾ ಪ್ರಯಣಿಸುತ್ತಾ ಬಂದಿದ್ದಾರೆ. ನಾಯಕ ಆಗಿದ್ದವರು. ಖಳನಾಯಕನೂ ಆಗಿದ್ದಾರೆ. ಕಾಮಿಡಿ ಪಾತ್ರವನ್ನೂ ಮಾಡಿದ್ದಾರೆ. ಪೋಷಕ ಪಾತ್ರದಲ್ಲೂ ಮಿಂಚಿದ್ದಾರೆ. ಪರಿಪೂರ್ಣ ಕಲಾವಿದನಿಂದ ಮಾತ್ರ ಇದು ಸಾಧ್ಯ. ಹ್ಯಾಪಿ ಬರ್ತ್​ ಡೇ ಅಕ್ಷಯ್​​… ನಿಮ್ಮ ಜೀವನ ಇನ್ನಷ್ಟು ಖುಷಿಯಿಂದ ಕೂಡಿರಲಿ, ಯಶಸ್ಸು ಸದಾ ನಿಮ್ಮ ಬೆನ್ನಿಗಿರಲಿ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!