Sunday , November 18 2018
ಕೇಳ್ರಪ್ಪೋ ಕೇಳಿ
Home / News NOW / ಕ್ಯಾನರ್​​ನಿಂದ ಗೆದ್ದರೂ ಮಳೆಯನ್ನು ಗೆಲ್ಲಲಾಗಲಿಲ್ಲ…! : ವರುಣನಿಗೆ ಬಲಿಯಾದರು ಈ ನತದೃಷ್ಟೆ…!

ಕ್ಯಾನರ್​​ನಿಂದ ಗೆದ್ದರೂ ಮಳೆಯನ್ನು ಗೆಲ್ಲಲಾಗಲಿಲ್ಲ…! : ವರುಣನಿಗೆ ಬಲಿಯಾದರು ಈ ನತದೃಷ್ಟೆ…!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದೆ… ಶುಕ್ರವಾರ ಸುರಿದಿದ್ದ ಭಾರೀ ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಈ ಮೂವರಲ್ಲಿ ಮಾರಕ ಕ್ಯಾನ್ಸರನ್ನೇ ಗೆದ್ದು ಬಂದ ಮಹಿಳೆಯೂ ಸೇರಿದ್ದಾರೆ. ಎಂತಹ ದುರಾದೃಷ್ಟ ನೋಡಿ… ಕ್ಯಾನ್ಸರ್ ಮೂಲಕ ಸಾವು ಗೆದ್ದಿದ್ದ ಭಾರತಿ ಎಂಬುವವರು ಮಳೆಯಿಂದಾದ ಅವಾಂತರದಿಂದ ಸಾವನ್ನಪ್ಪಿದ್ದಾರೆ…!

ಜೆಸಿ ರಸ್ತೆಯ ಮಿನರ್ವ ವೃತ್ತದಲ್ಲಿ ನಿನ್ನೆ ಕಾರಿನ ಮೇಲೆ ಮರ ಬಿದ್ದು ಒಂದೇ ಕುಟುಂಬದ ಮೂವರು ಕೊನೆಯುಸಿರೆಳೆದಿದ್ದರು. ಈ ದುರಂತದಲ್ಲಿ ಭಾರತಿ, ಇವರ ಪತಿ ರಮೇಶ್ ಮತ್ತು ಸಹೋದರ ಜಗದೀಶ್ ಸಾವನ್ನಪ್ಪಿದ್ದರು. ಭಾರತಿ ಇತ್ತೀಚೆಗಷ್ಟೇ ಸ್ತನದ ಕ್ಯಾನ್ಸರ್​ನೊಂದಿಗೆ ಸೆಣಸಾಡಿ ಸಮಸ್ಯೆಯಿಂದ ಮುಕ್ತರಾಗಿ ಸಹಜ ಜೀವನ ಆರಂಭಿಸಿದ್ದರು. ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ.

ಭಾರತಿ ಅವರ ಚಿಕಿತ್ಸೆಗಾಗಿ ಪತಿ ರಮೇಶ್ ಸಾಕಷ್ಟು ಸಾಲ ಮಾಡಿದ್ದರಿಂದ ಸಂಸಾರದ ನೊಗಕ್ಕೆ ಹೆಗಲು ಕೊಡಲು ಭಾರತಿ ಕೂಡಾ ಹೋಮ್ ಗಾರ್ಡ್ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ನಿನ್ನೆಯ ಮಳೆಯಿಂದ ಭಾರತಿ ಅವರ ಬದುಕು ಕೊನೆಯಾಗಿದೆ… ಇದು ಎಲ್ಲರಲ್ಲೂ ನೋವು ತರಿಸಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!