ಬೆಂಗಳೂರು : ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಡೆಡ್ಲಿ ಬ್ಲೂ ವೇಲ್ ಚಾಲೆಂಜ್ ಈಗ ಬೆಂಗಳೂರಿಗೂ ವಕ್ಕರಿಸಿದೆ. ಇಬ್ಬರು ವಿದ್ಯಾರ್ಥಿಗಳು ಈ ಆಟ ಆಡುತ್ತಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. 50 ದಿನಗಳ ಈ ಚಾಲೆಂಜ್ನಲ್ಲಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಚಾಲೆಂಜ್ ಕೂಡಾ ಇದೆ. ಈಗ ಬೆಂಗಳೂರಿನಲ್ಲಿ ಇಬ್ಬರು ಕಾಮರ್ಸ್ ವಿದ್ಯಾರ್ಥಿಗಳು ಈ ಆಟ ಆಡುತ್ತಿರುವುದು ಗೊತ್ತಾಗಿದೆ. ಇದು ಬೆಂಗಳೂರಿನಲ್ಲಿ ದಾಖಲಾಗಿರುವ ಪ್ರಥಮ ಬ್ಲೂ ವೇಲ್ ಕೇಸ್ ಆಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎರಡನೇ ವರ್ಷದ ಕಾಮರ್ಸ್ ಓದುತ್ತಿರುವ 18 ಮತ್ತು 19 ವರ್ಷದ ಇಬ್ಬರು ವಿದ್ಯಾರ್ಥಿಗಳು ಈ ಆಟ ಆಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಉಪನ್ಯಾಸಕರು ಈ ಇಬ್ಬರನ್ನು ಪತ್ತೆ ಮಾಡಿದ್ದಾರೆ. ತರಗತಿಗೆ ತಡವಾಗಿ ಬರುವುದು ಮತ್ತು ಎಡಮಣಿ ಗಟ್ಟಿನಲ್ಲಿ ವಿಲಕ್ಷಣ ಗಾಯಗಳನ್ನು ಕಂಡು ಉಪನ್ಯಾಸಕರು ಅನುಮಾನಗೊಂಡಿದ್ದರು. ಈ ಬಗ್ಗೆ ಪೊಲೀಸರು ಕೂಡಾ ತನಿಖೆ ನಡೆಸುತ್ತಿದ್ದಾರೆ. ಇನ್ನು, ಇದರಲ್ಲಿ ಓರ್ವ ಹುಡುಗನ ವಾಟ್ಅಪ್ ಸ್ಟೇಟಸ್ನಲ್ಲಿ ಬ್ಲೂವೇಲ್ ಗೇಮ್ನ ಇಮೇಜ್ನೊಂದಿಗೆ ‘ಐ ಯಾಮ್ ಆನ್ ದಿ ವೇ’ ಎಂದು ಬರೆಯಲಾಗಿತ್ತು.
ಈ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ಸಹಪಾಠಿಗಳಿಗೆ ಅನುಮಾನ ಬಂದ ಬಳಿಕ ತಕ್ಷಣ ಈ ವಿಷಯವನ್ನು ಪ್ರಾಂಶುಪಾಲರಿಗೆ ತಿಳಿಸಿದ್ದರು. ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದರು.
Read Also : ಬ್ಲೂವೇಲ್ ಗೇಮ್ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ…? : ಇಲ್ಲಿವೆ ಪಂಚಸೂತ್ರಗಳು