Thursday , October 18 2018
ಕೇಳ್ರಪ್ಪೋ ಕೇಳಿ
Home / News NOW / ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆ : ಸಚಿವ ರಾಮಲಿಂಗಾ ರೆಡ್ಡಿ

ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆ : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರೊಂದಿಗೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲೇ ಹಂತಕರನ್ನು ಬಂಧಿಸಲಾಗುವುದು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಗೌರಿಲಂಕೇಶ್ ಹತ್ಯೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಿದ್ದು ಮುಖ್ಯಮಂತ್ರಿಗಳು. ಡಿಜಿಪಿಗೆ ಅಧಿಕಾರ ಕೊಟ್ಟಿದ್ದೀವಿ, ಅವರು ಎಸ್ಐಟಿ ರಚನೆ ಮಾಡಿದ್ದಾರೆ ಎಂದು ಹೇಳಿರುವ ಸಚಿವರು ಅಧಿಕಾರಿ ಜಾಮ್ದಾರ್, ಹೊರಟ್ಟಿ ಸೇರಿದಂತೆ ಬೆದರಿಕೆ ಇದ್ದವರಿಗೆ ಭದ್ರತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು, ಪೊಲೀಸರಿಗೆ ಒಂದಷ್ಟು ಸಲಹೆ ನೀಡಿದ ಸಚಿವರು ನನ್ನ ಬಳಿ ಯಾವುದೇ ಲಾಬಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರೌಡಿಗಳನ್ನು ಮಟ್ಟ ಹಾಕಿ ಇಲ್ಲದಿದ್ದರೆ ರಾಜ್ಯದಿಂದ ಗಡಿಪಾರು ಮಾಡಿ ಎಂದೂ ವಾರ್ನಿಂಗ್ ನೀಡಿದ್ದಾರೆ. ಸಭೆಯಲ್ಲಿ ಡಿಜಿ, ಐಜಿಪಿ ಆರ್‌.ಕೆ.ದತ್ತಾ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸುನಿಲ್‌ ಕುಮಾರ್‌, ರಾಜ್ಯದ ಎಲ್ಲಾ ಎಸ್‌ಪಿಗಳು,ಬೆಂಗಳೂರು ನಗರದ ಎಲ್ಲಾ ಎಸ್‌ಐಗಳು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!