Wednesday , January 23 2019
ಕೇಳ್ರಪ್ಪೋ ಕೇಳಿ
Home / Sandalwood / ನದಿ ಉಳಿಸುವ ಅಭಿಯಾನದ ಸಂವಾದದಲ್ಲಿ ಯಶ್​ ಆಂಕರ್​​

ನದಿ ಉಳಿಸುವ ಅಭಿಯಾನದ ಸಂವಾದದಲ್ಲಿ ಯಶ್​ ಆಂಕರ್​​

ಬೆಂಗಳೂರು : ಸ್ಯಾಂಡಲ್​ವುಡ್​ ಸ್ಟಾರ್ ಯಶ್​ ಬರೀ ನಟನಾಗಿ ಮಾತ್ರ ಉಳಿದಿಲ್ಲ. ಹಲವು ಸಾಮಾಜಿಕ ಕಾರ್ಯದಲ್ಲೂ ಇವರು ಗಮನ ಸೆಳೆದವರು. ಅದರಲ್ಲೂ ನೀರು, ಕೆರೆಗಳ ರಕ್ಷಣೆಯ ವಿಚಾರದಲ್ಲಿ ಯಶ್ ಮಾಡಿದ ಕೆಲಸ ಎಲ್ಲರಿಗೂ ಮಾದರಿ. ಇಂತಹ ಯಶ್​ ಈಗ ಆಧ್ಯಾತ್ಮಿಕ ಚಿಂತಕ ಜಗ್ಗಿ ವಾಸುದೇವ್​ ಅವರ ದೇಶಾದ್ಯಂತ ನಡೆಯುವ ನದಿ ಉಳಿಸುವ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಅಲ್ಲದೆ, ಈ ಅಭಿಮಾನದಲ್ಲಿ ಆಂಕರ್ ಕೂಡಾ ಆಗಿದ್ದಾರೆ ಯಶ್. ಜಗ್ಗಿ ವಾಸುದೇವ್ ಅವರನ್ನು ಯಶ್​ ಸಂದರ್ಶನ ಮಾಡಿದ್ದಾರೆ. ಈ ವೇಳೆ ಪತ್ನಿ ರಾಧಿಕಾ ಪಂಡಿತ್​ ಯಶ್ ಜೊತೆಗಿದ್ದು ಖುಷಿಪಟ್ಟಿದ್ದಾರೆ. ಈ ಸಂದರ್ಶನ ಭಾನುವಾರ ಝಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಅಭಿಯಾನಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ, ಹಲವು ಚಿತ್ರರಂಗದ ಕಲಾವಿದರು ಬೆಂಬಲವಾಗಿ ನಿಂತಿದ್ದಾರೆ. ನದಿಗಳ ಉಳಿವಿಗೆ ಇದೊಂದು ದೊಡ್ಡ ಆಂದೋಲನವಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!