Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Coastalwood / ‘ಅಮ್ಮೆರ್ ಪೊಲೀಸಾ?’ ಚಿತ್ರಕ್ಕೆ ಸಿದ್ಧತೆ ಬಲು ಜೋರು

‘ಅಮ್ಮೆರ್ ಪೊಲೀಸಾ?’ ಚಿತ್ರಕ್ಕೆ ಸಿದ್ಧತೆ ಬಲು ಜೋರು

ಮಂಗಳೂರು : ಸೂರಜ್ ಕೆ ಶೆಟ್ಟಿ ನಿರ್ದೇಶನದ ‘ಅಮ್ಮೆರ್ ಪೊಲೀಸಾ?’ ಚಿತ್ರದ ಸಿದ್ಧತೆ ಬಲು ಜೋರಾಗಿದೆ. ಸೆಪ್ಟೆಂಬರ್ 29ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಚಿತ್ರದ ಮುಹೂರ್ತ ಕೂಡಾ ನಡೆಯಲಿದೆ.

ಈ ಹಿಂದೆ ಎಕ್ಕಸಕ್ಕ, ಪಿಲಿಬೈಲ್ ಯಮುನಕ್ಕ ಚಿತ್ರಗಳ ಮೂಲಕ ಸೂರಜ್ ಶೆಟ್ಟಿ ಗಮನ ಸೆಳೆದಿದ್ದರು. ಈ ಹೊಸ ಚಿತ್ರದಲ್ಲಿ ರೂಪೇಶ್​ ಶೆಟ್ಟಿ ಮತ್ತು ಪೂಜಾ ಶೆಟ್ಟಿ ನಾಯಕ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಕೋಸ್ಟಲ್​ವುಡ್​ನ ಪ್ರಮುಖ ಕಲಾವಿದರಾದ ಅರವಿಂದ ಬೋಳಾರ್​, ಸತೀಶ್​ ಬಂದಲೆ ಬಲೆ ತೆಲಿಪಾಲೆ ಖ್ಯಾತಿಯ ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಮತ್ತು ದೀಪಕ್​ ರೈ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ರಾಜೇಶ್​ ಬಿ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!