Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ಭಾರಿ ಮಳೆ : ನೆಲಮಂಗಲದಲ್ಲಿ ಮನೆ ಕುಸಿತ, ರಸ್ತೆಯಲ್ಲಿ ನಿಂತ ನೀರಿನಿಂದ ಸವಾರರ ಪರದಾಟ

ಭಾರಿ ಮಳೆ : ನೆಲಮಂಗಲದಲ್ಲಿ ಮನೆ ಕುಸಿತ, ರಸ್ತೆಯಲ್ಲಿ ನಿಂತ ನೀರಿನಿಂದ ಸವಾರರ ಪರದಾಟ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ನೆಲಮಂಗಲದ ತ್ಯಾಮಗೊಂಡ್ಲು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ಕೋಟೆ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮ್ಮಜ್ಜಿ ಎಂಬುವವರು ಮನೆ ಕಳೆದುಕೊಂಡಿದ್ದಾರೆ.

ಇನ್ನೊಂದು ಕಡೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಂತೆ ಇರುವ ಅಡಕಿಮಾರನಹಳ್ಳಿಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ನೆಲಮಂಗಲದಿಂದ ಬೆಂಗಳೂರಿಗೆ ಕಡೆಗೆ ಮತ್ತು ಬೆಂಗಳೂರಿನಿಂದ ನೆಲಮಂಗಲ ಕಡೆಗೆ ಇದೇ ಮಾರ್ಗವಾಗಿ ಸಾಗಬೇಕಾಗಿದ್ದರಿಂದ ವಾಹನ ಸವಾರರು ತುಂಬಾ ಕಷ್ಟ ಅನುಭವಿಸುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!