Saturday , December 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮುದ್ದು ಮಗಳೊಂದಿಗೆ ಪ್ರಧಾನಿ ಭೇಟಿಯಾದ ಅದ್ನನ್ ಸಮಿ ದಂಪತಿ

ಮುದ್ದು ಮಗಳೊಂದಿಗೆ ಪ್ರಧಾನಿ ಭೇಟಿಯಾದ ಅದ್ನನ್ ಸಮಿ ದಂಪತಿ

ನವದೆಹಲಿ : ಗಾಯಕ ಅದ್ನನ್ ಸಮಿ ಮತ್ತು ಪತ್ನಿ ರೋಯ ತಮ್ಮ ಐದು ತಿಂಗಳ ಮುದ್ದು ಮಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಕೂಡಾ ಸಮಿ ದಂಪತಿಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಈ ದಂಪತಿ ಪ್ರಧಾನಿ ಜೊತೆಗಿದ್ದರು. ಮೋದಿ ಅವರು ಕೂಡಾ ಐದು ತಿಂಗಳ ಹೆಣ್ಣು ಮಗುವನ್ನು ಆಡಿಸಿ ಮುದ್ದಿಸಿದರು. ಈ ಖುಷಿಯನ್ನು ಸಮಿ ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ.


ರೋಯ ಸಮಿ ಖಾನ್ ಅದ್ನನ್ ಸಮಿ ಅವರ ಮೂರನೇ ಪತ್ನಿ. 2010ರಲ್ಲಿ ರೋಯ ಸಮಿ ಅವರನ್ನು ವರಿಸಿದ್ದರು. ಕಳೆದ ಮೇ ತಿಂಗಳಲ್ಲಿ ಈ ದಂಪತಗೆ ಮುದ್ದಾದ ಹೆಣ್ಣು ಮಗು ಜನಿಸಿತ್ತು. ಇದಕ್ಕಿಂತಲೂ ಮುಂಚೆ ಸಮಿ 1993ರಲ್ಲಿ ಪಾಕಿಸ್ತಾನದ ನಟಿ ಜಿಬಾ ಭಕ್ತಿಯಾರ್ ಮತ್ತು 2001ರಲ್ಲಿ ಅರಬ್ ಸಾಬ್ ಗಲ್ದಾರಿಯನ್ನು ಮದುವೆಯಾಗಿದ್ದರು.

ಭಾರತದಲ್ಲಿ ಹಲವು ಹಾಡನ್ನು ಹಾಡಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅದ್ನನ್ ಸಮಿ 2016ರಲ್ಲಿ ಭಾರತದ ಪೌರತ್ವವನ್ನು ಪಡೆದಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!