Monday , January 22 2018
Home / Film News / Mollywood / ಜೈಲಲ್ಲಿ ಹೆಚ್ಚುತ್ತಿದೆ ದಿಲೀಪ್ ಭೇಟಿಯಾಗುವವರ ಸಂಖ್ಯೆ : ಎಸ್‍ಐಟಿಗೆ ತಲೆನೋವು
Buy Bitcoin at CEX.IO

ಜೈಲಲ್ಲಿ ಹೆಚ್ಚುತ್ತಿದೆ ದಿಲೀಪ್ ಭೇಟಿಯಾಗುವವರ ಸಂಖ್ಯೆ : ಎಸ್‍ಐಟಿಗೆ ತಲೆನೋವು

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಮಲಯಾಳಂನ ಖ್ಯಾತ ನಟ ದಿಲೀಪ್ ಅವರನ್ನು ಭೇಟಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅಲುವಾ ಉಪ ಕಾರಾಗೃಹದಲ್ಲಿರುವ ದಿಲೀಪ್‍ರನ್ನು ಪ್ರತಿದಿನ ಹಲವರು ಖ್ಯಾತನಾಮರು ಭೇಟಿಯಾಗುತ್ತಿದ್ದು, ಇದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ, ಈ ಭೇಟಿಗೆ ಕೊನೆಯಾಡಲು ಎಸ್‍ಐಟಿ ನ್ಯಾಯಾಲಯದ ಮೊರೆ ಹೋಗಿದೆ.

ಜನ ಈ ರೀತಿ ಆರೋಪಿಯನ್ನು ಭೇಟಿಯಾಗುತ್ತಿದ್ದರೆ ಸದ್ಯ ನಡೆಯುತ್ತಿರುವ ತನಿಖೆಗೆ ತೊಂದರೆ ಆಗುತ್ತದೆ ಎಂದು ಎಸ್‍ಐಟಿ ಅಂಗಮಲೈ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ವಾರಕ್ಕೆ ಎರಡು ಬಾರಿ ಆರೋಪಿಗಳನ್ನು ಭೇಟಿಯಾಗಲು ಅವಕಾಶ ಇದೆ. ಆದರೆ, ಇಲ್ಲಿ ರಜಾದಿನಗಳಲ್ಲೂ ಕೆಲವರು ಬಂದು ದಿಲೀಪ್ ಭೇಟಿಯಾಗುತ್ತಿದ್ದಾರೆ. ಪ್ರಭಾವಿಗಳೂ ಬಂದು ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರು ಸ್ವೀಕರಿಸಿರುವ ನ್ಯಾಯಾಲಯ ದಿಲೀಪ್‍ರನ್ನು ಭೇಟಿಯಾದವರ ಸಂಪೂರ್ಣ ಮಾಹಿತಿ ನೀಡುವಂತೆ ಅಲುವಾ ಉಪ ಕಾರಶಗೃಹದ ಅಧೀಕ್ಷಕರಿಗೆ ಆದೇಶ ನೀಡಿದೆ.

CEX.IO Bitcoin Exchange

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!