Tuesday , February 19 2019
ಕೇಳ್ರಪ್ಪೋ ಕೇಳಿ
Home / Mumbai Mail / ಸಾಂಸ್ಕೃತಿಕ ರಾಯಭಾರಿ ತಾರಾ ಎಸ್​ ರಾವ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ

ಸಾಂಸ್ಕೃತಿಕ ರಾಯಭಾರಿ ತಾರಾ ಎಸ್​ ರಾವ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ

ಮುಂಬೈ : ಇತ್ತೀಚೆಗಷ್ಟೇ ಮುಂಬೈಯಲ್ಲಿ ವಿಧಿವಶರಾಗಿದ್ದ ಸಾಂಸ್ಕೃತಿಕ ರಾಯಭಾರಿ, ಕನ್ನಡತಿ ತಾರಾ ಎಸ್​ ರಾವ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು. ಚೆಂಬೂರ್​ನಲ್ಲಿ ಈ ಶೃದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಗೋಕುಲ ಕಲಾಶ್ರೀ, ನೃತ್ಯಗಾರ್ತಿ ತಾರಾ ಎಸ್ ರಾವ್ ಅವರ ಕಾರ್ಯವನ್ನು ಈ ಸಂದರ್ಭದಲ್ಲಿ ಎಲ್ಲರೂ ನೆನೆದರು.

ಬಿಎಸ್​ಕೆಬಿ ಅಸೋಸಿಯೇಷನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್​ನ ಅಧ್ಯಕ್ಷ ಡಾ.ಸುರೇಶ್​ ಎಸ್​ ರಾ​ವ್​ ಕಟೀಲ್​, ಬಾಂಡೂಪ್​ ಸೆಂಟ್ರಲ್ ಹೆಲ್ತ್​ ಹೋ ಮೆಡಿಕಲ್​ ಆಫೀಸರ್​ ಡಾ.ಕೆ.ರತ್ನಾಕರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ತಾರಾ ಅವರನ್ನು ಸ್ಮರಿಸಿದರು.

ಬೆಂಗಳೂರಿನ ಟೂರಿಸ್ಟ್‌ ಹೊಟೇಲ್‌ನ  ಮಾಲಕ ಪಿ. ವಾದಿರಾಜ್‌ ಮತ್ತು ಜಯಲಕ್ಷ್ಮೀ ದಂಪತಿಯ  ಪುತ್ರಿ, ಮೂಲತಃ ಮಂಗಳೂರು ಸುರತ್ಕಲ್‌ ಬಾಳದವರಾದ ತಾರಾ ಅವರು ಹಲವು ವರ್ಷದಿಂದ ಮುಂಬೈಯಲ್ಲಿ ನೆಲೆಸಿದ್ದಾರೆ. ಕಾಂಜೂರ್‌ ಮಾರ್ಗ್‌ ಪಶ್ಚಿಮದ ಗ್ರೇಟ್‌ ಈಸ್ಟರ್ನ್ ಗಾರ್ಡನ್ಸ್‌ ಅಪಾರ್ಟ್‌ಮೆಂಟ್‌ನ ನಿವಾಸಿಯಾಗಿದ್ದ ತಾರಾ ಅವರು ಅಪ್ರತಿಮ ನೃತ್ಯ ಕಲಾವಿದೆ. ಗೋಕುಲ ಕಲಾಶ್ರೀ ಎಂಬ ಬಿರುದೂ ಇವರಿಗೆ ಸಿಕ್ಕಿತ್ತು. ಆಗಸ್ಟ್​ 22 ರಂದು ಇವರು ಅಸೌಖ್ಯದಿಂದ ಭಾಂಡೂಪ್‌ ಪಶ್ಚಿಮದ ಸೆಂಟ್ರಲ್‌ ಹೆಲ್ತ್‌ ಹೋಮ್‌ನಲ್ಲಿ ಕೊನೆಯುಸಿರೆಳೆದಿದ್ದರು. ಮೃತರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದರು. ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ಓರಿಯಂಟಲ್‌ ನೃತ್ಯಗಳಲ್ಲಿ ಪರಿಣತಿ ಹೊಂದಿದ್ದ ತಾರಾ ಅವರು ಹಲವರು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದರು. ಹಲವು ಸಾಮಾಜಿಕ ಕಾರ್ಯದಲ್ಲೂ ಇವರು ಸಕ್ರಿಯರಾಗಿದ್ದರು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!