Friday , October 19 2018
ಕೇಳ್ರಪ್ಪೋ ಕೇಳಿ
Home / Film News / Kollywood / ಟರ್ಕಿ ಗಡಿಯಲ್ಲಿ ಸಿಕ್ಕಿಕೊಂಡ ನಿರ್ದೇಶಕ ಗೌತಮ್​ ಮೆನನ್​ ಮತ್ತು ಅವರ ಶೂಟಿಂಗ್ ಯೂನಿಟ್​ : ಸಹಾಯಕ್ಕೆ ಮೊರೆ

ಟರ್ಕಿ ಗಡಿಯಲ್ಲಿ ಸಿಕ್ಕಿಕೊಂಡ ನಿರ್ದೇಶಕ ಗೌತಮ್​ ಮೆನನ್​ ಮತ್ತು ಅವರ ಶೂಟಿಂಗ್ ಯೂನಿಟ್​ : ಸಹಾಯಕ್ಕೆ ಮೊರೆ

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಗೌತಮ್ ಮೆನನ್​ ಸದ್ಯ ‘ದ್ರುವ ನಕ್ಷತ್ರಮ್​’ ಎಂಬ ಚಿತ್ರ ಮಾಡುತ್ತಿದ್ದಾರೆ. ವಿಕ್ರಮ್ ಮತ್ತು ಐಶ್ವರ್ಯ ರಾಜೇಶ್​ ಈ ಚಿತ್ರದಲ್ಲಿ ಲೀಡ್​ ರೋಲ್​ನಲ್ಲಿ ಇದ್ದಾರೆ. ಸದ್ಯ ಈ ಚಿತ್ರತಂಡ ಟರ್ಕಿ ಗಡಿಯಲ್ಲಿ ಇದೆ. ಆದರೆ, ಇಲ್ಲೇ ಸುಮಾರು 24 ಗಂಟೆಯಿಂದ ಈ ಚಿತ್ರದ ಸಿಲುಕಿದೆ. ಕ್ಯಾಮೆರಾ ಮತ್ತು ಇತರ ಪರಿಕರಗಳನ್ನು ಹಿಡಿದುಕೊಂಡು ಹೋಗಲು ಇಲ್ಲಿನ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಗೌತಮ್​ ಮೆನನ್​ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ವಿಟರ್​ನಲ್ಲೂ ಈ ಬಗ್ಗೆ ಬರೆದುಕೊಂಡಿದ್ದಾರೆ.

ಇಸ್ತಾಂಬುಲ್​ನಿಂದ ಜಾರ್ಜಿಯಾ ಕಡೆಗೆ ರಸ್ತೆ ಮೂಲಕ ಕ್ಯಾಮೆರಾ ಸೇರಿದಂತೆ ಹಲವು ಶೂಟಿಂಗ್ ಪರಿಕರಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇವರನ್ನು ಅಲ್ಲಿನ ಅಧಿಕಾರಿಗಳು ತಡೆದಿದ್ದರು. ಎಲ್ಲಾ ದಾಖಲೆಗಳು ಇದ್ದರೂ ಅಧಿಕಾರಿಗಳು ಮುಂದೆ ಹೋಗಲು ಬಿಡುತ್ತಿಲ್ಲ ಎಂದು ಗೌತಮ್ ಅಲವತ್ತುಕೊಂಡಿದ್ದರು.


ಆದರೆ, ಬಳಿಕ ಟ್ವಿಟರ್​ನಲ್ಲಿ ಇವರ ಸಂಕಷ್ಟ ಕಂಡ ಹಲವರು ಇವರಿಗೆ ಸಹಾಯ ಮಾಡಿದ್ದಾರೆ. ಇದನ್ನೂ ಮೆನಸ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!