Monday , October 22 2018
ಕೇಳ್ರಪ್ಪೋ ಕೇಳಿ
Home / Sudina Special / ಮಹೇಂದ್ರಾದಿಂದ ಇ ರಿಕ್ಷಾ ಲೋಕಾರ್ಪಣೆ : 1.12 ಲಕ್ಷಕ್ಕೆ ಸಿಗುತ್ತದೆ ಮಿನಿ ವಾಹನ

ಮಹೇಂದ್ರಾದಿಂದ ಇ ರಿಕ್ಷಾ ಲೋಕಾರ್ಪಣೆ : 1.12 ಲಕ್ಷಕ್ಕೆ ಸಿಗುತ್ತದೆ ಮಿನಿ ವಾಹನ

ನವದೆಹಲಿ : ಭಾರತವನ್ನು ಇ ವಾಹನಯುಕ್ತ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಕನಸಿಗೆ ಸರಿಯಾಗಿ ಮಹೇಂದ್ರ ಕಂಪೆನಿ ತನ್ನ ಮೊದಲ ಇ ರಿಕ್ಷಾವನ್ನು ಲೋಕಾರ್ಪಣೆ ಮಾಡಿದೆ. ಈ ಇ ರಿಕ್ಷಾಗೆ ಇ ಅಲ್ಫಾ ಮಿನಿ ಎಂದು ಹೆಸರಿಡಲಾಗಿದೆ. ಇದರ ಬೆಲೆ ಸುಮಾರು 1.12 ಲಕ್ಷ ಆಗಿದ್ದು, ನವದೆಹಲಿ, ಕೋಲ್ಕತ್ತಾ ಮತ್ತು ಲಕ್ನೋದಲ್ಲಿ ಕಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯದ ವರೆಗೆ ದೇಶದಲ್ಲಿ ಮಹೇಂದ್ರ ಸಂಸ್ಥೆ ಮಾತ್ರ ಬ್ಯಾಟರಿ ಚಾಲಿತ ವಾಹನವನ್ನು ತಯಾರು ಮಾಡುತ್ತಿದೆ.

ಸದ್ಯ ಬಿಡುಗಡೆಯಾಗಿರುವ ಇ ಅಲ್ಫಾ ಮಿನಿ 120ಎಎಚ್​​ ಬ್ಯಾಟರಿ ಹೊಂದಿದೆ. ಸಿಟಿಯೊಳಗೆ ಸುತ್ತಾಟಕ್ಕೆ ಇದು ಹೆಚ್ಚು ಅನುಕೂಲಕರವಾಗಲಿದ್ದು, ಬ್ಯಾಟರಿ ಫುಲ್​ ಚಾರ್ಜ್​ ಆದ ಮೇಲೆ ಗಂಟೆಗೆ 25 ಕಿಲೋ ಮೀಟರ್​ ವೇಗದಲ್ಲಿ 85 ಕಿಲೋ ಮೀಟರ್​ ಚಲಿಸಬಹುದಾಗಿದೆ ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಮಹೇಂದ್ರ ಕಂಪೆನಿ ತಿಂಗಳಿಗೆ 1000 ರಿಕ್ಷಾವನ್ನು ತಯಾರು ಮಾಡುವ ತಾಕತ್ತು ಹೊಂದಿದ್ದು, ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಈ ವಾಹನ ಸಿಗಲಿದೆ.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!