Tuesday , November 13 2018
ಕೇಳ್ರಪ್ಪೋ ಕೇಳಿ
Home / Sandalwood / ಅಣ್ಣ ತಂಗಿ ಸೆಂಟಿಮೆಂಟ್​ನ ಮುತ್ತಣ್ಣ ಮತ್ತೆ ರಿಲೀಸ್​​​

ಅಣ್ಣ ತಂಗಿ ಸೆಂಟಿಮೆಂಟ್​ನ ಮುತ್ತಣ್ಣ ಮತ್ತೆ ರಿಲೀಸ್​​​

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಅಣ್ಣ ತಂಗಿ ಸೆಂಟಿಮೆಂಟ್​ನ ಚಿತ್ರ ಮತ್ತೆ ರಿಲೀಸ್​ ಆಗುತ್ತಿದೆ. 23 ವರ್ಷಗಳ ಹಿಂದೆ ಸಖತ್​​ ಹಿಟ್ ಆಗಿದ್ದ ಈ ಚಿತ್ರವನ್ನು ಇನ್ನೊಮ್ಮೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಸೆಪ್ಟೆಂಬರ್​ 22ಕ್ಕೆ ಚಿತ್ರ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ.

23 ವರ್ಷದ ಹಿಂದೆ ಈ ಚಿತ್ರ ರಿಲೀಸ್ ಆದ ಸಂದರ್ಭದಲ್ಲಿ ಅಯೋದ್ಯಾ ಗಲಾಟೆ ಜೋರಾಗಿಯೇ ಇತ್ತಂತೆ. ಆದರೂ, ಈ ಗಲಾಟೆಯ ನಡುವೆಯೂ ಚಿತ್ರ ಸಖತ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಶಿವರಾಜ್​​ಕುಮಾರ್, ಶಶಿಕುಮಾರ್, ಭವ್ಯಶ್ರೀ ರೈ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಎಂ.ಎಸ್​​.ರಾಜಶೇಖರ್​​ ನಿರ್ದೇಶನದ ಈ ಚಿತ್ರ ಸದ್ಯ 2ಕೆ ರೆಸೆಲ್ಯೂಷನ್​​​ ಹೈ ಟೆಕ್ನಾಲಜಿಯೊಂದಿಗೆ 7.1 ಸೌಂಡ್​​ನಲ್ಲಿ ತೆರೆಗೆ ತರಲಾಗುತ್ತಿದೆ. ನಿರ್ಮಾಪಕ ಸೋಮಣ್ಣ ಗೌಡ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದು ಶಿವರಾಜ್​ಕುಮಾರ್​ ಅವರ ಬಲು ಇಷ್ಟದ ಚಿತ್ರಗಳಲ್ಲಿ ಒಂದು. ಈ ಚಿತ್ರ ಮಾಡುವಾಗ ಶಿವಣ್ಣನ ವಯಸ್ಸು ಸುಮಾರು 32. ಸಖತ್​ ಜೋಷ್​ ಕೂಡಾ ಇತ್ತು. ಈ ಚಿತ್ರ ಮಾಡುವಾಗಲೂ ಶಿವಣ್ಣ ಸಖತ್​ ಥ್ರಿಲ್ ಆಗಿದ್ದರಂತೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!