Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Mollywood / ಪಲ್ಸರ್ ಸುನಿಗೆ ಸಹಾಯ : ಪೊಲೀಸ್ ಅಧಿಕಾರಿ ಸಸ್ಪೆಂಡ್​

ಪಲ್ಸರ್ ಸುನಿಗೆ ಸಹಾಯ : ಪೊಲೀಸ್ ಅಧಿಕಾರಿ ಸಸ್ಪೆಂಡ್​

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರಿರುವ ಪಲ್ಸರ್​ ಸುನಿಗೆ ಸಹಾಯ ಮಾಡಿದ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ಎ.ಆರ್.ಅನೀಶ್​ ಎಂಬ ಪೊಲೀಸ್ ಅಧಿಕಾರಿ ಮೇಲೆ ಪಲ್ಸರ್ ಸುನಿಗೆ ಸಹಾಯ ಮಾಡಿದ ಆರೋಪ ಕೇಳಿ ಬಂದಿದ್ದು, ಇವರನ್ನು ಸಸ್ಪೆಂಡ್ ಮಾಡಲಾಗಿದೆ.

ಅನಿಶ್​ ಮೇಲೆ ಹಿಂದಿನಿಂದಲೂ ಆರೋಪ ಇತ್ತು. ಪ್ರಕರಣ ಸಂಬಂಧ ಮೊದಲು ಜೈಲಿಗೆ ಸೇರಿದ್ದೇ ಪಲ್ಸರ್ ಸುನಿ. ಈತ ಜೈಲು ಸೇರಿದ ಬಳಿಕ ನಟ ದಿಲೀಪ್​(ಈಗ ದಿಲೀಪ್ ಕೂಡಾ ಜೈಲಿನಲ್ಲಿದ್ದಾರೆ) ಮತ್ತು ಸುನಿ ಹಾಗೂ ನಟಿ ಕಾವ್ಯಾ ಮಾಧವನ್ ಸೇರಿದಂತೆ ಇವರ ಆಪ್ತ ವಲಯದ ನಡುವೆ ಸಂಪರ್ಕ ಸೇತುವೆ ರೀತಿ ಅನಿಶ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ಅನಿಶ್ ವಿರುದ್ಧವೂ ಈಗ ಪ್ರಕರಣ ದಾಖಲಾಗಿದೆ.

ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ 14ನೇ ಆರೋಪಿಯಾಗಿ ಅನೀಶ್​ರನ್ನು ಹೆಸರಿಸಲಾಗಿದೆ. ಎರಡು ದಿನಗಳ ಹಿಂದೆ ಅನೀಶ್ ಬಂಧನಕ್ಕೊಳಗಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದರು.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!