Thursday , October 18 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೆ ಚಿಗುರಿದೆ ಸಂಜಯ್​​ ಸಲ್ಮಾನ್​ ಸ್ನೇಹ

ಮತ್ತೆ ಚಿಗುರಿದೆ ಸಂಜಯ್​​ ಸಲ್ಮಾನ್​ ಸ್ನೇಹ

ಮುಂಬೈ : ಸಂಜಯ್​ ದತ್​ ಮತ್ತು ಸಲ್ಮಾನ್​ ಖಾನ್​… ಬಾಲಿವುಡ್​ನಲ್ಲಿ ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಕ್ಕೆ ಹೆಸರಾಗಿದ್ದವರು… ಆದರೆ, ದಿನಗಳೆದಂತೆ ಇವರಿಬ್ಬರ ಸ್ನೇಹ ಹಳಸಿತ್ತು. ಅದಕ್ಕೆ ಕಾರಣ ರೇಷ್ಮಾ ಶೆಟ್ಟಿ ಎಂಬ ಮ್ಯಾನೇಜರ್​​.. ರೇಷ್ಮಾ ಶೆಟ್ಟಿ ಎಂಬಾಕೆ ಆಗ ಸಲ್ಮಾನ್ ಮ್ಯಾನೇಜರ್​… ಸಲ್ಲೂ ಚಿತ್ರ ಜೀವನದ ಬಗ್ಗೆ ಎಲ್ಲಾ ನೋಡಿಕೊಳ್ಳುತ್ತಿದ್ದುದ್ದು ಈಕೆಯೇ…

ಆಗ ಬಾಲಿವುಡ್​ನ ಇನ್ನೋರ್ವ ನಟ ಸಂಜಯ್​ ದತ್​ ಮತ್ತು ಸಲ್ಮಾನ್​ ಖಾನ್ ತುಂಬಾ ಒಳ್ಳೆಯ ಸ್ನೇಹಿತರು. ಈ ಸಂದರ್ಭದಲ್ಲಿ ದತ್ ಜೀವನದಲ್ಲಿ ಏನೇನೋ ಘಟನೆಗಳೆಲ್ಲಾ ನಡೆದು ಹೋಗಿದ್ದವು. ಚಿತ್ರಗಳೂ ಹಿಟ್​ ಆಗುತ್ತಿರಲಿಲ್ಲ. ಸಂಜೂ ಸಖತ್​ ಕಷ್ಟದಲ್ಲಿದ್ದರು…

ಸ್ನೇಹಿತನ ಈ ಕಷ್ಟವನ್ನು ಸಲ್ಮಾನ್​ಗೆ ನೋಡೋದಕ್ಕೆನೇ ಆಗಲಿಲ್ಲ. ಬಲು ನೊಂದಿದ್ದರು. ಹೀಗಾಗಿ, ಸ್ನೇಹಿತ ದತ್​ಗೆ ಒಳ್ಳೆಯ ಅವಕಾಶ ಬರುವ ಹಾಗೆ ನೋಡಿಕೋ ಎಂದು ಸಲ್ಮಾನ್ ತನ್ನ ಮ್ಯಾನೇಜರ್​ ರೇಷ್ಮಾಗೆ ಹೇಳಿದ್ದರು. ರೇಶ್ಮಾ ಕೂಡಾ ಸಂಜಯ್​ಗೆ ಸಿನೆಮಾಗಳು ಸಿಗಲು ಪ್ರಯತ್ನ ಪಡುತ್ತಿದ್ದಳು. ಆದರೆ, ಅವಕಾಶಗಳು ಮಾತ್ರ ಸಿಗುತ್ತಿರಲಿಲ್ಲ. ಯಾಕೆ ಹೀಗೆ ಅಂತ ಹುಡುಕುತ್ತಾ ಹೊರಟಾಗ ಸಂಜೂಗೆ ಅಚ್ಚರಿಯ ಕಾರಣ ಸಿಕ್ಕಿತ್ತು. ಸಂಜು ಹೆಚ್ಚಿನ ಸಂಭಾವನೆ ಕೇಳುತ್ತಾರೆ ಎಂದು ನಿರ್ಮಾಪಕರ ಬಳಿ ರೇಷ್ಮಾ ಹೇಳುತ್ತಿದ್ದಳು ಎಂಬ ಸುದ್ದಿ ಆಗ ಸಂಜಯ್​ಗೆ ಕಿವಿಗೆ ಬಿದ್ದಿತ್ತು…

ರೇಷ್ಮಾ ಹೀಗೆ ಹೇಳುತ್ತಿರುವ ವಿಷಯ ಗೊತ್ತಾದ ತಕ್ಷಣ ದತ್​ ರೇಷ್ಮಾಳನ್ನು ದೂರ ಮಾಡಲು ಆರಂಭಿಸಿದ್ದರು. ಇದಾದ ಬಳಿಕ ಸಲ್ಲೂ ಜೊತೆಗೇ ಇದ್ದ ರೇಷ್ಮಾ ಅಲ್ಲೂ ಗಲಾಟೆ ಮಾಡಿಕೊಂಡು ಸಲ್ಮಾನ್​ನಿಂದ ದೂರ ಆಗಿದ್ದಳು. (Read Also : ಸಲ್ಮಾನ್​ – ಅಕ್ಷಯ್​ ಕುಮಾರ್​ ಸ್ನೇಹ ಮುರಿದಳಂತೆ ಆಕೆ)ಆದರೆ, ಈ ರೇಷ್ಮಾ ಕಾರಣಕ್ಕೆ ಸಲ್ಮಾನ್ ಮತ್ತು ಸಂಜಯ್​ ನಡುವೆಯೂ ಬಿರುಕುಂಟಾಗಿತ್ತು…! ಸುಂದರ ಸ್ನೇಹಕ್ಕೆ ಮಾದರಿಯಾಗಿದ್ದ ಇವರಿಬ್ಬರು ಮಾನಸಿಕವಾಗಿ ದೂರವೇ ಆಗಿದ್ದರು… ತೀರಾ ಇತ್ತೀಚಿನ ವರೆಗೂ ಇವರಿಬ್ಬರ ನಡುವೆ ಮುನಿಸಿತ್ತು…

ಆದರೆ, ಈಗ ಕಾಲ ಬದಲಾಗಿದೆ. ಸಂಜಯ್ ಮತ್ತು ಸಲ್ಮಾನ್ ನಡುವಿನ ಸ್ನೇಹ ಮತ್ತೆ ಹಳೆಯ ಹಳಿಗೆ ಮರಳುತ್ತಿದೆ. ಅದರಲ್ಲೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಜೈಲು ಸೇರಿದ ಸಂದರ್ಭದಲ್ಲಿ ಇವರಿಬ್ಬರು ತುಂಬಾ ಆಪ್ತರಾಗಿದ್ದರು. ಸಂಜೂ ಜೈಲಿನಿಂದ ಬಿಡುಗಡೆಯಾದ ಬಳಿಕವಂತೂ ಇಬ್ಬರು ಪರಸ್ಪರ ಭೇಟಿಯಾಗಿ ಒಂದಷ್ಟು ಕಾಲ ಮಾತುಕತೆಯೂ ನಡೆಸಿದ್ದರು. ಇದು ಬಿ ಟೌನ್​ನಲ್ಲಿ ಅಚ್ಚರಿ ಮೂಡಿಸಿತ್ತು ಮತ್ತು ಸಂಜೂ ಸಲ್ಲೂ ಒಟ್ಟಾಗುವ ಸೂಚನೆಯನ್ನೂ ಕೊಟ್ಟಿತ್ತು…

ಈ ಎಲ್ಲದರ ನಡುವೆ, ಇತ್ತೀಚೆಗೆ ಚೌತಿ ದಿನ ಅಂಬಾನಿ ಅವರ ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ್ದ ಸಂದರ್ಭದಲ್ಲಿ ಸಂಜೂ ಮತ್ತು ಸಲ್ಲೂ ಮುಖಾಮುಖಿಯಾಗಿ ಒಂದಷ್ಟು ಹೊತ್ತು ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ಈ ಬಗ್ಗೆ ಮಾಧ್ಯಮದವರೂ ಇವರಿಬ್ಬರಲ್ಲಿ ಕೇಳಿದ್ದರು. ಆಗ ಬ್ರೇಕ್​ ಅಪ್ಪೇ ಆಗಿಲ್ಲ. ಇನ್ನು ಪ್ಯಾಚಪ್​ ಮಾತು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಲ್ಮಾನ್ ತನ್ನ ಸೋದರ ಎಂದೂ ಹೇಳಿಕೊಂಡಿದ್ದಾರೆ…

ಈ ಎಲ್ಲಾ ಮಾತುಗಳು ಮತ್ತು ಇವರಿಬ್ಬರ ಪರಸ್ಪರ ಭೇಟಿ ಸಂಜೂ ಮತ್ತು ಸಲ್ಲೂ ಮತ್ತೆ ಒಂದಾಗಿದ್ದಾರೆ ಎಂಬ ಸೂಚನೆಯನ್ನು ನೀಡುತ್ತಿದೆ. ಈ ಬೆಳವಣಿಗೆ ಬಾಲಿವುಡ್​​​ ಮಂದಿಗೂ ಖುಷಿ ಕೊಟ್ಟಿದೆ..

 

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!