Tuesday , December 12 2017
Home / News NOW / ಭಾಸ್ಕರ್​ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಜೈಲಿನಲ್ಲಿ ಹಲ್ಲೆ…!

ಭಾಸ್ಕರ್​ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಜೈಲಿನಲ್ಲಿ ಹಲ್ಲೆ…!

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿದೆ. ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಭಟ್​ ಮೇಲೆ ಸಹ ಕೈದಿಗಳೇ ಹಲ್ಲೆ ಮಾಡಿದ್ದಾರೆ. ಬಜಿಲಕೇರಿ ಧನರಾಜ್​​ ಮತ್ತು ತಂಡದಿಂದ ಈ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

2016ರ ಜುಲೈ ತಿಂಗಳಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ಕೊಂದು ಹೋಮಕುಂಡದಲ್ಲಿ ಹಾಕಿ ದೇಹವನ್ನು ಸುಡಲಾಗಿತ್ತು ಎಂದು ಹೇಳಲಾಗಿದ್ದು, ದೇಹದ ಅವಶೇಷಗಳು ಇನ್ನೂ ಸಿಕ್ಕಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಕೂಡಾ ಜೈಲಿನಲ್ಲಿದ್ದು, ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್​ನಲ್ಲಿ ಜಾಮೀನು ಅರ್ಜಿ ಕೂಡಾ ವಜಾ ಆಗಿತ್ತು.

About sudina

Check Also

ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್​ ಬೇಗ್​ ಕೀಳುಮಟ್ಟದ ಪದ ಪ್ರಯೋಗ : ಬಿಜೆಪಿ ಆಕ್ರೋಶ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸಚಿವ ರೋಷನ್ ಬೇಗ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. …

Leave a Reply

Your email address will not be published. Required fields are marked *

error: Content is protected !!