Wednesday , August 15 2018
ಕೇಳ್ರಪ್ಪೋ ಕೇಳಿ
Home / Sudina Special / ನೋವು ತೋಡಿಕೊಂಡಿದ್ದಾಳೆ ಹುಟ್ಟುಹಬ್ಬದಂದೇ ಆಸೀಡ್ ದಾಳಿಗೊಳಗಾದ 21 ವರ್ಷದ ಹುಡುಗಿ…!

ನೋವು ತೋಡಿಕೊಂಡಿದ್ದಾಳೆ ಹುಟ್ಟುಹಬ್ಬದಂದೇ ಆಸೀಡ್ ದಾಳಿಗೊಳಗಾದ 21 ವರ್ಷದ ಹುಡುಗಿ…!

ಲಂಡನ್ : 21 ವರ್ಷದ ಬ್ರಿಟಿಷ್​ ಯುವತಿಯೊಬ್ಬಳು ಕಳೆದ ಜೂನ್​ನಲ್ಲಿ ಆಸೀಡ್ ದಾಳಿಗೊಳಗಾಗಿದ್ದಳು. ಆಗ ನೋವಿನಿಂದ ಬಳಲುತ್ತಾ ಸಂಕಷ್ಟ ಅನುಭವಿಸಿದ್ದ ಈ ಯುವತಿ ಈಗ ಗುಣಮುಖಳಾಗುತ್ತಿದ್ದಾಳೆ. ತನ್ನ ಚೇತರಿಕೆಯ ಮೊದಲ ಫೋಟೋವನ್ನು ಈ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ತನ್ನ ನೋವನ್ನು ಹಂಚಿಕೊಂಡಿದ್ದಾಳೆ.


ರೇಶಮ್​ ಖಾನ್​, ಬ್ಯುಸಿನೆಸ್ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿನಿ. ಜೂನ್​ 21 ಈಕೆಯ 21ನೇ ಹುಟ್ಟುಹಬ್ಬದ ದಿನ. ಆದರೆ, ಅದೇ ದಿನ ದುರಂತವೊಂದು ನಡೆದು ಹೋಗಿತ್ತು. ಲಂಡನ್​ನಲ್ಲಿ ಬೆಳಗ್ಗೆ ತನ್ನ ಸಂಬಂಧಿ ಜೊತೆ ನಿಂತಿದ್ದಾಗ 25 ವರ್ಷದ ಜಾನ್​ ಟೋಮ್ಲೀನ್​ ಎಂಬಾತ ಈಕೆಯ ಮುಖಕ್ಕೆ ಸಲ್ಫೂರ್ ಆಸೀಡ್ ಎರಚಿದ್ದ… ಬಹಳ ಹೊತ್ತಿನ ನರಳಾಟದ ಬಳಿಕ ಸ್ಥಳೀಯರು ಈಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಂದಿನ ಈ ನೋವಿನ ಕತೆಯನ್ನು ರೇಶಮ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾಳೆ. (ಇಲ್ಲಿ ಕ್ಲಿಕ್ ಮಾಡಿ : http://resham.online) ಈಕೆಯ ಸಂಬಂಧಿಗೂ ಗಂಭೀರ ಗಾಯ ಆಗಿದ್ದು, ಬಲಗಣ್ಣುಹಾನಿಯಾಗಿದೆ. ದೇಹದ ಬಹುಭಾಗ ಸುಟ್ಟು ಹೋಗಿತ್ತು. ಇದೀಗ ರೇಶಮ್ ಸಂಪೂರ್ಣ ಚೇತರಿಸಿಕೊಂಡಿದ್ದು, ಎಲ್ಲರೂ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂತಹ ಘೋರ ದುರಂತದ ನಡುವೆಯೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದೆ ಹೋರಾಡಿದ ಈ ಹುಡುಗಿಯ ಧೈರ್ಯವನ್ನೂ ಮೆಚ್ಚಬೇಕು..

About sudina

Check Also

ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಪಿಲಿಫೇನ್ಸ್ : ಶ್ವಾನ ನಿಯತ್ತಿಗೆ ಮತ್ತೊಂದು ಹೆಸರು… ಅನ್ನ ಇಟ್ಟ ಮನೆಗೆ ಯಾವತ್ತೂ ದ್ರೋಹ ಬಗೆಯುವ ಪ್ರಾಣಿ ನಾಯಿಯಲ್ಲ… ಇದೂ …

Leave a Reply

Your email address will not be published. Required fields are marked *

error: Content is protected !!