Tuesday , October 16 2018
ಕೇಳ್ರಪ್ಪೋ ಕೇಳಿ
Home / Sandalwood / ನಾನು ರಾಜಕೀಯ ಸೇರುವುದಿಲ್ಲ : ದರ್ಶನ್ ಸ್ಪಷ್ಟನೆ

ನಾನು ರಾಜಕೀಯ ಸೇರುವುದಿಲ್ಲ : ದರ್ಶನ್ ಸ್ಪಷ್ಟನೆ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್​ ರಾಜಕೀಯಕ್ಕೆ ಸೇರುತ್ತಾರೆ ಎಂಬ ಸುದ್ದಿ ಒಂದಷ್ಟು ದಿನಗಳ ಹಿಂದೆ ಬಲು ಜೋರಾಗಿಯೇ ಕೇಳಿ ಬರುತ್ತಿತ್ತು. ಈ ಬಗ್ಗೆ ಬಗೆ ಬಗೆ ಮಾತುಗಳೂ ಹರಿದಾಡುತ್ತಿದ್ದವು. ಆದರೆ, ಈಗ ಈ ಸುದ್ದಿ, ಬಗೆಬಗೆ ಮಾತುಗಳಿಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಉತ್ತರ ನೀಡಿದ್ದಾರೆ. ಅಲ್ಲದೆ, ತಾನು ರಾಜಕೀಯಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನೊಬ್ಬ ನಟ, ನನಗೆ ರಾಜಕೀಯ ಗೊತ್ತಿಲ್ಲ. ನನ್ನ ವ್ಯಕ್ತಿತ್ವಕ್ಕೂ ರಾಜಕೀಯ ಅಷ್ಟಾಗಿ ಸೂಟ್ ಆಗುವುದಿಲ್ಲ. ಹೀಗಾಗಿ, ರಾಜಕೀಯಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಒಂದೊಮ್ಮೆ ರಾಜಕೀಯಕ್ಕೆ ಸೇರಿದರೂ ಎಲ್ಲರಿಗೂ ಹೇಳಿಯೇ ಸೇರುತ್ತೇನೆ ಎಂದೂ ದರ್ಶನ್ ದೃಢವಾಗಿ ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!