Monday , January 21 2019
ಕೇಳ್ರಪ್ಪೋ ಕೇಳಿ
Home / Sandalwood / ಕುರುಕ್ಷೇತ್ರ : ಹೇಗೆ ಸಾಗುತ್ತಿದೆ ಶೂಟಿಂಗ್ ಗೊತ್ತಾ…?

ಕುರುಕ್ಷೇತ್ರ : ಹೇಗೆ ಸಾಗುತ್ತಿದೆ ಶೂಟಿಂಗ್ ಗೊತ್ತಾ…?

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಸಖತ್​ ನಿರೀಕ್ಷೆ ಮೂಡಿಸಿದೆ… ಇದು ಬಿಗ್ ಬಹುತಾರಾತಣದ ಬಿಗ್​ಬಜೆಟ್​ ಚಿತ್ರ ಎಂಬುದು ಒಂದಾದರೆ, ಬಹುಕಾಲದ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಪೌರಾಣಿಕ ಚಿತ್ರವೊಂದು ಸೆಟ್ಟೇರಿದ್ದು ಕೂಡಾ ಇದಕ್ಕೊಂದು ಕಾರಣ. ಪ್ರೀತಿ, ಪ್ರೇಮ, ಫೈಟ್​ ಹೀಗೆ ಒಂದೇ ರೀತಿಯ ಸಿನೆಮಾಗಳನ್ನು ನೋಡುತ್ತಾ ಬಂದ ಪ್ರೇಕ್ಷಕರಿಗೆ ಈ ಚಿತ್ರವೊಂದು ಫ್ರೆಶ್​ ಫೀಲ್​ ಕೊಡುವುದಂತೂ ಸತ್ಯ…

ಕುರುಕ್ಷೇತ್ರದ ಚಿತ್ರದ ಶೂಟಿಂಗ್ ಸದ್ಯ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಸಾಗುತ್ತಿದೆ. ಮಹಾಭಾರತದ ದಿನಗಳನ್ನು ನೆನಪಿಸುವ ಭವ್ಯ ಸೆಟ್​ಗಳು ಇಲ್ಲಿ ಮೈದಳೆದಿವೆ. ಈ ಸೆಟ್​ನಲ್ಲಿ ದರ್ಶನ್​ ದರ್ಬಾರ್​ ನಡೆಯುತ್ತಿದೆ… ಭೀಷ್ಮನಾಗಿ ಚಿತ್ರರಂಗದ ಭೀಷ್ಮ ಅಂಬರೀಷ್ ಇದ್ದಾರೆ. ದೃತರಾಷ್ಟ್ರನಾಗಿ ಶ್ರೀನಾಥ್ ಇದ್ದಾರೆ… ಕರ್ಣನಾಗಿ ಅರ್ಜುನ್​ ಸರ್ಜಾ ಬಲ ದರ್ಶನ್​ಗಿದೆ…

ಹೇಳಿಕೇಳಿ ಇದೊಂದು ಪೌರಾಣಿಕ ಚಿತ್ರ. ಹೀಗಾಗಿ, ಶೂಟಿಂಗ್ ಕೂಡಾ ಬೇರೆ ಚಿತ್ರದಂತೆ ಇರಲ್ಲ. ಇಲ್ಲಿ ಕಾಸ್ಟ್ಯೂಮ್ಸ್​ ಕೂಡಾ ಡಿಫ್ರೆಂಟ್​​.. ದೊಡ್ಡ ಗದೆ. ಕಿರೀಟ, ಮೈಮೇಲಿನ ಒಡವೆ… ಹೀಗೆ, ಕಡಿಮೆ ಅಂದರೂ ದರ್ಶನ್​ ಮೈ ಮೇಲೆ 35 ರಿಂದ 40 ಕೆ.ಜಿಯಷ್ಟು ಭಾರ ಅವರ ಮೈಮೇಲೆ ಇರುತ್ತದೆಯಂತೆ. ಇಷ್ಟು ಭಾರ ಹೊತ್ತು ದಿನ ಇಡೀ ಶೂಟಿಂಗ್ ನಡೆಸಬೇಕು… ಇದೇ ದೊಡ್ಡ ಸವಾಲು… ಮೇಕಪ್​ಗೇ ಕನಿಷ್ಟ ಅಂದರೂ ಎರಡರಿಂದ ಎರಡೂವರೆ ಗಂಟೆ ಬೇಕು. ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ತನಕ ಕಾಸ್ಟ್ಯೂಮ್​ಗಳನ್ನು ತೆಗೆಯುವಂತಿಲ್ಲ. ಹೀಗಾಗಿ, ಅಷ್ಟೂ ಭಾರ ಸಂಜೆ ತನಕ ಇದ್ದೇ ಇರುತ್ತದೆ…! ಎಂತಹ ಕಷ್ಟ ಅಲ್ವಾ? ಊಹಿಸೋದಕ್ಕೂ ನಮಗೆ ಕಷ್ಟ ಆಗುತ್ತಿದೆ.

ಇಲ್ಲಿ ದಿನಕ್ಕೆ ಎರಡೋ ಮೂರೋ ಸೀನ್​ನ ಶೂಟಿಂಗ್ ಮಾತ್ರ… ಅಂದರೆ ತುಂಬಾ ಅಚ್ಚುಕಟ್ಟಾಗಿ ಈ ಶೂಟಿಂಗ್ ನಡೆಯುತ್ತಿದೆ. ಯಾಕೆಂದರೆ, ಇದು ಬೇರೆ ಚಿತ್ರದಂತಲ್ಲ. ಪೌರಾಣಿಕ ಚಿತ್ರ ಅಂದ ಮೇಲೆ ಅದಕ್ಕೆ ಅದರದ್ದೇ ಆದ ಒಂದು ಪರಿಧಿ ಇರುತ್ತದೆ. ಅದೇ ಪರಿಧಿಯಲ್ಲಿ ಚಿತ್ರವೂ ಸಾಗಬೇಕಾಗುತ್ತದೆ… ಇನ್ನು, ಇಲ್ಲಿ ಎರಡಡೆರಡು ಸಲ ಶೂಟಿಂಗ್ ನಡೆಯುತ್ತಿದೆ. ಅಂದರೆ, 2ಡಿಗೆ ಮತ್ತು 3ಡಿಗೆ ಪ್ರತ್ಯೇಕವಾಗಿ ಶೂಟಿಂಗ್ ನಡೆಯುತ್ತಿದ್ದು, ಡಬ್ಬಿಂಗ್​ ಕೂಡಾ ಬೇರೆ ಬೇರೆಯದ್ದೇ ಆಗಿರುತ್ತದೆ…

ಇನ್ನು, ಭಾನುಮತಿ ಪಾತ್ರಕ್ಕೆ ಯಾರು ಬರುತ್ತಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ನಿರ್ದೇಶಕ ನಾಗಣ್ಣ ಅವರು ಭಾನುಮತಿ ಪಾತ್ರಧಾರಿಯ ಹುಡುಕಾಟದಲ್ಲಿ ಇದ್ದಾರೆ. ಇನ್ನೂ ಈ ಪಾತ್ರಧಾರಿ ಪಕ್ಕಾ ಆಗಿಲ್ಲ… ಇದು ಬಹುತಾರಾಗಣದ ಬಿಗ್​ ಬಜೆಟ್​ ಚಿತ್ರ. ಶಾಸಕ ಮುನಿರತ್ನ ಈ ಚಿತ್ರಕ್ಕೆ ಹಣ ಹಾಕಿದ್ದಾರೆ… ಕನ್ನಡಿಗರೂ ಈ ಚಿತ್ರವನ್ನು ಬಹಳ ಉತ್ಸಾಹದಿಂದಲೇ ಎದುರು ನೋಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳಿಂತೂ ಈ ಚಿತ್ರ ದೊಡ್ಡ ಸಂಭ್ರಮ. ಹೀಗಾಗಿ, ಕ್ಷಣ ಕ್ಷಣಕ್ಕೂ ಈ ಚಿತ್ರದ ಆಗುಹೋಗುಗಳನ್ನು ದರ್ಶನ್ ಅಭಿಮಾನಿಗಳು ಎದುರು ನೋಡುತ್ತಲೇ ಇದ್ದಾರೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!