Wednesday , January 24 2018
Home / Gulf News / ಪಾಪ… ಪ್ರೀತಿಯ ಬೆಕ್ಕಿನ ಚಿಕಿತ್ಸೆಗಾಗಿ ಗೊಂಬೆಗಳನ್ನು ಮಾರುತ್ತಿದ್ದಾರೆ ಮಹಿಳೆ…!!!
Buy Bitcoin at CEX.IO

ಪಾಪ… ಪ್ರೀತಿಯ ಬೆಕ್ಕಿನ ಚಿಕಿತ್ಸೆಗಾಗಿ ಗೊಂಬೆಗಳನ್ನು ಮಾರುತ್ತಿದ್ದಾರೆ ಮಹಿಳೆ…!!!

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ

ದುಬೈ : ಇದೊಂದು ಹೃದಯವೇ ಭಾರವಾಗುವಂತಹ ಸುದ್ದಿ. ಎಮರೈಟ್ಸ್​ನ ಮಹಿಳೆಯೊಬ್ಬರು ತನ್ನ ಪ್ರೀತಿಯ ಬೆಕ್ಕಿನ ಚಿಕಿತ್ಸೆಗಾಗಿ ಕೈಯಲ್ಲಿ ತಯಾರಿಸಿದ ಗೊಂಬೆಗಳನ್ನು ಮಾರುತ್ತಿದ್ದಾರೆ… ಈಗ ಈಕೆಯ ಬದುಕು ಪೂರ್ತಿ ಆ ಬೆಕ್ಕಿನ ಚಿಕಿತ್ಸೆಗಷ್ಟೇ ಮೀಸಲು…!

ಫಾತಿಮಾ ಸವಾಸ್​ ಎಂಬುದು ಆ ಹೃದಯವಂತ ಮಹಿಳೆಯ ಹೆಸರು. ಇವರ ಪ್ರೀತಿಯ ಬೆಕ್ಕು ಮಾರ್ಡನ್​ ವೆಟರ್ನರಿ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಬೆಕ್ಕಿಗೆ ಸುಮಾರು ಆರು ವರ್ಷ. ಈ ಬೆಕ್ಕಿಗೆ ಲಿವರ್​ನ ಸಮಸ್ಯೆ. ಮೂರು ವಾರದಿಂದ ಈ ಬೆಕ್ಕು ಆಸ್ಪತ್ರೆಯಲ್ಲೇ ಇದೆ. ಈ ಬೆಕ್ಕು ಗುಣಮುಖವಾಗಲು ಶಸ್ತ್ರಚಿಕಿತ್ಸೆಯ ಅಗತ್ಯ ಇದೆ. ಸದ್ಯ ಮೆಡಿಕಲ್ ಬಿಲ್​ 5 ಸಾವಿರ ದಿರಾಮ್ ಆಗಿದೆ. ಅಂದರೆ, ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 87 ಸಾವಿರ ರೂಪಾಯಿ ಆಸುಪಾಸು. ಇನ್ನೊಂದು ಶಸ್ತ್ರಚಿಕಿತ್ಸೆಗೆ ಸುಮಾರು 3500 ದಿರಾಮ್​ ಖರ್ಚಾಗಿದೆ. ಅಂದರೆ, ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 62 ಸಾವಿರದಷ್ಟು ಹಣ ಬೆಕ್ಕಿನ ಚಿಕಿತ್ಸೆಗಾಗಿ ವ್ಯಯವಾಗಿದೆ.

ಸದ್ಯ ಈ ಮಹಿಳೆಯ ಬಳಿ ಉದ್ಯೋಗ ಇಲ್ಲ. ಬೆಕ್ಕನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್​ ಮಾಡಲು ಹಣದ ಅಗತ್ಯ ಇವರಿಗಿದೆ. ಸದ್ಯ ಆಸ್ಪತ್ರೆ ಬಿಲ್​ 4500 ದಿರಾಮ್ ಅಂದರೆ ಸುಮಾರು 79 ಸಾವಿರದಷ್ಟಾಗಿದೆ. ದಿನದಿಂದ ದಿನಕ್ಕೆ ಆಸ್ಪತ್ರೆ ಬಿಲ್ ಏರುತ್ತಲೇ ಇದೆ. ಹೀಗಾಗಿ, ಈ ಆಸ್ಪತ್ರೆ ಬಿಲ್ ಕಟ್ಟುವ ಸಲುವಾಗಿ ಸವಾಸ್​​ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಗೊಂಬೆಗಳ ಮಾರಾಟದಿಂದ ಇವರು ಬರೀ 500 ದಿರಾಮ್ ಅಂದರೆ ಸುಮಾರು 8500 ಅಷ್ಟೇ ಹಣ ಸಂಪಾದಿಸಿದ್ದಾರೆ…!

ಕಳೆದ ಆರು ವರ್ಷದಿಂದ ಈ ಬೆಕ್ಕು ಇವರ ಮನೆಯಲ್ಲಿ ಇದೆ. ಬೆಕ್ಕನ್ನು ತುಂಬಾ ಪ್ರೀತಿಯಿಂದಲೇ ಇವರು ಸಾಕಿದ್ದಾರೆ. ತನ್ನ ಮಗುವಿನಂತೆ ನೋಡಿಕೊಂಡ ಈ ಬೆಕ್ಕಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಇವರು ಹೇಳುತ್ತಿದ್ದಾರೆ.

ಫಾತಿಮಾ ಅವರ ಈ ಕಾರ್ಯವನ್ನು ನೋಡಿದಾಗಲೇ ಕಣ್ಣೆಲ್ಲಾ ಮಂಜಾಗುತ್ತದೆ. ಒಂದು ಮುಗ್ಧ ಜೀವಕ್ಕಾಗಿ ತುಡಿಯುವ ಇವರ ಮನಸ್ಸನ್ನು ಕಂಡು ಹೃದಯವೇ ಉಕ್ಕಿ ಬಂದಂತಾಗುತ್ತದೆ…

CEX.IO Bitcoin Exchange

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!