Sunday , February 17 2019
ಕೇಳ್ರಪ್ಪೋ ಕೇಳಿ
Home / Film News / Tollywood / ಬಲ್ಲಾಳದೇವ ಪಾತ್ರಕ್ಕೆ ಮೊದಲ ಆಯ್ಕೆ ರಾಣಾ ಆಗಿರಲಿಲ್ಲ…! ಹಾಗಾದರೆ, ಮತ್ಯಾರು…?

ಬಲ್ಲಾಳದೇವ ಪಾತ್ರಕ್ಕೆ ಮೊದಲ ಆಯ್ಕೆ ರಾಣಾ ಆಗಿರಲಿಲ್ಲ…! ಹಾಗಾದರೆ, ಮತ್ಯಾರು…?

ಹೈದರಾಬಾದ್ : ಬಾಹುಬಲಿ ಚಿತ್ರ ಸರಣಿ ಭಾರತ ಚಿತ್ರರಂಗದ ಇತಿಹಾಸದಲ್ಲೊಂದು ಮೈಲುಗಲ್ಲು. ಈ ಚಿತ್ರ ಪೂರ್ಣಗೊಳ್ಳಲು ಬರೋಬ್ಬರಿ 5 ವರ್ಷ ಹಿಡಿದಿತ್ತು. ಎರಡು ಸರಣಿಯಲ್ಲಿ ಬಂದ ಈ ಚಿತ್ರವನ್ನು ವಿಶ್ವದಾದ್ಯಂತ ಜನ ಮೆಚ್ಚಕೊಂಡಿದ್ದರು. ಜೊತೆ ಜೊತೆಗೆ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿಗೂ ಈ ಚಿತ್ರಗಳು ದೊಡ್ಡ ಬ್ರೇಕ್ ಕೊಟ್ಟಿದ್ದವು.

ಆದರೆ, ಇತ್ತೀಚಿನ ಒಂದು ಸಂದರ್ಶನವೊಂದರಲ್ಲಿ ರಾಣಾ ದಗ್ಗುಬಾಟಿ ಇಂಟ್ರೆಸ್ಟಿಂಗ್ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ರಾಣಾ ಬಾಹುಬಲಿ ಚಿತ್ರದಲ್ಲಿ ನಿರ್ವಹಿಸಿದ್ದು ಬಳ್ಳಾಲದೇವ ಎಂಬ ಪಾತ್ರವನ್ನು. ಆದರೆ, ಈ ಪಾತ್ರಕ್ಕೆ ರಾಣಾ ಮೊದಲ ಆಯ್ಕೆ ಆಗಿರಲಿಲ್ಲವಂತೆ. ರಾಣಾ ಅವರೇ ಹೇಳಿದಂತೆ ಚಿತ್ರ ನಿರ್ಮಾತೃಗಳು ಮೊದಲು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದದ್ದು ಹಾಲಿವುಡ್​ ನಟ ಜಾನ್ಸಸ್​​ ಮಮೋವಾ ಅವರನ್ನು…! ಆದರೆ, ಬಳಿಕ ಅದೇನಾಯ್ತೋ ಈ ಪಾತ್ರಕ್ಕೆ ರಾಣಾರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇದಕ್ಕೆ ರಾಣಾ ಅವರಿಗೆ ಖುಷಿ ಇದೆ. ಹಾಲಿವುಡ್ ನಟನ ಬದಲಾಗಿ ನನ್ನನ್ನು ಹಾಕಿಕೊಂಡಿದ್ದು ನನಗೆ ಹೆಮ್ಮೆ ಅಂದಿದ್ದಾರೆ ರಾಣಾ. ಅಲ್ಲದೆ, ಕೊಟ್ಟ ಪಾತ್ರವನ್ನು ರಾಣಾ ತುಂಬಾ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಒಂದೊಂದು ಸಲ ಪ್ರಭಾಸ್​ ಅವರಿಗೆ ಪ್ರಬಲ ಪೈಪೋಟಿಯನ್ನೇ ನೀಡಿ ಗೆದ್ದಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!