Friday , October 19 2018
ಕೇಳ್ರಪ್ಪೋ ಕೇಳಿ
Home / Film News / Bollywood / ಜಿಯಾ ಸಾವಿನ ಪ್ರಕರಣ : ಕೊಲೆ ಎಂಬುದಕ್ಕೆ ಮತ್ತೊಂದು ವರದಿ ತಂದ ತಾಯಿ : ಟ್ವಿಟರ್ ತೊರೆದ ಪ್ರಿಯಕರ ಸೂರಜ್​!

ಜಿಯಾ ಸಾವಿನ ಪ್ರಕರಣ : ಕೊಲೆ ಎಂಬುದಕ್ಕೆ ಮತ್ತೊಂದು ವರದಿ ತಂದ ತಾಯಿ : ಟ್ವಿಟರ್ ತೊರೆದ ಪ್ರಿಯಕರ ಸೂರಜ್​!

ಮುಂಬೈ : ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಿದೆ. ನಾಲ್ಕು ವರ್ಷದ ಹಿಂದೆ ಅಂದರೆ 2013 ಜೂನ್ 3 ರಂದು ಜುಹೂನ ತನ್ನ ಅಪಾರ್ಟ್​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಜಿಯಾ ಪತ್ತೆ ಆಗಿದ್ದರು, ಇದಾದ ಬಳಿಕ ಇವರ ತಾಯಿ ರಬಿಯಾ ಖಾನ್​ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದಲ್ಲ. ಆಕೆಯದ್ದು ಕೊಲೆ ಎಂದು ವಾದ ಮಾಡಿದ್ದರು. ಮತ್ತು ಈ ಬಗ್ಗೆ ಹೋರಾಟವೇ ಮಾಡಿದ್ದರು. ಪರಿಣಾಮ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಆದರೆ, ಸಿಬಿಐ ಕೂಡಾ ಜಿಯಾರದ್ದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಜಿಯಾ ಪ್ರಿಯಕರ ಸೂರಜ್ ಪಾಂಚೋಲಿಯನ್ನೂ ಬಂಧಿಸಲಾಗಿತ್ತು. ಕೆಲವು ದಿನಗಳ ಬಳಿಕ ಸೂರಜ್ ಜಾಮೀನಿನ ಮೇಲೆ ಹೊರಬಂದಿದ್ದರು.

ಇದೀಗ, ರಬಿಯಾ ಮತ್ತೊಂದು ಹೊಸ ವರದಿಯನ್ನು ತಂದಿದ್ದಾರೆ. ಬ್ರಿಟನ್​​ನ ಪೊರೆನ್ಸಿಕ್​ ತಜ್ಞರು ನೀಡಿರುವ ವರದಿಯನ್ನು ರಬಿಯಾ ತಂದಿದ್ದು, ಈ ವರದಿಯಲ್ಲೂ ಇದೊಂದು ಕೊಲೆ ಎಂಬ ರೀತಿ ಉಲ್ಲೇಖವಾಗಿದೆ.

ಈ ನಡುವೆ, ಸೂರಜ್ ಪಾಂಚೋಲಿ ತಮ್ಮ ಟ್ವಿಟರ್ ಖಾತೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಸೂರಜ್​ಗೆ ಮತ್ತೆ ಸಂಕಷ್ಟ ಬರುವ ಸಾಧ್ಯತೆಯೇ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!