Sunday , February 17 2019
ಕೇಳ್ರಪ್ಪೋ ಕೇಳಿ
Home / News NOW / ಸುರೇಶ್​ ರೈನಾ ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟ : ಸ್ವಲ್ಪದರಲ್ಲೇ ಪಾರಾದ ಕ್ರಿಕೆಟಿಗ

ಸುರೇಶ್​ ರೈನಾ ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟ : ಸ್ವಲ್ಪದರಲ್ಲೇ ಪಾರಾದ ಕ್ರಿಕೆಟಿಗ

ಎತುವಾ : ಕ್ರಿಕೆಟಿಗ ಸುರೇಶ್​ ರೈನಾ ಅಪಘಾತದಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ರೇಂಜ್​ ರೋವರ್​ ಕಾರಿನ ಒಂದು ಟಯರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದ್ದು, ರೈನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ರೈನಾ ಸದ್ಯ ದುಲೀಪ್ ಟ್ರೋಫಿಯ ಇಂಡಿಯಾ ಬ್ಲೂ ತಂಡದ ನಾಯಕನಾಗಿದ್ದಾರೆ. ಇವರು ಘಾಜಿಯಾಬಾದ್​ನಿಂದ ಕಾನ್ಪುರಕ್ಕೆ ಹೋಗುತ್ತಿದ್ದರು. ಟೂರ್ನಮೆಂಟ್​ನ ಮ್ಯಾಚ್​ ಆಡುವ ಸಲುವಾಗಿ ಇವರು ಇಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ತಕ್ಷಣ ಸ್ಥಳೀಯರು ರೈನಾ ನೆರವಿಗೆ ಬಂದಿದ್ದರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದರು. ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಇನ್ನೊಂದು ಕಾರಿನ ವ್ಯವಸ್ಥೆ ಮಾಡಿ ರೈನಾರನ್ನು ಕಳುಹಿಸಿಕೊಟ್ಟಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!