Sunday , December 16 2018
ಕೇಳ್ರಪ್ಪೋ ಕೇಳಿ
Home / Mumbai Mail / ಟೋಲ್​ನಲ್ಲಿ ಕಾರ್ಡ್​ ಸ್ವೈಪ್​ : 230 ರೂಪಾಯಿ ಬದಲಿಗೆ 87 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿ!

ಟೋಲ್​ನಲ್ಲಿ ಕಾರ್ಡ್​ ಸ್ವೈಪ್​ : 230 ರೂಪಾಯಿ ಬದಲಿಗೆ 87 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿ!

ಮುಂಬೈ : ಇಲ್ಲಿನ ಕಾಲ್​ಪುರ ಟೋಲ್​ ಪ್ಲಾಜಾದಲ್ಲಿ ಕಾರ್ಡ್​ ಸ್ವೈಪ್​ ಮಾಡಿದ ವ್ಯಕ್ತಿಯೊಬ್ಬರು ಭಾರೀ ಮೊತ್ತದ ಹಣ ಕಳೆದುಕೊಂಡಿದ್ದಾರೆ. ಪುಣೆಯ ಸೇಲ್ಸ್​ ಮ್ಯಾನೇಜರ್​ ಆಗಿರುವ ದರ್ಶನ್ ಪಾಟೀಲ್ ಎಂಬುವವರು ಕಾಲ್​ಪುರ ಟೋಲ್​ ಪ್ಲಾಸಾದಲ್ಲಿ 230 ರೂಪಾಯಿ ಹಣಕ್ಕೆ ಕಾಡ್​ ಸ್ವೈಪ್ ಮಾಡಿದ್ದರು. ಆದರೆ, ಹೀಗೆ ಕಾರ್ಡ್​ ಸ್ವೈಪ್ ಮಾಡಿದ ಎರಡು ಗಂಟೆಯ ಬಳಿಕ ಇವರ ಖಾತೆಯಿಂದ 87 ಸಾವಿರ ರೂಪಾಯಿ ಕಳ್ಳತನವಾಗಿದೆ…! ಈ ಬಗ್ಗೆ ತಕ್ಷಣ ಇವರು ಪುಣೆಯ ಹದಾಪ್ಸರ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೆಪ್ಟೆಂಬರ್​ 9 ರ ಶನಿವಾರ ಈ ಘಟನೆ ನಡೆದಿದೆ.

ಅಂದು ಸಂಜೆ 6.27 ಗಂಟೆಗೆ ಇವರು ಟೋಲ್​ನಲ್ಲಿ 230 ರೂಪಾಯಿ ಪಾವತಿಸಿದ್ದರು. ಇದಕ್ಕೆ ರಸೀದಿ ಕೂಡಾ ಸಿಕ್ಕಿದೆ. ಆದರೆ, 8.30 ಸುಮಾರಿಗೆ ಇವರಿಗೆ ಒಂದು ಮೆಸೇಜ್ ಬರುತ್ತದೆ. ಈ ಮೆಸೇಜ್​ನಲ್ಲಿ 20 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿದ ನೊಟೀಫಿಕೇಷನ್ ಇತ್ತು. ಇದಾದ ಬಳಿಕ ಇದೇ ರೀತಿ ಸುಮಾರು ಆರು ಮೆಸೇಜ್​ಗಳು ಇವರ ಮೊಬೈಲ್​ಗೆ ಬಂದಿವೆಯಂತೆ. ಹೀಗಾಗಿ, ಒಟ್ಟು 87 ಸಾವಿರ ರೂಪಾಯಿಯನ್ನು ಯಾರೋ ವ್ಯವಸ್ಥಿತವಾಗಿ ಕದ್ದಿದ್ದಾರೆ. ಟೋಲ್​ನಲ್ಲಿ ಕಾರ್ಡ್​ ಸ್ವೈಪ್ ಮಾಡಿದ ಬಳಿಕ ಹೀಗೆ ಆಗಿರುವುದರಿಂದ ಇವರಿಗೆ ಟೋಲ್​ನಲ್ಲೇ ಏನೋ ಗೋಲ್​ಮಾಲ್ ಆಗಿದೆ ಎಂಬ ಅನುಮಾನ ಇದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!