Thursday , April 19 2018
Home / News NOW / ಪಾರಿವಾಳಕ್ಕೆ ಟಿಕೆಟ್ ತೆಗೆಯದ ಬಸ್​ ಕಂಡೆಕ್ಟರ್​ಗೆ ನೊಟೀಸ್​​…!
ಸಾಂದರ್ಭಿಕ ಚಿತ್ರ

ಪಾರಿವಾಳಕ್ಕೆ ಟಿಕೆಟ್ ತೆಗೆಯದ ಬಸ್​ ಕಂಡೆಕ್ಟರ್​ಗೆ ನೊಟೀಸ್​​…!

ಚೆನ್ನೈ : ಇದು ವಿಚಿತ್ರವಾದರೂ ಸತ್ಯ ಘಟನೆ. ತಮಿಳುನಾಡು ಸಾರಿಗೆ ಬಸ್​ ಕಂಡೆಕ್ಟರ್​ವೊಬ್ಬರು ತಾನು ನಿರೀಕ್ಷೆಯೇ ಮಾಡದೇ ಇದ್ದಂತಹ ಕಾರಣಕ್ಕೆ ನೊಟೀಸ್ ಪಡೆದಿದ್ದಾರೆ. ಇವರು ನೊಟೀಸ್ ಪಡೆದ ಕಾರಣ ಕೇಳಿದರೆ ನಿಮಗೂ ಅಚ್ಚರಿ ಆಗಬಹುದು… ಇವರಿಗೆ ನೊಟೀಸ್​ ಕೊಟ್ಟಿದ್ದು, ಟಿಕೆಟ್ ತೆಗೆಯದೆ ಪಾರಿವಾಳಕ್ಕೆ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ಕೊಟ್ಟಿದ್ದು ಯಾಕೆ ಎಂಬ ಕಾರಣಕ್ಕೆ…!!! ಅರೇ ಪಾರಿವಾಳ ಹೇಗೆ ಟಿಕೆಟ್​ ತೆಗೆಯಬೇಕು? ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡಲು ಶುರು ಮಾಡಿದರೆ ಅದರಲ್ಲಿ ಏನು ತಪ್ಪಿಲ್ಲ ಬಿಡಿ. ಅದಕ್ಕೆ ನಿಮಗೆ ಪೂರ್ತಿ ಡಿಟೈಲ್ಸ್ ಕೊಡ್ತೀವಿ ಕೇಳಿ…

ಏನಿದು ಘಟನೆ ? : ತಮಿಳುನಾಡಿನ ಎಲ್ವಾಡಿ ಎಂಬ ತುಂಬಾ ಕುಗ್ರಾಮದಲ್ಲಿ ನಡೆದಿರುವ ಘಟನೆ ಇದು. ಇಲ್ಲಿನ ಹರೂರ್​ ಎಂಬ ಊರಿನಲ್ಲಿ ಸರ್ಕಾರಿ ಬಸ್ ಪ್ರಯಾಣಿಸುತ್ತಿತ್ತು. ಈ ಊರಿಗೆ ಬರುವ ಒಂದೇ ಒಂದು ಬಸ್​ ಇದು. ಆಗ ದಾರಿ ಮಧ್ಯೆ ಟಿಕೆಟ್ ಚೆಕ್ಕಿಂಗ್​ಗೆ ಅಧಿಕಾರಿಗಳು ಬಸ್​ ನಿಲ್ಲಿಸಿದರು. ಬಸ್​ನಲ್ಲಿ ಸುಮಾರು 80 ಪ್ರಯಾಣಿಕರು ಇದ್ದರು. ಎಲ್ಲಾ ಪ್ರಯಾಣಿಕರ ಬಳಿಯೂ ಟಿಕೆಟ್​​ ಇತ್ತು. ಆದರೂ, ಕಂಡೆಕ್ಟರ್​ಗೆ ಅಧಿಕಾರಿಗಳು ನೊಟೀಸ್ ನೀಡಿದ್ದರು. ಕಾರಣ, ಬಸ್​ನಲ್ಲಿದ್ದ ಪಾರಿವಾಳಕ್ಕೆ ಟಿಕೆಟ್ ತೆಗೆದಿರಲಿಲ್ಲ…! ಅರೇ ಮತ್ತೆ ಕನ್​​ಫ್ಯೂಸ್​​ ಮಾಡುತ್ತಿದ್ದಾರೆ ಅಂತ ಬೈಯ್ತಿದ್ದೀರಾ? ಬೈಯ್ಬೇಡಿ, ಹೇಳ್ತೀವಿ ಕೇಳಿ. ಬಸ್​ನಲ್ಲಿ ಪ್ರಯಾಣಿಕರೊಬ್ಬರು ತಮ್ಮೊಂದಿಗೆ ಪಾರಿವಾಳವನ್ನೂ ಹಿಡಿದುಕೊಂಡಿದ್ದರು. ಆದರೆ, ಆ ಪಾರಿವಾಳಕ್ಕೆ ಆ ಪ್ರಯಾಣಿಕ ಟಿಕೆಟ್ ತೆಗೆದಿರಲಿಲ್ಲ…!

ಈ ಪ್ರಯಾಣಿಕ ಕಂಠಮಟ್ಟ ಕುಡಿದಿದ್ದ. ಬಸ್​ನಲ್ಲಿ ಬರುವಾಗ ಅದೇಗೋ ಈತ ಕೈಗೆ ಪಾರಿವಾಳ ಸಿಕ್ಕಿಬಿದ್ದಿತ್ತು, ಈ ಪಾರಿವಾಳ ಹಿಡಿದ ಪ್ರಯಾಣಿಕ ಮದ್ಯದ ಮತ್ತಿನಲ್ಲೇ ಪಾರಿವಾಳದೊಂದಿಗೆ ಮಾತನಾಡುತ್ತಿದ್ದ. ಟಿಕೆಟ್ ಚೆಕ್ಕಿಂಗ್​ಗೆ ಬಂದಿದ್ದ ಅಧಿಕಾರಿಗಳು ಇದನ್ನು ಗಮನಿಸಿದರು. ಆಗ ಕಂಡೆಕ್ಟರ್ ಬಸ್ ಹತ್ತುವಾಗ ಈತನ ಬಳಿ ಪಾರಿವಾಳ ಇರಲಿಲ್ಲ ಎಂದು ಉತ್ತರಿಸಿದ್ದರು. ಆದರೂ, ಪರಿಶೀಲನೆಗೆ ಬಂದ ಅಧಿಕಾರಿಗಳು ಕಂಡೆಕ್ಟರ್​ಗೆ ಮೊಮೊ ಕೊಟ್ಟಿದ್ದಾರೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎನ್​​ಎಸ್​ಟಿಸಿ ಅಧಿಕಾರಿಗಳು, ನಿಯಮ ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನಿಯಮದ ಪ್ರಕಾರ, ಬಸ್​ನಲ್ಲಿ ಪ್ರಾಣಿ ಅಥವಾ ಪಕ್ಷಿಗಳನ್ನು ಕೊಂಡೊಯ್ಯುತ್ತಿದ್ದರೆ ಅವುಗಳಿಗೆ ಟಿಕೆಟ್ ತೆಗೆಯುವುದು ಕಡ್ಡಾಯವಂತೆ. ಹೀಗಾಗಿಯೇ, ಕಂಡೆಕ್ಟರ್​ಗೆ ನೊಟೀಸ್ ಕೊಡಲಾಗಿದೆಯಂತೆ…

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!