Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Bollywood / ಐಶ್ವರ್ಯ ಜೊತೆಗಿನ ಚಿತ್ರವನ್ನು ಮಾಧವನ್​​ ಒಪ್ಪಿಲ್ಲ ಯಾಕೆ ಗೊತ್ತಾ? ಡೇಟ್​ ಸಮಸ್ಯೆಯಿಂದ ಅಲ್ಲ..!

ಐಶ್ವರ್ಯ ಜೊತೆಗಿನ ಚಿತ್ರವನ್ನು ಮಾಧವನ್​​ ಒಪ್ಪಿಲ್ಲ ಯಾಕೆ ಗೊತ್ತಾ? ಡೇಟ್​ ಸಮಸ್ಯೆಯಿಂದ ಅಲ್ಲ..!

ಮುಂಬೈ : ಒಬ್ಬ ನಟ ತನಗೆ ಇಷ್ಟೇ ಸಂಭಾವನೆ ಬೇಕು ಎಂದು ಕೇಳಬಹುದು. ಇದಾದ ಬಳಿಕ ಮಾತುಕತೆ ನಂತರ ಸಂಭಾವನೆಯನ್ನು ಇಳಿಸಬಹುದು. ಅಥವಾ ಸಮ್ಮತವಾಗದೇ ಇದ್ದರೆ ಚಿತ್ರದಿಂದಲೇ ಹೊರ ಹೋಗಬಹುದು… ಸದ್ಯ ದಕ್ಷಿಣ ಭಾರತದ ಖ್ಯಾತ ನಟ ಮಾಧವನ್​ ಮಾಡಿದ್ದೂ ಇದೇ…

ಇದು ಐಶ್ವರ್ಯ ಬಚ್ಚನ್​​ ಅಭಿನಯದ ಫ್ಯಾನಿ ಖಾನ್ ಚಿತ್ರಕ್ಕೆ ಮಾಧವನ್​ ನಾಯಕನಾಗಬೇಕಾಗಿತ್ತು. ಆದರೆ, ಕಡೇ ಕ್ಷಣದಲ್ಲಿ ಮಾಧವನ್ ಈ ಚಿತ್ರಕ್ಕೆ ಒಲ್ಲೆ ಎಂದಿದ್ದರು. ಹೀಗಾಗಿ, ಈ ಪಾತ್ರ ರಾಜ್​ಕುಮಾರ್​ ಪಾಲಾಗಿತ್ತು. ಡೇಟ್​​ ಸಮಸ್ಯೆಯಿಂದ ಮಾಧವನ್ ಈ ಚಿತ್ರವನ್ನು ನಿರಾಕರಿಸಿದ್ದರು ಎಂದೇ ಮಾತುಗಳು ಕೇಳಲಾರಂಭಿಸಿದ್ದವು. ಆದರೆ, ಅಸಲಿ ಕಾರಣ ಇದಲ್ಲ ಎಂಬ ಮಾತುಗಳು ಈ ಗೊತ್ತಾಗಿದೆ. ಚಿತ್ರತಂಡದ ಅಂತರಂಗದ ಮೂಲಗಳು ತಿಳಿಸಿರುವಂತೆ ಸಂಭಾವನೆಯ ಕಾರಣದಿಂದಲೇ ಮಾಧವನ್​ ಈ ಚಿತ್ರದಿಂದ ಹೊರನಡೆದಿದ್ದಾರಂತೆ…!

ಸದ್ಯದ ಮಾಹಿತಿ ಪ್ರಕಾರ ಮಾಧವನ್​​ ದೊಡ್ಡ ಮಟ್ಟದ ಸಂಭಾವನೆ ಕೇಳಿದ್ದರಂತೆ. 15 ದಿನದ ಶೂಟಿಂಗ್​ಗೆ 1.5 ಕೋಟಿ ರೂಪಾಯಿ ಬೇಡಿಕೆ ಮಾಧವನ್​ ಅವರದ್ದಾಗಿತ್ತು. ಆದರೆ, ಚಿತ್ರ ನಿರ್ಮಾತೃಗಳಿಗೆ ಇದು ಸರಿಯೆಂದು ಕಾಣಿಸಲಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ನ್ಯಾಯಸಮ್ಮತವಲ್ಲ ಎಂಬುದು ನಿರ್ಮಾತೃಗಳ ಅಭಿಮತವಾಗಿತ್ತು. ಹೀಗಾಗಿಯೇ, ಸರ್ವಸಮ್ಮತದಿಂದ ಮಾಧವನ್​ ಚಿತ್ರದಿಂದ ಹೊರಬಂದರು ತಕ್ಷಣ ರಾಜ್​ಕುಮಾರ್​ ಅವರನ್ನು ಈ ಪಾತ್ರಕ್ಕೆ ಹಾಕಿಕೊಳ್ಳಲಾಗಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!