Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ‘ಭರ್ಜರಿ’ಯಾಗಿಯೇ ಬರುತ್ತಿದೆ ಧ್ರುವ ಚಿತ್ರ

‘ಭರ್ಜರಿ’ಯಾಗಿಯೇ ಬರುತ್ತಿದೆ ಧ್ರುವ ಚಿತ್ರ

ಬೆಂಗಳೂರು : ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಡಿಂಪಲ್​ ಕ್ವೀನ್​ ರಚಿತಾ ರಾಮ್​ ಈಗ ಭರ್ಜರಿ ಚಿತ್ರದ ರಿಲೀಸ್ ಖುಷಿಯಲ್ಲಿದ್ದಾರೆ. ಬರೋಬ್ಬರಿ 2 ವರ್ಷದ ಪ್ರಯತ್ನ ಇದು. ಈ ಚಿತ್ರ ಸೆಪ್ಟೆಂಬರ್​ 15ಕ್ಕೆ ಭರ್ಜರಿಯಾಗಿಯೇ ತೆರೆಗೆ ಬರುತ್ತಿದೆ. ಅದೂ ಅಲ್ಲದೆ, ಪರಭಾಷಾ ಚಿತ್ರಗಳನ್ನೇ ಪ್ರದರ್ಶಿಸುವ ಚಿತ್ರಮಂದಿರಗಳಿಗೂ ಭರ್ಜರಿ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದೆ. ಈ ಮೂಲಕ ಭರ್ಜರಿ ಚಿತ್ರ ಭರ್ಜರಿಯಾಗಿಯೇ ಹವಾ ಸೃಷ್ಟಿಸಿದೆ…

ಈ ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಆಗಿದೆ. ಆದರೂ, ಚಿತ್ರದ ಬಗೆಗಿನ ಕ್ರೇಜ್​ ಒಂದಿನಿತೂ ಕಡಿಮೆ ಆಗಿಲ್ಲ. ಅದಕ್ಕೆ ಇತ್ತೀಚೆಗೆ ರಿಲೀಸ್ ಆಗಿರುವ ಟೀಸರ್​, ಸಾಂಗ್ಸ್​ಗಳೇ ಸಾಕ್ಷಿ… ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಚೌತಿ ಸಂದರ್ಭದಲ್ಲೇ ರಿಲೀಸ್ ಆಗಬೇಕಾಗಿತ್ತು. ಆದರೆ, ಕೆಲವೊಂದು ಕಾರಣದಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು, ಇದೀಗ ಸೆಪ್ಟೆಂಬರ್​ 15ರಿಂದ ರಾಜ್ಯಾದ್ಯಂತ ಭರ್ಜರಿಯಾಗಿಯೇ ಬರುತ್ತಿದೆ…

ಅದೂ ಅಲ್ಲದೆ, ಭರ್ಜರಿ ಬಿಡುಗಡೆಗೆ ಮುನ್ನವೇ ಸಖತ್​ ಸುದ್ದಿ ಮಾಡುತ್ತಿದೆ. ಅದರಲ್ಲೂ ಈ ಚಿತ್ರ ಇಷ್ಟು ದಿನ ಪರಭಾಷಾ ಚಿತ್ರಗಳನ್ನೇ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳನ್ನೂ ಪ್ರವೇಶಿಸಿದೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಬೆಂಗಳೂರಿನ ರೆಕ್ಸ್​, ಕಾವೇರಿ ಹಾಗೂ ಊರ್ವಶಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನವಾಗಲಿದೆ. ಅದರಲ್ಲೂ ಬ್ರಿಗೇಡ್​ ರೋಡ್​ನಲ್ಲಿರುವ ರೆಕ್ಸ್​ ಚಿತ್ರಮಂದಿರದಲ್ಲಿ 18 ವರ್ಷಗಳ ಬಳಿಕ ಕನ್ನಡ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿದೆ ಎಂಬುದು ಗಮನಾರ್ಹ…

ಬ್ರಿಗೇಡ್ ರೋಡ್ ಅಂದರೆ ಇಂಗ್ಲೀಷ್​ ಮಯ. ಹೀಗಾಗಿ, ಈ ಸುತ್ತಮುತ್ತಲಿನ ಚಿತ್ರಮಂದಿರದಲ್ಲೂ ಇಂಗ್ಲೀಷ್​​​ ಚಿತ್ರಗಳೇ ಪ್ರದರ್ಶನವಾಗುತ್ತದೆ. ಇಂಗ್ಲೀಷ್​​ ಹೊರತುಪಡಿಸಿದರೆ ತಮಿಳು, ತೆಲುಗು ಚಿತ್ರ ಪ್ರದರ್ಶನವಾಗುತ್ತದೆ. ಆದರೆ, ಭರ್ಜರಿ ಈ ಎಲ್ಲಾ ನೋವನ್ನು ನಿವಾರಿಸಿದೆ. 1999ರಲ್ಲಿ ಶಿವರಾಜ್​ಕುಮಾರ್​ ಅಭಿನಯದ ಎ.ಕೆ.47 ಚಿತ್ರವೇ ರೆಕ್ಸ್​ನಲ್ಲಿ ಪ್ರದರ್ಶನಗೊಂಡಿದ್ದ ಕಡೆಯ ಕನ್ನಡ ಚಿತ್ರ.

ಇನ್ನು, ಗಡಿಭಾಗದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಗಡಿಭಾಗದ ಜಿಲ್ಲೆಗಳ ಚಿತ್ರಮಂದಿರಗಳಲ್ಲೂ ಭರ್ಜರಿ ಪ್ರದರ್ಶನಕ್ಕೆ ಸಜ್ಜಾಗಿದ್ದು ಧ್ರುವ ಅಭಿಮಾನಿಗಳನ್ನೂ ಸಂಭ್ರಮದಲ್ಲಿ ಮುಳುಗುವಂತೆ ಮಾಡಿದೆ. ಸರಿಸುಮಾರು 300ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಭರ್ಜರಿ ತೆರೆ ಕಾಣುತ್ತಿದೆ. ಇನ್ನು, ಚಿತ್ರದ ಸ್ಯಾಟಲೈಟ್​ ರೈಟ್​ ಮತ್ತು ಹಿಂದಿ ರಿಮೇಕ್ ರೈಟ್​​ ಕೂಡಾ ಒಳ್ಳೆಯ ಬೆಲೆಗೇ ಸೇಲ್​ ಆಗಿದೆ ಎಂದು ಹೇಳಲಾಗುತ್ತಿದೆ.

ಭರ್ಜರಿ ಚಿತ್ರ ಈಗಾಗಲೇ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದ ಟ್ರೇಲರ್​​, ಹಾಡಿಗೆ ಜನ ಈಗಾಗಲೇ ಫಿದಾ ಆಗಿದ್ದಾರೆ… ಇವು ಯುಟ್ಯೂಬ್​ನಲ್ಲೂ ಸಖತ್​ ಸೌಂಡ್ ಮಾಡುತ್ತಿವೆ. ಚಿತ್ರದ ಇತರ ಹಾಡುಗಳು ಕೂಡಾ ಕೇಳುಗರ ಮನಗೆದ್ದಿದೆ. ಅದರಲ್ಲೂ ಟೈಟಲ್​ ಸಾಂಗ್​​ ಸಖತ್​ ಹಿಟ್ ಆಗಿದೆ. ಇದೊಂದು ಟಪ್ಪಾಂಗುಚ್ಚಿ ಹಾಡು…ಈ ಚಿತ್ರದ ಡೈರೆಕ್ಟರ್​ ಚೇತನ್ ಕುಮಾರ್​… ಧ್ರುವ ಅಭಿನಯದ ಬಹದ್ದೂರ್​ ಚಿತ್ರವನ್ನು ನಿರ್ದೇಶನ ಮಾಡಿದ್ದು ಕೂಡಾ ಇವರೇ… ಈ ಚಿತ್ರದಲ್ಲಿ ಧ್ರುವಾ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ… ಈ ಚಿತ್ರದಲ್ಲಿ ಧ್ರುವಗೆ ಮೂವರು ಚೆಲುವೆಯರು ಜೋಡಿಯಾಗಿದ್ದಾರೆ… ಡಿಂಪಲ್​ ಕ್ವೀನ್​​ ರಚಿತಾರಾಮ್​​ ಧ್ರುವಗೆ ನಾಯಕಿಯಾದರೆ, ಹರಿಪ್ರಿಯಾ ಮತ್ತು ವೈಶಾಲಿ ದೀಪಕ್​ ಕೂಡಾ ಇಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾರಾಮ್ ನಿರ್ವಹಿಸುವ ಪಾತ್ರದ ಹೆಸರು ಪುಟ್ಟಗೌರಿ. ಆದರೆ, ಹರಿಪ್ರಿಯಾ ಮತ್ತು ವೈಶಾಲಿ ಅವರ ಪಾತ್ರದ ಸ್ವರೂಪ ಯಾವ ರೀತಿಯದ್ದು ಎಂಬುದು ಸದ್ಯಕ್ಕೆ ಸಸ್ಪೆನ್ಸ್​​.

ಫಾರಿನ್​ ಲೊಕೇಷನ್​ನಲ್ಲಿ ಭರ್ಜರಿಯ ಸಾಂಗ್​​ ಭರ್ಜರಿಯಾಗಿಯೇ ಶೂಟ್​ ಆಗಿದೆ… ಮೇಕಿಂಗ್ ಕೂಡಾ ಸಖತ್ ಆಗಿದೆ… ಒಟ್ಟಿನಲ್ಲಿ ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

error: Content is protected !!