Thursday , December 14 2017
Home / Sudina Special / ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ನವದೆಹಲಿ : ಆಪಲ್​ ಹೊಸ ಫೋನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಸುದ್ದಿಯನ್ನು ನೀವು ಕೇಳಿರಬಹುದು. ಮೂರು ಹೊಸ ನಮೂನೆಯ ಫೋನ್​​ಗಳನ್ನು ಆಪಲ್​ ಬಿಡುಗಡೆ ಮಾಡಿದೆ. ಐಫೋನ್​8, ಐಫೋನ್​8 ಪ್ಲಸ್​ ಮತ್ತು ಐಫೋನ್​ ಎಕ್ಸ್​​​. ಇದರಲ್ಲಿ ಐಫೋನ್​8 ಮತ್ತು ಐಫೋನ್​8 ಪ್ಲಸ್​ನ ಆರಂಭಿಕ ಬೆಲೆ ಸುಮಾರು ಐಫೋನ್​7 ಮತ್ತು ಐಫೋನ್​7 ಪ್ಲಸ್ನ ಬೆಲೆಗಿಂತ ಸ್ವಲ್ಪ ಹೆಚ್ಚಿದೆ. ​ಐಫೋನ್​ 8 64ಜಿಬಿಗೆ 64,000 ರೂಪಾಯಿ, ಐಫೋನ್​​​8 256ಜಿಬಿಗೆ 77,000, ಐಫೋನ್​​8 ಪ್ಲಸ್​ 64ಜಿಬಿ 73,000, ಮತ್ತು ಐಫೋನ್​​8 ಪ್ಲಸ್​ 256 ಜಿಬಿ 86,000 ರೂಪಾಯಿಗೆ ಲಭ್ಯವಿರಲಿದೆ. ಈ ಫೋನ್​ಗಳು ಸೆಪ್ಟೆಂಬರ್​ 29ಕ್ಕೆ ಭಾರತದಲ್ಲಿ ಮಾರುಕಟ್ಟೆಗೆ ಲಭ್ಯವಾಗಲಿವೆ.

ಆದರೆ, ಐಫೋನ್​ ಎಕ್ಸ್​​​​ ಸಂಪೂರ್ಣ ಬೇರೆಯದ್ದೇ ಫೋನ್​ ಆಗಿದ್ದು, ಎಲ್ಲಾ ಸೀರಿಸ್​ಗಿಂತ ವಿಶೇಷವಾಗಿಯೂ ಇದೆ. ಹೀಗಾಗಿ, ಈ ಫೋನ್ ಹೊಸ ಪ್ರೈಸ್​ ಟ್ಯಾಗ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಭಾರತದಲ್ಲಿ ಈ ಫೋನ್ ತುಂಬಾ ದುಬಾರಿಯೂ ಆಗಿರಲಿದೆ. ಭಾರತದಲ್ಲಿ ನವೆಂಬರ್​ 3ರ ನಂತರ ಈ ಫೋನ್​ ಮಾರುಕಟ್ಟೆಗೆ ಲಭ್ಯವಾಗಲಿವೆ. ಐಫೋನ್​​ ಎಕ್ಸ್​​​​ 64ಜಿಬಿ ವರ್ಶನ್​ಗೆ 89 ಸಾವಿರ ರೂಪಾಯಿ ಆಗಲಿದೆ. ಇನ್ನು 256ಜಿಬಿಯ ಐಫೋನ್​ ಎಕ್ಸ್​ ವರ್ಶನ್​​ನ ಬೆಲೆ 1,02,000 ರೂ.ಆಗಲಿದೆ. ಐಫೋನ್​ಗಳೇ ದುಬಾರಿಯಾಗಿದ್ದರೂ ಈ ಬೆಲೆ ಇನ್ನಷ್ಟು ದುಬಾರಿಯೇ ಆಗಿದೆ.

ಬೇರೆ ಕಡೆಗೆ ಹೋಲಿಸಿದರೆ ಹಾಂಕಾಂಗ್​ನಲ್ಲಿ ಐಫೋನ್​ ಎಕ್ಸ್​​ ಕೊಂಚ ಕಡಿಮೆ ಬೆಲೆಗೆ ಸಿಗುತ್ತಿದೆ. ಭಾರತದಲ್ಲಿ ಸಾಮಾನ್ಯವಾಗಿ ಐಫೋನ್​ಗಳು ದುಬಾರಿಯಾಗಿದ್ದರೆ ಹಾಂಕಾಂಗ್​ನಲ್ಲಿ ಕಡಿಮೆ ಬೆಲೆಗೆ ಲಭ್ಯವಿರುತ್ತವೆ. ಅಂದರೆ, ಐಫೋನ್​ ಎಕ್ಸ್​ ಭಾರತದಲ್ಲಿ 1,02,000 ರೂಪಾಯಿಗೆ ಲಭ್ಯವಾದರೆ ಹಾಂಕಾಂಗ್​ನಲ್ಲಿ 80,999 ರೂಪಾಯಿಗೆ ಸಿಗುತ್ತಿವೆ.

 

About sudina

Check Also

ಡೆಡ್ಲಿ ಬ್ಲೂವೇಲ್ : ಏನಿದು ಆಟ…? : ಮಕ್ಕಳು ಬಲಿಯಾಗುವುದು ಯಾಕೆ?, ಹೇಗೆ?

ಈಗ ಎಲ್ಲಿ ನೋಡಿದರೂ `ಬ್ಲೂವೇಲ್’ ಎಂಬ ಡೆಡ್ಲಿ ಗೇಮ್‍ನದ್ದೇ ಸದ್ದು. ಡೆಡ್ಲಿ ಚಾಲೆಂಜ್‍ಗಳ್ಳುಳ್ಳ ಈ 50 ದಿನಗಳ ಆಟ ಮುಗ್ಧ …

Leave a Reply

Your email address will not be published. Required fields are marked *

error: Content is protected !!