Sunday , November 18 2018
ಕೇಳ್ರಪ್ಪೋ ಕೇಳಿ
Home / News NOW / ಕುಡಿಯುವುದಕ್ಕೆ 11 ತಿಂಗಳ ಮಗು ಮಾರಿದ ಅಪ್ಪ…!

ಕುಡಿಯುವುದಕ್ಕೆ 11 ತಿಂಗಳ ಮಗು ಮಾರಿದ ಅಪ್ಪ…!

ಒಡಿಸ್ಸಾ: ತಂದೆಯೊಬ್ಬ ಕುಡಿಯುವುದಕ್ಕಾಗಿ ತನ್ನ ಮಗುವನ್ನೇ ಮಾರಾಟ ಮಾಡಿದ್ದಾನೆ…! ಒಡಿಸ್ಸಾದ ಭದ್ರಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 11 ತಿಂಗಳ ಗಂಡು ಮಗುವನ್ನು 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಈತ ಬಂದ ಹಣದಲ್ಲಿ ಹೊಸ ಮೊಬೈಲ್ ಫೋನ್, ಬೆಳ್ಳಿಯ ಕಾಲ್ಗೆಜ್ಜೆ ಮತ್ತು ಬೇಕಾದಷ್ಟು ಮದ್ಯವನ್ನು ಖರೀದಿಸಿದ್ದಾನೆ. ಇದಾದ ಬಳಿಕ ವಿಷಯ ತಿಳಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಲರಾಮ್ ಮುಖಿ ಎಂದು ಗುರುತಿಸಲಾಗಿದೆ.

ಮಗು ಮಾರಾಟದಿಂದ ಬಂದ 25 ಸಾವಿರ ರೂಪಾಯಿಯಲ್ಲಿ 2 ಸಾವಿರದ ಮೊಬೈಲ್, ತನ್ನ ಹೆಣ್ಣು ಮಗಳಿಗೆ 1500 ರೂಪಾಯಿಯ ಬೆಳ್ಳಿ ಚೈನು, ಪತ್ನಿ ಸುಕ್ತಿಗೆ ಒಂದು ಸೀರೆ ಖರೀದಿಸಿದ್ದಾನೆ. ಬಾಕಿ ಉಳಿದ ಹಣದಲ್ಲೆಲ್ಲಾ ಮದ್ಯವನ್ನು ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈತನ ಪತ್ನಿ ಸುಕ್ತಿಯ ವಿಚಾರಣೆಯನ್ನೂ ಮಾಡುತ್ತಿದ್ದಾರೆ. ಈ ದಂಪತಿಗೆ 10 ವರ್ಷದ ಇನ್ನೊಬ್ಬ ಮಗನಿದ್ದಾನೆ.

ಬಲರಾಮ್ ಮುಖಿ ಸ್ವಚ್ಛತಾ ಕೆಲಸಗಾರನಾಗಿದ್ದು, ನಿರ್ದಿಷ್ಟ ಆದಾಯ ಈತನಿಗಿರಲಿಲ್ಲ. ಅಲ್ಲದೆ, ಈತ ಕುಡಿತದ ದಾಸನಾಗಿದ್ದ ಎಂದು ಭದ್ರಕ್ ಎಸ್‍ಪಿ ಅನೂಪ್ ಸಾಹೋ ಹೇಳಿದ್ದಾರೆ. ಪೊಲೀಸರ ಪ್ರಕಾರ, ಸ್ಥಳೀಯ ಅಂಗನವಾಡಿಯಲ್ಲಿ ಕೆಲಸ ಮಾಡುವ ಬಲರಾಮ್ ಬಾವ ಬಲೀಲಾ ಕೂಡಾ ಈ ಮಗು ಮಾರಾಟದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆ ಇದೆ.

ಸರ್ಕಾರಿ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿ ನಿವೃತ್ತರಾಗಿರುವ ಸೋಮನಾಥ್ ಸೇಥಿ ಈ ಮಗು ಖರೀದಿಸಿದ್ದಾರೆ ಎಂದು ಗೊತ್ತಾಗಿದೆ. ಸೇಥಿ ಅವರು 2012 ರಲ್ಲಿ 24 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಇವರ ಪತ್ನಿ ಖಿನ್ನತೆಗೊಳಗಾಗಿದ್ದರು. ಹೀಗಾಗಿ, ಇವರು ಮಗು ದತ್ತು ಪಡೆಯಲು ಓಡಾಡುತ್ತಿದ್ದರು. ಈ ವಿಷಯ ಬಲರಾಮ್ ಬಾವನಿಗೆ ಗೊತ್ತಿತ್ತು. ಹೀಗಾಗಿ, ಈತ ಈ ಮಾರಾಟದ ಡೀಲ್ ಕುದುರಿಸಿದ್ದ ಎಂದು ಹೇಳಲಾಗುತ್ತಿದೆ.

ಆದರೆ, ಬಲರಾಮ್ ಪತ್ನಿ ಹೇಳುತ್ತಿರುವುದು ಬೇರೆಯೇ. ನನ್ನ ಗಂಡ ಕುಡಿತದ ದಾಸ. ಮೊನ್ನೆ ಕಂಠಮಟ್ಟ ಕುಡಿದು ಮನೆಗೆ ಬಂದ ಆತ, ಈ ಮಗು ಅಕ್ರಮ ಸಂಬಂಧಕ್ಕೆ ಹುಟ್ಟಿದ್ದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಮಗು ಮನೆಯಲ್ಲಿ ಇರಬಾರದು. ಹೀಗಾಗಿ, ನಾನು ಮಗುವನ್ನು ಬೇರೆಯವರಿಗೆ ಕೊಡುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದ ಎಂದು ಆಕೆ ಹೇಳುತ್ತಿದ್ದಾರೆ. ಅಲ್ಲದೆ, ನನಗೆ ಹೊಡೆದು ಬಡಿದು ಮಗುವನ್ನು ತೆಗೆದುಕೊಂಡು ಹೋದ ಪತಿ, 25 ಸಾವಿರ ಹಣ ಪಡೆದು ಮೊಬೈಲ್, ಸೀರೆ, ಬೆಳ್ಳಿ ಗೆಜ್ಜೆ ಎಂದು ತಂದಿದ್ದಾರೆ ಎಂದು ತಿಳಿಸಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!