Wednesday , March 27 2019
ಕೇಳ್ರಪ್ಪೋ ಕೇಳಿ
Home / Gulf News / ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಇನ್ನು ಐಫೋನ್​​ಅನ್ನೇ ಕ್ರೆಡಿಟ್​, ಡೆಬಿಟ್ ಕಾರ್ಡ್​​ ತರ ಬಳಸಬಹುದು…!

ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಇನ್ನು ಐಫೋನ್​​ಅನ್ನೇ ಕ್ರೆಡಿಟ್​, ಡೆಬಿಟ್ ಕಾರ್ಡ್​​ ತರ ಬಳಸಬಹುದು…!

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ

ದುಬೈ : ಕಾಶ್​ಲೆಸ್​ ವ್ಯವಹಾರಕ್ಕೆ ಈಗ ಎಲ್ಲೆಲ್ಲೂ ಪ್ರೋತ್ಸಾಹ ಸಿಗುತ್ತಿದೆ. ಜನ ಕೂಡಾ ಇಂತಹ ವ್ಯವಸ್ಥೆಗೇ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಜನರ ಈ ಆಸಕ್ತಿಗೆ ಅನುಗುಣವಾಗಿ ವ್ಯವಸ್ಥೆಗಳೂ ಬದಲಾಗುತ್ತಿವೆ. ಈಗ ಆಪಲ್​ ಐ ಫೋನ್​ ಕೂಡಾ ಕ್ಯಾಶ್​ಲೆಸ್​ ವ್ಯವಹಾರಕ್ಕೆ ಸಹಕಾರಿಯಾಗುವಂತಹ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಅಂದರೆ, ಈ ಐ ಫೋನ್​ನಲ್ಲೇ ನೀವು ಇನ್ಮುಂದೆ ಹಣ ಪಾವತಿ ಮಾಡಬಹುದಾಗಿದೆ. ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಇಂತಹ ಪ್ರಯುತ್ನಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಆಪಲ್​ನ ಪ್ರಯತ್ನಕ್ಕೆ ಸ್ಥಳೀಯ ಬ್ಯಾಂಕ್​​ಗಳು ಕೂಡಾ ಕೈ ಜೋಡಿಸಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದಿಂದ ಆಪಲ್ ಐಫೋನ್ ಬಳಕೆದಾರರು ಫೋನ್​ ಮೂಲಕವೇ ಹಣ ಪಾವತಿ ಮಾಡಿಕೊಳ್ಳಬಹುದು. ಐಫೋನ್ ಟ್ಯಾಪ್ ಮೂಲಕ ಹಣ ಪಾವತಿ ಮಾಡಬಹುದು.

ಎಮರೈಟ್ಸ್​ನ ಎನ್​ಬಿಡಿ, ಮಶ್ರೀಕ್, ಎಚ್​ಎಸ್​ಬಿಸಿ, ರಾಕ್​ಬ್ಯಾಂಕ್​, ಸ್ಟಾಂಡರ್ಡ್​ ಚಾರ್ಟೆಡ್​ ಮತ್ತು ಎಮರೈಟ್ಸ್​​​ ಇಸ್ಲಾಮಿಕ್​​ ಗ್ರಾಹಕರು ಈ ಸೇವೆಯನ್ನು ಪಡೆಯಬಹುದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಐಫೋನ್ ಬಳಕೆದಾರರು ತಮ್ಮ ಫೋನ್​ ಅನ್ನೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ರೀತಿ ಬಳಸಬಹುದಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!