Thursday , December 14 2017
Home / Earth / ಸೆಲ್ಫಿ ತೆಗೆದಿದ್ದ ಮಂಗ : ಫೋಟೋದ ಹಕ್ಕು ಯಾರದ್ದು…? : ವಿವಾದ 6 ವರ್ಷಗಳ ಬಳಿಕ ಕೋರ್ಟ್​ನಲ್ಲಿ ಇತ್ಯರ್ಥ!

ಸೆಲ್ಫಿ ತೆಗೆದಿದ್ದ ಮಂಗ : ಫೋಟೋದ ಹಕ್ಕು ಯಾರದ್ದು…? : ವಿವಾದ 6 ವರ್ಷಗಳ ಬಳಿಕ ಕೋರ್ಟ್​ನಲ್ಲಿ ಇತ್ಯರ್ಥ!

ಸ್ಯಾನ್​ಫ್ರಾನ್ಸಿಸ್ಕೋ : ಇದೊಂದು ವಿಚಿತ್ರ ಮತ್ತು ಅಷ್ಟೇ ಆಸಕ್ತಿದಾಯಕ ಸುದ್ದಿ. ಮಂಗನ ಸೆಲ್ಫಿ ಕತೆಯಿದು. ಈ ಸೆಲ್ಫಿ ವಿಚಾರ ದೊಡ್ಡ ವಿವಾದವೇ ಆಗಿತ್ತು. ಬರೋಬ್ಬರಿ ಆರು ವರ್ಷಗಳ ಕಾಲ ನಡೆದ ಈ ವಿವಾದ ಈಗ ಇತ್ಯರ್ಥವಾಗಿದೆ. ಅದೂ ಕೋರ್ಟ್​ನಲ್ಲಿ ಈ ಸಮಸ್ಯೆ ಬಗೆಹರಿದಿದೆ…!

ಏನಿದು ಸೆಲ್ಫಿ ಕತೆ…? : ಬ್ರಿಟನ್​ನ ಫೋಟೋಗ್ರಾಫರ್​ ಡೇವಿಡ್​ ಸ್ಲೇಟರ್​ ಎಂಬುವವರು 2011ರಲ್ಲಿ ಇಂಡೋನೇಷ್ಯಾಕ್ಕೆ ಹೋಗಿದ್ದರು. ಅಲ್ಲಿ ಇವರು ಫೋಟೋಗಳನ್ನು ಸೆರೆ ಹಿಡಿಯುತ್ತಿರುವಾಗ ನರುಟೋ ಎಂಬ ಸುಮಾರು ಏಳು ವರ್ಷದ ಮಂಗ ಸ್ಲೇಟರ್ ಅವರ ಕ್ಯಾಮೆರಾವನ್ನು ಎಳೆದುಕೊಂಡು ತನ್ನ ಫೋಟೋವನ್ನು ತಾನೇ ಕ್ಲಿಕಿಸಿಕೊಂಡಿತ್ತು. ಈ ಸೆಲ್ಫಿ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಆದರೆ, ಇದಾದ ಕೆಲವೇ ದಿನಗಳಲ್ಲಿ ಸ್ಲೇಟರ್​ಗೂ ಸಂಕಷ್ಟ ಎದುರಾಗಿತ್ತು. ಅದೇ ಈ ಸೆಲ್ಫಿಯ ಹಕ್ಕು ಯಾರದ್ದು ಎಂಬುದು? ಈ ಸೆಲ್ಫಿ ಹಕ್ಕು ಮಂಗನಿಗೆ ಸೇರಿದ್ದು ಎಂದು ‘ಪೀಪಲ್​ ಫಾರ್​ ದಿ ಎಥಿಕಲ್​​ ಟ್ರೀಟ್​ಮೆಂಟ್​ ಆಫ್​ ಆನಿಮಲ್​​’(ಪೇಟಾ) ವಾದ ಮಂಡಿಸಿತ್ತು. ಆದರೆ, ಸ್ಲೇಟರ್ ಮಾತ್ರ ಈ ಫೋಟೋದ ಹಕ್ಕು ತನ್ನದೆಂದು ವಾದಿಸಿದರು. ಮಂಗ ತನ್ನ ಕ್ಯಾಮೆರಾದಲ್ಲಿ ಫೋಟೋ ತೆಗೆದಿದ್ದರಿಂದ ಇದರ ಸಂಪೂರ್ಣ ಹಕ್ಕು ನನ್ನದೆಂದು ಅವರು ವಾದಿಸಿದರು. ಈ ಹಗ್ಗಜಗ್ಗಾಟ ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿತ್ತು.

ಸುಖಾಂತ್ಯ : ಈಗ ಈ ಪ್ರಕರಣ ಸುಖಾಂತ್ಯವಾಗಿದ್ದು, ನ್ಯಾಯಾಲಯ ತನ್ನ ಮಹತ್ವದ ತೀರ್ಪು ಪ್ರಕಟಿಸಿದೆ. ಭವಿಷ್ಯದಲ್ಲಿ ಈ ಫೋಟೋದ ಮೂಲಕ ಬರುವ ಆದಾಯದ ಶೇಕಡಾ 25ರಷ್ಟು ಭಾಗವನ್ನು ಫೋಟೋಗಾಫರ್ ಸ್ಲೇಟರ್​​​​ ಈ ಕೋತಿಗಳ ರಕ್ಷಣೆಗೆ ಕೊಡಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಈ ತೀರ್ಪಿಗೆ ಪೇಟಾ ಮತ್ತು ಡೇವಿಡ್​ ಸ್ಲೇಟರ್​ ಸಮ್ಮತಿಸಿದ್ದಾರೆ. ಪೇಟಾ ಕೂಡಾ ತನ್ನ ಬ್ಲಾಗ್​ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. (ಇಲ್ಲಿ ಕ್ಲಿಕ್ ಮಾಡಿ  : www.peta.org )

About sudina

Check Also

ಈ ಮುದ್ದು ಮುದ್ದು ಸಿಂಹದ ಮರಿಗಳಿಗೆ ಒಂದು ಹೆಸರಿಡಿ…

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ದುಬೈ ಸಫಾರಿಗೆ ಇಬ್ಬರು ಮುದ್ದು ಮುದ್ದು ಅತಿಥಿಗಳ ಆಗಮನವಾಗಿದೆ. ಅಪರೂಪದ …

Leave a Reply

Your email address will not be published. Required fields are marked *

error: Content is protected !!