Sunday , September 23 2018
ಕೇಳ್ರಪ್ಪೋ ಕೇಳಿ
Home / Sandalwood / ಕಿಚ್ಚ ಸುದೀಪ್​ಗೆ ಯೋಗರಾಜ್ ಭಟ್​ ಆಕ್ಷನ್​ ಕಟ್​​​​

ಕಿಚ್ಚ ಸುದೀಪ್​ಗೆ ಯೋಗರಾಜ್ ಭಟ್​ ಆಕ್ಷನ್​ ಕಟ್​​​​

ಬೆಂಗಳೂರು : ಕಿಚ್ಚ ಸುದೀಪ್ ಮತ್ತು ಯೋಗರಾಜ್ ಭಟ್​ ಜೋಡಿ ಮತ್ತೆ ಒಂದಾಗುತ್ತಿದೆ. ಬರೋಬ್ಬರಿ 13 ವರ್ಷಗಳ ಬಳಿಕ ಈ ಜೋಡಿ ಒಟ್ಟಾಗಿ ಕೆಲಸ ಮಾಡಲು ಸಿದ್ಧತೆ ನಡೆಸುತ್ತಿದೆ. ಸ್ವತಃ ಯೋಗರಾಜ್​ ಭಟ್​ ಅವರೇ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತ್ತೆ ರಂಗ ಎಸ್​ಎಸ್​ಎಲ್​ಸಿ ಚಿತ್ರದ ದಿನಗಳು ನೆನಪಾಗಲು ಆರಂಭಿಸಿವೆ…

ರಂಗ ಎಸ್​ಎಸ್​ಎಲ್​ಸಿ… ಕಿಚ್ಚ ಸುದೀಪ್​ ಅಭಿನಯದ ಯೋಗರಾಜ್​ ಭಟ್​ ನಿರ್ದೇಶನದ ಚಿತ್ರ… ಸುಮಾರು 13 ವರ್ಷಗಳ ಹಿಂದೆ ತೆರೆ ಕಂಡಿದ್ದ ಚಿತ್ರವಿದು… ಈ ಚಿತ್ರದ ಮೂಲಕ ಇಬ್ಬರೂ ಭರವಸೆ ಮೂಡಿಸಿದ್ದರು. ಈ ಇಬ್ಬರು ಮೂಡಿಸಿದ್ದ ಭರವಸೆ ಎಷ್ಟು ದೊಡ್ಡ ಪ್ರಮಾಣದಾಗಿತ್ತು ಎಂದರೆ ಸ್ಯಾಂಡಲ್​ವುಡ್​ನಲ್ಲೂ ಇಬ್ಬರೂ ಸಖತ್​ ಬ್ಯುಸಿಯಾಗಿ ಹೋದರು… ಸುದೀಪ್​ ನಾಯಕನಾಗಿ ಎಲ್ಲಾ ಭಾಷೆಗಳ ಚಿತ್ರರಂಗದಲ್ಲಿ ಗುರುತಿಸಲು ಆರಂಭಿಸಿದ್ದರೆ, ಯೋಗರಾಜ್​ ಭಟ್​​ ಸ್ಯಾಂಡಲ್​ವುಡ್​ನಲ್ಲೇ ಒಂದಷ್ಟು ಹಿಟ್ ಚಿತ್ರಗಳನ್ನು ಕೊಡುತ್ತಾ ಹೋದರು… ಹೀಗಾಗಿ, ಇಬ್ಬರೂ ಮತ್ತೆ ಒಟ್ಟಾಗುವ ಅವಕಾಶ ಸಿಗಲೇ ಇಲ್ಲ. ಒಂದಾಗಿ ಕೆಲಸ ಮಾಡುವ ಮನಸ್ಸಿದ್ದರೂ ಬ್ಯುಸಿ ಶೆಡ್ಯೂಲ್ಡ್​ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ.

ಆದರೆ, ಈಗ ಕಾಲ ಬದಲಾಗಿದೆ. ಸುದೀಪ್ ಮತ್ತು ಯೋಗರಾಜ್ ಭಟ್ ಅವರು ಮತ್ತೆ ಒಂದಾಗುವಂತಹ ಸಮಯ ಬಂದಿದೆ.. ಎಲ್ಲಾ ಅಂದುಕೊಂಡಂತೆ ನಡೆದರೆ ಇನ್ನೊಂದು ಸ್ವಲ್ಪ ದಿನದಲ್ಲೇ ಯೋಗರಾಜ್​ ಭಟ್ ಮತ್ತು ಕಿಚ್ಚ ಸುದೀಪ್​ ಒಟ್ಟಾಗಿ ಕೆಲಸ ಆರಂಭಿಸಲಿದ್ದಾರೆ… ಅಂದರೆ, ಬರೋಬ್ಬರಿ 13 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗುತ್ತಿದೆ. ಹೀಗಾಗಿ, ಅಭಿಮಾನಿಗಳು ಕೂಡಾ ಪುಳಕಗೊಂಡಿದ್ದಾರೆ. ಅಭಿಮಾನಿಗಳ ಈ ಖುಷಿಗೆ ಕಾರಣರಾದವರು ನಿರ್ಮಾಪಕ ಎಂ.ಎನ್​.ಕುಮಾರ್​. ಸದ್ಯ ಈ ಪ್ರಾಜೆಕ್ಟ್ ಮಾತುಕತೆಯ ಹಂತದಲ್ಲಿದೆ. ಒಂದು ಹಂತದ ಚರ್ಚೆ ಕೂಡಾ ನಡೆದಿದೆ. ಸ್ಕ್ರಿಪ್ಟ್​ ಫೈನಲ್​ ಆಗಬೇಕಷ್ಟೇ..

ಈಗ ಸುದೀಪ್ ಮತ್ತು ಯೋಗರಾಜ್ ಭಟ್ ಇಬ್ಬರೂ ಬ್ಯುಸಿ ಇದ್ದಾರೆ. ಸುದೀಪ್ ದಿ ವಿಲನ್​ ಶೂಟಿಂಗ್, ಬಿಗ್​ಬಾಸ್​ ಪ್ರಮೋಷನ್​, ಚಿರಂಜೀವಿ ಜೊತೆಗಿನ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇತ್ತ, ಯೋಗರಾಜ್​ ಭಟ್​ ಅವರು ತಮ್ಮ ಮುಗುಳುನಗೆ ಚಿತ್ರ ಸಕ್ಸಸ್​​​ ಖುಷಿಯಲ್ಲಿ ಚಿತ್ರದ ಇನ್ನಷ್ಟು ಪ್ರಚಾರದಲ್ಲಿ ತೊಡಗಿದ್ದಾರೆ. ವಿದೇಶದಲ್ಲೂ ಚಿತ್ರ ಬಿಡುಗಡೆಯ ಸಿದ್ಧತೆಗಳು ನಡೆಯುತ್ತಿದ್ದರು ಯೋಗರಾಜ್​ ಭಟ್ ಅವರು ಅದೇ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಮತ್ತೊಂದು ಸುತ್ತಿನ ಮಾತುಕತೆ ವೇಳೆ ಕತೆಯ ಬಗ್ಗೆಯೂ ಡಿಸ್ಕಷನ್ ಆಗಬಹುದು… ಏನೇ ಆದರೂ, ಇಬ್ಬರು ಜೊತೆಯಾಗಿ ಕೆಲಸ ಮಾಡುವುದಂತೂ ಪಕ್ಕಾ… ಆದರೆ, ಯಾವ ರೀತಿಯ ಚಿತ್ರ ಅದು? ಯಾರೆಲ್ಲಾ ಇರುತ್ತಾರೆ ಎಂಬುದಷ್ಟೇ ಈಗ ನಿರ್ಧಾರವಾಗಬೇಕಾದ ವಿಷಯಗಳು…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!