Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮದುವೆ ಸಿದ್ಧತೆಯ ಖುಷಿಯಲ್ಲಿ ಜಹೀರ್ ಖಾನ್​​

ಮದುವೆ ಸಿದ್ಧತೆಯ ಖುಷಿಯಲ್ಲಿ ಜಹೀರ್ ಖಾನ್​​

ಮುಂಬೈ : ಕ್ರಿಕೆಟಿಗ ಜಹೀರ್​​ ಈಗ ಸಖತ್​ ಖುಷಿಯಲ್ಲಿದ್ದಾರೆ. ಜಹೀರ್​ ಖುಷಿಗೆ ಕಾರಣ ಮದುವೆ ಡೇಟ್​ ಫಿಕ್ಸ್ ಆಗಿರುವುದು… ಮದುವೆ ದಿನಾಂಕ ನಿಗದಿಯಾಗಿರುವ ಖುಷಿ ಒಂದು ಕಡೆ ಆದರೆ, ಪ್ರೀತಿಸಿದವರನ್ನೇ ವರಿಸುವ ಭಾಗ್ಯ ಸಿಕ್ಕಿದ್ದು ಇನ್ನೊಂದು ಖುಷಿ… ಹೀಗಾಗಿ, ಜಹೀರ್​ಗೆ ಈಗ ಡಬಲ್​ ಖುಷಿ… ಜಹೀರ್​ ಬಾಳ ಸಂಗಾತಿಯಾಗಿ ಬರುವವರು ಯಾರು ಗೊತ್ತಾ…? ಚಕ್​ ದೇ ಇಂಡಿಯಾ ಬೆಡಗಿ ಸಾಗರಿಕಾ ಘಾಟ್ಗೆ…

ಬಹುಕಾಲದಿಂದ ಪ್ರೀತಿಗೆ ಬಿದ್ದಿತ್ತು ಈ ಜೋಡಿ… ಇವರ ಪ್ರೀತಿಯ ಬಗ್ಗೆ ಗಾಸಿಪ್ ಕಾಲಂನಲ್ಲಿ ಆಗೊಮ್ಮೆ ಈಗೊಮ್ಮೆ ಬರುತ್ತಿತ್ತಾದರೂ ಒಂದಷ್ಟು ದಿನ ಈ ವಿಷಯವನ್ನು ಈ ಜೋಡಿ ಮುಚ್ಚಿಟ್ಟಿತ್ತು. ಆದರೆ, ಪ್ರೀತಿಯ ವಿಷಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯ ಇಲ್ಲ. ಹಾಗಾಗಿ, ಕೊನೆಗೆ ಜಹೀರ್​ ತಾನು ಸಾಗರಿಕಾ ಜೊತೆ ಪ್ರೀತಿಗೆ ಬಿದ್ದಿರುವುದನ್ನು ಒಪ್ಪಿಕೊಂಡಿದ್ದರು… ಇದೇ ವರ್ಷದ ಮೇ 23ಕ್ಕೆ ಇವರಿಬ್ಬರ ನಿಶ್ಚಿತಾರ್ಥವೂ ನಡೆದಿತ್ತು. ಈ ಮೂಲಕ ಇವರಿಬ್ಬರ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಿತ್ತು.

ನಿಶ್ಚಿತಾರ್ಥಕ್ಕೆ ಹಲವು ಕ್ರಿಕೆಟ್ ತಾರೆಯರು, ಸಿನಿಲೋಕದ ಗಣ್ಯರು ಬಂದು ನವಜೋಡಿಗೆ ಶುಭ ಹಾರೈಸಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ಜೊತೆಯಾಗಿಯೇ ಬಂದು ಸ್ನೇಹಿತನಿಗೆ ಶುಭ ಕೋರಿದ್ದರು. ಇನ್ನು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಮಂದಿರಾ ಬೇಡಿ, ರವೀನಾ ಟಂಡನ್ ಹೀಗೆ ಹಲವು ಖ್ಯಾತನಾಮರೆಲ್ಲಾ ನಿಶ್ಚಿತಾರ್ಥಕ್ಕೆ ಬಂದು ಶುಭ ಹಾರೈಸಿದ್ದರು… ಈಗ ತಮ್ಮ ಪ್ರಣಯವನ್ನು ಮತ್ತೊಂದು ಘಟ್ಟಕ್ಕೆ ಕೊಂಡೊಯ್ಯಲು ಈ ಜೋಡಿ ನಿರ್ಧರಿಸಿದ್ದು, ಮದುವೆ ದಿನಾಂಕ ಕೂಡಾ ನಿಗದಿಯಾಗಿದೆ. ನವೆಂಬರ್​ 27ಕ್ಕೆ ಇವರಿಬ್ಬರು ಸತಿಪತಿಗಳಾಗಲಿದ್ದಾರೆ… ಅದ್ಧೂರಿಯಾಗಿಯೇ ದಾಂಪತ್ಯಕ್ಕೆ ಕಾಲಿಡಲಿರುವ ಈ ಜೋಡಿ ರಿಸೆಪ್ಶನ್ ಕೂಡಾ ಅವತ್ತೇ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ…

ಮದುವೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಸಿದ್ಧತೆಗಳು ಕೂಡಾ ಭರ್ಜರಿಯಾಗಿ ಸಾಗುತ್ತಿದೆ. ಅತಿಥಿಗಳ ಪಟ್ಟಿ ಕೂಡಾ ಸಿದ್ಧ ಮಾಡುವುದರಲ್ಲಿ ಎರಡೂ ಕುಟುಂಬದವರು ತೊಡಗಿದ್ದಾರೆ. ಬಹುತೇಕ ಮುಂಬೈಯಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಸಖತ್ ಅದ್ಧೂರಿಯಾಗಿಯೇ ಮದುವೆ ಮಾಡಿಕೊಳ್ಳಲು ಇವರಿಬ್ಬರು ನಿರ್ಧರಿಸಿದ್ದಾರೆ. ಜಹೀರ್​ ಕ್ರಿಕೆಟ್ ಲೋಕದ ತಾರೆ, ಸಾಗರಿಕಾ ಸಿನಿಲೋಕದ ಬೆಡಗಿ. ಹೀಗಾಗಿ, ಇವರಿಬ್ಬರ ಮದುವೆಗೆ ಕ್ರೀಡೆ ಮತ್ತು ಸಿನಿ ಲೋಕದ ಖ್ಯಾತನಾಮರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಹೀರ್ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಆದರೆ, ಕ್ರಿಕೆಟ್​ನಿಂದ ಇವರಿನ್ನೂ ದೂರವಾಗಿಲ್ಲ. ಇನ್ನು, ಸಾಗರಿಕಾ ಕೂಡಾ ನಟನೆ, ಮಾಡೆಲಿಂಗ್​ನಲ್ಲಿ ಬ್ಯುಸಿ ಇದ್ದಾರೆ. 2007ರಲ್ಲಿ ಶಾರೂಖ್ ಖಾನ್ ಅಭಿನಯದ ‘ಚಕ್​ದೇ ಇಂಡಿಯಾ’ ಸಿನಿಮಾದಲ್ಲಿ ಹಾಕಿ ಆಟಗಾರ್ತಿಯ ಪಾತ್ರ ಮಾಡುವ ಮೂಲಕ ಸಾಗರಿಕಾ ಚಿತ್ರರಂಗ ಪ್ರವೇಶಿಸಿದ್ದರು. ಇದಾದ ಬಳಿಕ ಸಾಗರಿಕಾ ಕೆಲ ಮರಾಠಿ, ಪಂಜಾಬಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ಇವರು ರಾಷ್ಟ್ರಮಟ್ಟದ ಅಥ್ಲೀಟ್ ಕೂಡಾ ಹೌದು… ಅದೇನೇ ಆದರೂ ಹೊಸ ಜೀವನದ ಸಿದ್ಧತೆಯಲ್ಲಿ ಈ ಜೋಡಿ ಇದೆ. ಇವರ ಭವಿಷ್ಯ ಉಜ್ವಲವಾಗಿರಲಿ ಎಂಬುದೇ ಎಲ್ಲರ ಹಾರೈಕೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!