Thursday , December 14 2017
Home / Sandalwood / ಸಿನಿಲೋಕಕ್ಕೆ ಅಂಬರೀಷ್​ ಪುತ್ರ…?

ಸಿನಿಲೋಕಕ್ಕೆ ಅಂಬರೀಷ್​ ಪುತ್ರ…?

ಬೆಂಗಳೂರು : ರೆಬಲ್​ ಸ್ಟಾರ್ ಅಂಬರೀಷ್​ ಪುತ್ರ ಅಭಿಷೇಕ್ ಗೌಡ ಚಿತ್ರರಂಗಕ್ಕೆ ಬರುತ್ತಾರಾ…? ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬೋದಾದರೆ ಹೌದು. ಅಂಬರೀಷ್ ಮತ್ತು ಸುಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್​​ ತಾನೂ ಬಣ್ಣದ ಲೋಕದಲ್ಲಿ ಮಿಂಚುವ ಆಸೆಯನ್ನು ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ, ಮಗನ ಆಸೆಗೆ ಹೆತ್ತವರು ಕೂಡಾ ಸರಿ ಅಂತ ಹೇಳಿದ್ದಾರಂತೆ. ಜೊತೆಗೆ ಆಕ್ಟಿಂಗ್ ಕೋರ್ಸ್ ಮಾಡುವುದಕ್ಕೂ ಸೂಚನೆ ಕೊಟ್ಟಿದ್ದಾರಂತೆ…

ಯಾವುದೇ ಚಿತ್ರರಂಗದಲ್ಲಿ ಸ್ಟಾರ್​ ನಟರ, ನಿರ್ದೇಶಕರ, ನಿರ್ಮಾಪಕರ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸದಲ್ಲ. ಎಲ್ಲಾ ಕಾಲದಲ್ಲಿ ಇದು ನಡೆದುಕೊಂಡು ಬಂದಿದ್ದೆ. ಅಭಿಷೇಕ್ ಈ ಸಾಲಿಗೆ ಮತ್ತೊಂದು ಸೇರ್ಪಡೆ ಅಷ್ಟೇ. ಆದರೆ, ಅಭಿಷೇಕ್​ ಮಾಡುತ್ತಿರುವ ಚಿತ್ರ ಯಾವುದು? ಯಾವಾಗ ಈ ಚಿತ್ರ ಶುರುವಾಗುತ್ತದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್​…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!