Wednesday , January 24 2018
Home / News NOW / ಆದಾಯ ತೆರಿಗೆ ಇಲಾಖೆ ಅಧಿಕಾರಿ ಪುತ್ರನ ಅಪಹರಣ : ವೀಡಿಯೋ ಮೂಲಕ 50 ಲಕ್ಷ ರೂಪಾಯಿಗೆ ಬೇಡಿಕೆ
Buy Bitcoin at CEX.IO

ಆದಾಯ ತೆರಿಗೆ ಇಲಾಖೆ ಅಧಿಕಾರಿ ಪುತ್ರನ ಅಪಹರಣ : ವೀಡಿಯೋ ಮೂಲಕ 50 ಲಕ್ಷ ರೂಪಾಯಿಗೆ ಬೇಡಿಕೆ

ಬೆಂಗಳೂರು : ದುಷ್ಕರ್ಮಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಪುತ್ರನನ್ನು ಅಪಹರಿಸಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಶರತ್​​ ಅಪಹರಣಕ್ಕೊಳಗಾದ ಯುವಕ ಎಂದು ಗೊತ್ತಾಗಿದೆ.

ಶರತ್​ ಕೆಂಗೇರಿ ಉಳ್ಳಾಲದಲ್ಲಿರುವ ಐಟಿ ಅಧಿಕಾರಿ ನಿರಂಜನ್ ಎಂಬವರ ಪುತ್ರ . 2 ದಿನಗಳ ಹಿಂದೆ ದುಷ್ಕರ್ಮಿಗಳು ಶರತ್​ನನ್ನು ಅಪಹರಿಸಿದ್ದು, 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ವೀಡಿಯೋ ಮಾಡಿ ಶರತ್​ನಿಂದಲೇ ತಂದೆ, ತಾಯಿಗೆ ವಾಟ್ಸ್​ ಆಪ್​ ಮೂಲಕ ಸಂದೇಶ ಕಳುಹಿಸಿದ್ದಾರೆ.

ವೀಡಿಯೋದಲ್ಲಿರುವ ಶರತ್

ವೀಡಿಯೋದಲ್ಲಿ ಶರತ್ ಹೇಳಿದ್ದು : ಹಲೋ ಅಪ್ಪ. ನಿಮ್ಮಿಂದ ಅನುಭವಿಸಿರುವವರು ನನ್ನನ್ನು ಕಿಡ್ಯ್ನಾಪ್ ಮಾಡಿದ್ದಾರೆ. ಅವರಿಗೆ 50 ಲಕ್ಷ ದುಡ್ಡು ಬೇಕಂತೆ. ನಾಳೆ ಫೋನ್ ಮಾಡ್ತಾರೆ. ನನ್ನನ್ನು ಹೆವಿ ಟಾರ್ಚರ್​ ಕೊಡ್ತಾವ್ರೆ. ಪ್ಲೀಸ್ ಹೇಗಾದರೂ ತಂದುಕೊಡಿ. ಪ್ಲೀಸ್​. ಹೇಗಾದ್ರು ಮಾಡಿ ಆದಷ್ಟು ಬೇಗ ಅರೇಂಜ್ ಮಾಡಿ. ನನ್ನನ್ನು ಕಿಡ್ನ್ಯಾಪ್ ಮಾಡಿ ಇಟ್ಟುಕೊಂಡಿದ್ದಾರೆ. ನಾನು ಇವ್ರ ಜೊತೆನೇ ಇರ್ತೀನಿ. ಆದಷ್ಟು ಬೇಗ ತಂದುಕೊಡಿ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!