Saturday , November 17 2018
ಕೇಳ್ರಪ್ಪೋ ಕೇಳಿ
Home / News NOW / ವಿಧಾನಸೌಧಕ್ಕೆ ಸೂಟ್​ಕೇಸ್​ ತೆಗೆದುಕೊಂಡು ಹೋದರೆ ಮಾತ್ರ ಕೆಲಸ : ಡಾ.ಮಲ್ಲಿಕಾ ಘಂಟಿ

ವಿಧಾನಸೌಧಕ್ಕೆ ಸೂಟ್​ಕೇಸ್​ ತೆಗೆದುಕೊಂಡು ಹೋದರೆ ಮಾತ್ರ ಕೆಲಸ : ಡಾ.ಮಲ್ಲಿಕಾ ಘಂಟಿ

ಬಳ್ಳಾರಿ : ವಿಧಾನಸೌಧಕ್ಕೆ ಸೂಟ್​ಕೇಸ್​ ತುಂಬಾ ಹಣ ತುಂಬಿಕೊಂಡು ಹೋದರೆ ಮಾತ್ರ ಯಾವುದೇ ಕೆಲಸ ಆಗುತ್ತದೆ. ಇದರಿಂದಾಗಿಯೇ ವಿಶ್ವ ವಿದ್ಯಾನಿಲಯದ ಅಭಿವೃದ್ಧಿಯಾಗುತ್ತಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಆರೋಪಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ನುಡಿ ಹಬ್ಬದಲ್ಲಿ ಮಾತನಾಡಿದ ಮಲ್ಲಿಕಾ ಘಂಟಿ ಈ ಆರೋಪ ಮಾಡಿದ್ದಾರೆ.

ಮಂಗಳವಾರ ಈ ನುಡಿಹಬ್ಬವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಿದ್ದರು. ಈ ವೇಳೆ, ವಿವಿಯ ಸಿಬ್ಬಂದಿ ಮತ್ತು ಅದ್ಯಾಪಕರ ಕೊರತೆಯನ್ನು ನೀಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ಇವತ್ತು ಎರಡನೇ ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮಲ್ಲಿಕಾ ಘಂಟಿ ಅವರು, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ : ಇನ್ನು, ಮಲ್ಲಿಕಾ ಘಂಟಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮಲ್ಲಿಕಾ ಘಂಟಿ ಇಂತಹ ಹೇಳಿಕೆ ಯಾಕೆ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ. ಅವರಿಗೆ ಯಾರಿಂದ ನೋವಾಗಿದೆಯೋ ಗೊತ್ತಿಲ್ಲ. ಹೇಳಿಕೆ ಕುರಿತು ಮಲ್ಲಿಕಾ ಘಂಟಿಯವರಿಂದ ಸ್ಪಷ್ಟೀಕರಣ ಕೇಳುತ್ತೇನೆ. ಈ ರೀತಿಯ ಹೇಳಿಕೆ ಕೊಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!