Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಪ್ರಿಯಾಂಕಾ ಕ್ಷಮೆಯಾಚನೆ : ಮನ ಬಂದಂತೆ ಮಾತನಾಡಿ ವಿವಾದಕ್ಕೆ ಗುರಿಯಾದ ಬೆಡಗಿ

ಪ್ರಿಯಾಂಕಾ ಕ್ಷಮೆಯಾಚನೆ : ಮನ ಬಂದಂತೆ ಮಾತನಾಡಿ ವಿವಾದಕ್ಕೆ ಗುರಿಯಾದ ಬೆಡಗಿ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ವಿವಾದಕ್ಕೆ ಗುರಿಯಾಗಿದ್ದಾರೆ. ಸಿಕ್ಕಿಂ ವಿರುದ್ಧ ಮನಸ್ಸಿಗೆ ತೋಚಿದಂತೆ ಮಾತಾನಡಿರುವ ಈ ಬೆಡಗಿ ಅಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿಕ್ಕಿ ಬಂಡಾಯದಿಂದ ಸಂಕಷ್ಟದಲ್ಲಿರುವ ರಾಜ್ಯ ಎಂದು ಟೊರೊಂಟೋದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದ ವೇಳೆ ಪ್ರಿಯಾಂಕಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು. ಯಾವಾಗ ಜನರ ಕೋಪದ ಬಿಸಿ ಪ್ರಿಯಾಂಕಾಗೇ ತಟ್ಟಿತೋ ತಕ್ಷಣ ಎಚ್ಚೆತ್ತ ಅವರು ಸಿಕ್ಕಿಂ ಪ್ರವಾಸೋದ್ಯಮ ಸಚಿವಾಲಯಕ್ಕೆ ಕ್ಷಮಾಪಣೆ ಪತ್ರವನ್ನು ಬರೆದಿದ್ದರು.


ಈ ವರ್ಷದ ಆರಂಭದಲ್ಲಿ ಪ್ರಿಯಾಂಕಾ ತನ್ನ `ಪಹುನಾ: ದಿ ಲಿಟಿಲ್ ವಿಸಿಟರ್ಸ್’ ಚಿತ್ರಕ್ಕಾಗಿ ಸಿಕ್ಕಿಂ ಪ್ರವಾಸೋದ್ಯಮ ಇಲಾಖೆಯಿಂದ 90 ಲಕ್ಷ ರೂಪಾಯಿಯಷ್ಟು ಅನುದಾನ ಪಡೆದಿದ್ದರು. ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪ್ರಿಯಾಂಕಾ, ಪಹುನಾ: ದಿ ಲಿಟಿಲ್ ವಿಸಿಟರ್ಸ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಿಕ್ಕಿಂನಲ್ಲಿ ಬಂಡಾಯದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದ್ದರು. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಪ್ರಿಯಾಂಕಾ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ಅಲ್ಲದೆ, ವಿಶ್ವದಲ್ಲೇ ಸಿಕ್ಕಿಂ ಶಾಂತಿಯುತ ರಾಜ್ಯ ಎಂದು ಹೇಳಿದ್ದರು. ಇದಾದ ಬಳಿಕವೇ ಪ್ರಿಯಾಂಕಾ ತನ್ನ ಕ್ಷಮಾಪಣಾ ಪತ್ರವನ್ನು ಬರೆದದ್ದು…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!