Saturday , October 20 2018
ಕೇಳ್ರಪ್ಪೋ ಕೇಳಿ
Home / Sandalwood / ಭರ್ಜರಿಯಾಗಿದೆ ಭರ್ಜರಿ : ಧ್ರುವ ಅಭಿಮಾನಿಗಳಿಗೆ ಫುಲ್ ಮೀಲ್ಸ್​​

ಭರ್ಜರಿಯಾಗಿದೆ ಭರ್ಜರಿ : ಧ್ರುವ ಅಭಿಮಾನಿಗಳಿಗೆ ಫುಲ್ ಮೀಲ್ಸ್​​

ಬೆಂಗಳೂರು : ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಡಿಂಪಲ್​ ಕ್ವೀನ್​ ರಚಿತಾ ರಾಮ್​ ಈಗ ಭರ್ಜರಿಯಾಗಿಯೇ ಥಿಯೇಟರ್​ಗೆ ಲಗ್ಗೆ ಇಟ್ಟಿದ್ದಾರೆ… ಭರ್ಜರಿಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ… ಪ್ರೇಕ್ಷಕರು ಬಹಳ ಅದ್ಧೂರಿಯಾಗಿಯೇ ಈ ಚಿತ್ರವನ್ನು ಸ್ವಾಗತಿಸಿದ್ದಾರೆ…  ಈ ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಆಗಿದೆ. ಆದರೂ, ಚಿತ್ರದ ಬಗೆಗಿನ ಕ್ರೇಜ್​ ಒಂದಿನಿತೂ ಕಡಿಮೆ ಆಗಿರಲಿಲ್ಲ. ಅದು ಚಿತ್ರದ ಹೆಚ್ಚುಗಾರಿಕೆ. ಅಲ್ಲದೆ, ಇತ್ತೀಚೆಗೆ ರಿಲೀಸ್ ಆಗಿರುವ ಟೀಸರ್​, ಸಾಂಗ್ಸ್​ಗಳು ಜನರ ಮನಸ್ಸು ಗೆಲ್ಲುವಲ್ಲಿ ಸಕ್ಸಸ್​ ಆಗಿತ್ತು… ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಚೌತಿ ಸಂದರ್ಭದಲ್ಲೇ ರಿಲೀಸ್ ಆಗಬೇಕಾಗಿತ್ತು. ಆದರೆ, ಈ ದಿನಾಂಕ ಮುಂದಕ್ಕೆ ಹೋಗಿ ಈಗ ಚಿತ್ರ ತೆರೆ ಕಂಡಿದ್ದು, ಭರ್ಜರಿ ಓಪನಿಂಗ್ ಸಿಕ್ಕಿದೆ…

ಇದೊಂದು ಫ್ಯಾಮಿಲಿ ಎಂಟಟೈನರ್​. ಸೆಂಟಿಮೆಂಟ್​​, ಕಾಮಿಡಿ, ಆಕ್ಷನ್ ಎಲ್ಲವನ್ನೂ ಹದವಾಗಿ ಚಿತ್ರದಲ್ಲಿ ಬಳಸಲಾಗಿದೆ. ಡಬಲ್ ಮೀನಿಂಗ್ ಡೈಲಾಗ್​ಗಳು ಇಲ್ಲದೇ ಇರುವುದು ಕೂಡಾ ಈ ಭರ್ಜರಿಯ ಹೆಚ್ಚುಗಾರಿಕೆ… ಇದು ರೊಮ್ಯಾಂಟಿಕ್​ ಆಕ್ಷನ್ ಡ್ರಾಮಾ. ಯುವಕನೊಬ್ಬನ ಜೀವನದಲ್ಲಿ ಅನಿರೀಕ್ಷಿತ ತಿರುವುಗಳೇ ಈ ಚಿತ್ರದ ಹೈಲೈಟ್ಸ್​… ಹೀಗೆ ಮೂವರು ಬಳುಕುವ ಬಳ್ಳಿಗಳು ಇಲ್ಲಿ ಧ್ರುವಗೆ ಜೊತೆಯಾಗಿದ್ದಾರೆ… ಇದು ಮಹಿಳಾ ಪ್ರಧಾನ ಚಿತ್ರ ಎಂದರೂ ತಪ್ಪಿಲ್ಲ. ಮೂವರು ಚೆಲುವೆಯರನ್ನು ಭೇಟಿಯಾಗುವ ನಾಯಕನ ಬದುಕಿನಲ್ಲಿ ಆಗುವ ಕೆಲ ಘಟನೆಯಲ್ಲಿ ಈ ನಾಯಕಿಯರೇ ಪ್ರಧಾನ ಪಾತ್ರ ವಹಿಸುತ್ತಾ ಸಾಗುತ್ತಾರೆ…

ಧ್ರುವ ಅಭಿನಯದ ಮೂರನೇ ಚಿತ್ರ ಇದು. ಈ ಹಿಂದೆ ಬಂದ ಅದ್ಧೂರಿ ಮತ್ತು ಬಹದ್ದೂರ್​ ಚಿತ್ರ ಧ್ರುವಗೆ ಸಖತ್ ಹೆಸರು ತಂದು ಕೊಟ್ಟಿದ್ದವು. ಮಾಡಿದ್ದು ಮೂರು ಚಿತ್ರಗಳಾದರೂ ಈ ಎಲ್ಲಾ ಚಿತ್ರಗಳು ಧ್ರುವಗೆ ಸ್ಯಾಂಡಲ್​ವುಡ್​ನಲ್ಲೊಂದು ಭರ್ಜರಿ ಸ್ಥಾನವನ್ನು ತಂದುಕೊಟ್ಟಿದ್ದವು… ಈ ಹಿಂದಿನ ಎರಡು ಚಿತ್ರದಲ್ಲಿ ಧ್ರುವಗೆ ರಾಧಿಕಾ ಪಂಡಿತ್ ನಾಯಕಿಯಾಗಿದ್ದರೆ, ಈ ಚಿತ್ರದಲ್ಲಿ ಮೂವರು ಸುಂದರಿಯರಿದ್ದಾರೆ…

ಡಿಂಪಲ್ ಕ್ವೀನ್ ರಚಿತಾ ರಾಮ್​, ಹರಿಪ್ರಿಯಾ ಮತ್ತು ವೈಶಾಲಿ ದೀಪಕ್​ ಇಲ್ಲಿ ಧ್ರುವಗೆ ಜೊತೆಯಾಗಿದ್ದಾರೆ. ಎಲ್ಲರ ನಟನೆಯೂ ಸೂಪರ್​. ನಿರ್ದೇಶಕ ಚೇತನ್ ಕುಮಾರ್ ಧ್ರುವ ಅವರನ್ನು ಮತ್ತೊಂದು ಮಟ್ಟಕ್ಕೆ ಕೊಂಡು ಹೋಗಿದ್ದಾರೆ. ಧ್ರುವ ನಟನೆಯ ಬಗ್ಗೆ ಎರಡು ಮಾತಿಲ್ಲ. ಆಕ್ಷನ್​ ಸೀನ್​ಗಳಲ್ಲೂ ಧ್ರುವ ಚಿಂದಿ ಉಡಾಯಿಸುತ್ತಾರೆ… ಇನ್ನು, ಇತರ ನಟರಾದ ಸಾಯಿಕುಮಾರ್, ರವಿಶಂಕರ್ ಪಾತ್ರದ ಪರಕಾಯವೇ ಮಾಡಿದ್ದಾರೆ. ಸರಳ ಕತೆಯನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತರುವಲ್ಲಿ ಡೈರೆಕ್ಟರ್​​​​ ಚೇತನ್​ ಸಕ್ಸಸ್ ಆಗಿದ್ದಾರೆ.

ಇನ್ನು, ಪರಭಾಷಾ ಚಿತ್ರಗಳನ್ನೇ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳಲ್ಲೂ ಭರ್ಜರಿ ರಿಲೀಸ್ ಆಗಿದೆ. ಬೆಂಗಳೂರಿನ ರೆಕ್ಸ್​, ಕಾವೇರಿ ಹಾಗೂ ಊರ್ವಶಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಒಟ್ಟಾರೆ ಈ ಚಿತ್ರ ಧ್ರುವ ಫ್ಯಾನ್ಸ್​ಗೆ ಫುಲ್ ಮೀಲ್ಸ್​ ಎಂದರೂ ತಪ್ಪಿಲ್ಲ.

 

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!