Thursday , December 14 2017
Home / Sudina Special / ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ ಹೆಮ್ಮೆಗೆ ಇನ್ನೊಂದು ಗರಿ ಸಂದಿದೆ… ಇತ್ತೀಚೆಗೆ ನಡೆದ ಅಧ್ಯಯನ ಸೊನ್ನೆಯ ಆವಿಷ್ಕಾರದ ದಿನಗಳನ್ನು ಈಗ ಗುರುತಿಸುವುದಕ್ಕಿಂತ ಮತ್ತೆ 500 ವರ್ಷಗಳಷ್ಟು ಹಿಂದಕ್ಕೆ ಕೊಂಡು ಹೋಗಿದೆ.

ಭಾರತದ ಪ್ರಾಚೀನ ಬಖ್ಯಾಲಿ ಎಂಬ ಹಸ್ತಪ್ರತಿಯಲ್ಲಿ ಸೊನ್ನೆಯಂತಹ ಸಂಕೇತವನ್ನು ಬಳಸಲಾಗಿದೆ. ಗಣಿತಕ್ಕೆ ಸಂಬಂಧಿಸಿದಂತ ಅಂಶ ಕೂಡಾ ಇಲ್ಲಿವೆ. ಬರ್ಚ್​ ಎಂಬ ಮರದ ತೊಗಟೆಯಲ್ಲಿ ಇವುಗಳನ್ನು ಬರೆಯಲಾಗಿದೆ. ಸಂಸ್ಕೃತದಲ್ಲಿ ಈ ಬರಹ ಇದೆ. ಬೌದ್ಧ ಧರ್ಮಗುರುಗಳ ತರಬೇತಿ ಕೈಪಿಡಿ ಇದಾಗಿರಬಹುದು ಎಂದು ಆಕ್ಸಫರ್ಡ್​ ಯೂನಿವರ್ಸಿಯ ಮಾರ್ಕಸ್ ಡು ಸಾಟೊಯ್ ಹೇಳಿದ್ದಾಗಿ ಪ್ರಖ್ಯಾತ ಆಂಗ್ಲ ದೈನಿಕ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ.

ಈ ಹಸ್ತಪ್ರತಿ 1881ರಲ್ಲಿ ಬಖ್ಶಾಲಿಯಲ್ಲಿ ರೈತರಿಗೆ ಮೊದಲು ಸಿಕ್ಕಿತ್ತು. ಹೀಗಾಗಿ, ಈ ಹಸ್ತಪ್ರತಿ ಸಿಕ್ಕಿದ ಊರಿನ ಹೆಸರನ್ನೇ ಇದಕ್ಕೆ ಇಡಲಾಗಿದೆ. ಸದ್ಯ ಈ ಊರು ಪಾಕಿಸ್ತಾನಕ್ಕೆ ಸೇರಿದೆ. 1902ರಿಂದ ಇಲ್ಲಿ ತನಕ ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯದ ಬೋಡ್ಲಿಯನ್ ಲೈಬ್ರರಿಯಲ್ಲಿ ಈ ಹಸ್ತಪ್ರತಿ ಇದೆ.


ಈ ಹಸ್ತಪ್ರತಿ ಸುಮಾರು 9ನೇ ಶತಮಾನದ್ದು ಎಂದು ಇದುವರೆಗೆ ನಂಬಲಾಗಿತ್ತು. ಆದರೆ, ಈಗಿನ ಅಧ್ಯಯನದ ಪ್ರಕಾರ, ಇಲ್ಲಿನ ಅಂಶಗಳನ್ನು ಗಮಿಸಿದಾಗ ಇದು ಇನ್ನಷ್ಟು ಹಳೆಯದ್ದು ಎಂದು ಗೊತ್ತಾಗಿದೆ. ಸುಮಾರು 3 ಅಥವಾ 4ನೇ ಶತಮಾನದ ಅವಧಿಯಲ್ಲಿ ಈ ಹಸ್ತಪ್ರತಿ ರಚನೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಸ್ತಪ್ರತಿ ಸೊನ್ನೆಯ ಇತಿಹಾಸದ ಮೇಲೂ ದೊಡ್ಡ ಬೆಳಕು ಚೆಲ್ಲಿದೆ. ಗ್ವಾಲಿಯರ್​​ ದೇವಾಲಯದಲ್ಲಿ ಮೊದಲು ಸೊನ್ನೆಯ ಸಂಕೇತ ಪತ್ತೆಯಾಗಿತ್ತು ಎಂದು ನಾವು ನಂಬಿದ್ದೆವು. ಆದರೆ, ಈ ಹಸ್ತಪ್ರತಿಯಲ್ಲೂ ಸೊನ್ನೆಯ ಬಳಕೆ ಇರುವುದು ಕಂಡು ಬರುತ್ತಿದೆ. ಹೀಗಾಗಿ, ಸೊನ್ನೆ ಇನ್ನಷ್ಟು ಪುರಾತನ ಕಾಲದಲ್ಲಿ ಬಳಕೆಯಲ್ಲಿತ್ತು ಎಂಬ ವಾದಕ್ಕೆ ಇದು ಪುಷ್ಟಿ ಕೊಟ್ಟಿದೆ.

ಸೊನ್ನೆಯ ಮೂಲ ರೂಪವೇ ಬಿಂದು…! : ಸೊನ್ನೆಯನ್ನು ಡಾಟ್​(ಬಿಂದು)ರೂಪದಲ್ಲಿ ಇಲ್ಲಿ ಬಳಸಲಾಗಿದೆ. ಈ ಬಖ್ಶಾಲಿ ಹಸ್ತಪ್ರತಿಯಲ್ಲೂ ಡಾಟ್​​​ಗಳನ್ನು ಸೊನ್ನೆಯ ಬದಲಾಗಿ ಬಳಸಿದ್ದನ್ನು ಕಾಣಬಹುದು.

About sudina

Check Also

ಡೆಡ್ಲಿ ಬ್ಲೂವೇಲ್ : ಏನಿದು ಆಟ…? : ಮಕ್ಕಳು ಬಲಿಯಾಗುವುದು ಯಾಕೆ?, ಹೇಗೆ?

ಈಗ ಎಲ್ಲಿ ನೋಡಿದರೂ `ಬ್ಲೂವೇಲ್’ ಎಂಬ ಡೆಡ್ಲಿ ಗೇಮ್‍ನದ್ದೇ ಸದ್ದು. ಡೆಡ್ಲಿ ಚಾಲೆಂಜ್‍ಗಳ್ಳುಳ್ಳ ಈ 50 ದಿನಗಳ ಆಟ ಮುಗ್ಧ …

Leave a Reply

Your email address will not be published. Required fields are marked *

error: Content is protected !!